ಬದುಕು ಕಟ್ಟಿಕೊಡುವ ಶಿಕ್ಷಣಕ್ಕೆ ಆದ್ಯತೆ ನೀಡಿ

| Published : Mar 04 2024, 01:18 AM IST

ಸಾರಾಂಶ

ದಾಬಸ್‌ಪೇಟೆ: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಮಾನವೀಯ ಮೌಲ್ಯಗಳು ಅವಶ್ಯಕತೆ ಹೆಚ್ಚಾದಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಎಚ್‌ಎಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿ ತರಬೇತಿ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ರಾಜಗೋಪಾಲ್ ತಿಳಿಸಿದರು.

ದಾಬಸ್‌ಪೇಟೆ: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಮಾನವೀಯ ಮೌಲ್ಯಗಳು ಅವಶ್ಯಕತೆ ಹೆಚ್ಚಾದಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಎಚ್‌ಎಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿ ತರಬೇತಿ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ರಾಜಗೋಪಾಲ್ ತಿಳಿಸಿದರು.

ಪಟ್ಟಣದ ಹೊಯ್ಸಳ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಲಾ ಉತ್ಸವ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಬದುಕು ಕಟ್ಟಿಕೊಡುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮೊಬೈಲ್ ಹಾಗೂ ದುಶ್ಚಟಗಳಿಂದ ದೂರವಿದ್ದು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಬೇಕು ಎಂದರು.

ಪ್ರಾಂಶುಪಾಲ ಗೌರಿಶಂಕರ್ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಸಮಸ್ಯೆ ಬಂದರೂ ಧೃತಿಗೆಡದೆ ಧೈರ್ಯದಿಂದ ಮುನ್ನಡೆಯಬೇಕು. ಸಮಯ ವ್ಯರ್ಥ ಮಾಡದೇ ತಮ್ಮ ಗುರಿ ಸಾಧಿಸಬೇಕು. ಶಿಕ್ಷಣದ ಜೊತೆಗೆ ಏಕಾಗ್ರತೆ ಚಿಂತನೆ ಆಲೋಚನೆ ಅವಶ್ಯ ಎಂದರು

ಪ್ರಾಂಶುಪಾಲರಾದ ಗೋಪಾಲ್‌, ಜಾಲಪ್ಪ, ಉಪನ್ಯಾಸಕರಾದ ರವಿಕುಮಾರ್, ಪ್ರಕಾಶ್, ಪುನೀತ್, ಅಭಿಷೇಕ್, ಶೃತಿ, ಪಲ್ಲವಿ, ರಾಮು ಸೇರಿದಂತೆ ಉಪನ್ಯಾಸಕರು, ಪೋಷಕರು ವಿದ್ಯಾರ್ಥಿಗಳಿದ್ದರು.(ಫೋಟೊ ಕ್ಯಾಪ್ಷನ್‌)

ದಾಬಸ್‌ಪೇಟೆಯ ಹೊಯ್ಸಳ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಎಚ್‌ಎಎಲ್ ಮ್ಯಾನೇಜ್ ಮೆಂಟ್ ಆಕಾಡೆಮಿ ತರಬೇತಿ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ರಾಜಗೋಪಾಲ್ ಹಾಗೂ ಉಪನ್ಯಾಸಕರು ಉದ್ಘಾಟಿಸಿದರು.