ಚಿಕ್ಕಮಗಳೂರುಸಾರ್ವಜನಿಕರು ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗೌರಿ-ಗಣೇಶ ಮೂರ್ತಿಗಳನ್ನೇ ಖರೀದಿಸುವಂತೆ ನಗರಸಭೆ ಆಯುಕ್ತ ಬಿ.ಸಿ ಬಸವರಾಜ್ ಮನವಿ ಮಾಡಿದ್ದಾರೆ.

ಗಣೇಶ ಮೂರ್ತಿಗಳನ್ನು ತಯಾರಿಸುತ್ತಿರುವ ಬಸವನಹಳ್ಳಿ ಕುಂಬಾರಬೀದಿಗೆ ಭೇಟಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಾರ್ವಜನಿಕರು ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗೌರಿ-ಗಣೇಶ ಮೂರ್ತಿಗಳನ್ನೇ ಖರೀದಿಸುವಂತೆ ನಗರಸಭೆ ಆಯುಕ್ತ ಬಿ.ಸಿ ಬಸವರಾಜ್ ಮನವಿ ಮಾಡಿದ್ದಾರೆ.

ಹಬ್ಬದ ಪ್ರಯುಕ್ತ ನಗರದ ಹಲವೆಡೆ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿರುವ ಬಸವನಹಳ್ಳಿ ಕುಂಬಾರಬೀದಿ ಸೇರಿದಂತೆ ವಿವಿಧ ಭಾಗಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು.

ಜಿಲ್ಲೆಯ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಖರೀದಿಸದೆ ಜಿಲ್ಲೆಯಲ್ಲಿ ಮಣ್ಣಿ ನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿಸುವ ಮೂಲಕ ನಗರದಲ್ಲಿ ಗಣೇಶಮೂರ್ತಿ ತಯಾರಕರಿಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.ಜಲಚರಗಳಿಗೆ ಕಂಟಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳಿಗೆ ಬಳಸುವ ಪೇಂಟ್‌ಗಳಲ್ಲಿ ಸೀಸದಂತಹ ರಾಸಾಯನಿಕ ಗಳಿರುತ್ತದೆ ಇದು ನೀರಿನಲ್ಲಿ ಸುಲಭವಾಗಿ ಕರಗಲ್ಲ ಕೆಮಿಕಲ್ ಮತ್ತು ಬಣ್ಣಗಳು ನೀರಿನಲ್ಲಿರುವ ಮೀನು ಹಾಗೂ ಇತರ ಜೀವಿ ಗಳ ಸಾವಿಗೆ ಕಾರಣವಾಗುತ್ತದೆ .ರಾಸಾಯನಿಕ ಮುಕ್ತ ನೈಸರ್ಗಿಕ ಬಣ್ಣಗಳಾದ ಅರಿಶಿಣ, ಕುಂಕುಮ ಅಥವಾ ತರಕಾರಿ ಗಳಿಂದ ತಯಾರಿಸಿದ ಬಣ್ಣ ಬಳಸಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಹೊರಜಿಲ್ಲೆಗಳಿಂದ ಬರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಮಿಶ್ರಿತ ಗಣೇಶ ಮೂರ್ತಿಗಳನ್ನು ನಗರಕ್ಕೆ ತರದಂತೆ ಸಂಪೂರ್ಣ ನಿಷೇಧಿಸಲಾಗಿದೆ. ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ ಎಂದರು.

ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಕಂಡು ಬಂದಲ್ಲಿ ಅವರ ವಿರುದ್ಧ ದಂಡ ವಿಧಿಸುವ ಜೊತೆಗೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಗಣೇಶ ಮೂರ್ತಿ ವಿಸರ್ಜನೆಗೆ ಕೋಟೆ ಕೆರೆಯಲ್ಲಿ ಕಲ್ಯಾಣಿ ನಿರ್ಮಿಸಲಾಗಿದ್ದು, ಗಣೇಶ ಮೂರ್ತಿ ಅಲ್ಲಿಯೇ ವಿಸರ್ಜನೆ ಮಾಡು ವಂತೆ ತಿಳಿಸಿ ಸಾರ್ವಜನಿಕರ ತಮ್ಮ ಮನೆ ಗಣೇಶ ವಿಸರ್ಜನೆಗೆ ಅನುಕೂಲವಾಗುವ ರೀತಿಯಲ್ಲಿ ಹನುಮಂತಪ್ಪ ಸರ್ಕಲ್, ಬಸವನಹಳ್ಳಿ ಕೆರೆ ಕ್ರಾಸ್, ಕೋಟೆ ಸರ್ಕಲ್, ಆಜಾದ್ ಪಾರ್ಕ್ ಸರ್ಕಲ್, ಕೆಇಬಿ ಸರ್ಕಲ್ ಹಾಗೂ ನಗರದ ವಿವಿಧ ಪ್ರಮುಖ ಭಾಗಗಳಲ್ಲಿ ಟ್ರಾಕ್ಟರ್‌ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ವೇಳೆ ಪರಿಸರ ಅಭಿಯಂತರ ವೆಂಕಟೇಶ್, ಆರೋಗ್ಯ ನಿರೀಕ್ಷಕ ನಾಗಪ್ಪ, ಈಶ್ವರ್, ರಂಗಪ್ಪ, ವೆಂಕಟೇಶ್, ಅಣ್ಣಯ್ಯ ಉಪಸ್ಥಿತರಿದ್ದರು.