ಉದ್ಯೋಗ ನೀಡುವಲ್ಲಿ ಸ್ಥಳಿಯರಿಗೆ ಅದ್ಯತೆ ನೀಡಿ

| Published : May 20 2025, 01:09 AM IST

ಸಾರಾಂಶ

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಹೇಂದ್ರ ಏರೋಸ್ಪೇಸ್ ಕಂಪನಿಯ ಎರಡನೇ ಶಾಖೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೋಲಾರ ಜಿಲ್ಲೆಯ ಜನತೆಗೆ ಉದ್ಯೋಗ ಅವಕಾಶಗಳು ದೊರೆಯುವಂತೆ ಮಾಡುವುದು ಕಂಪನಿಗಳ ಜವಾಬ್ದಾರಿಯಾಗಬೇಕು. ಯಾವುದೇ ಕೆಲಸವಾಗಲಿ ಜಿಲ್ಲೆಯವರಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ಕನ್ನಡಪ್ರಭ ವಾರ್ತೆ ಕೋಲಾರಮುಂದಿನ ಆರು ತಿಂಗಳೊಳಗೆ ಮಹೇಂದ್ರ ಏರೋಸ್ಪೇಸ್‌ ಕಂಪನಿಯ ಎರಡನೇ ಶಾಖೆಯ ಕಾಮಗಾರಿ ಪೂರ್ಣಗೊಳ್ಳಲಿದ್ದು, ಏಳನೇ ತಿಂಗಳಲ್ಲೇ ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ನೀಡುವ ಕೆಲಸವಾಗಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಹೇಂದ್ರ ಏರೋಸ್ಪೇಸ್ ಕಂಪನಿಯ ಎರಡನೇ ಶಾಖೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೋಲಾರ ಜಿಲ್ಲೆಯ ಜನತೆಗೆ ಉದ್ಯೋಗ ಅವಕಾಶಗಳು ದೊರೆಯುವಂತೆ ಮಾಡುವುದು ಕಂಪನಿಗಳ ಜವಾಬ್ದಾರಿಯಾಗಬೇಕು. ಯಾವುದೇ ಕೆಲಸವಾಗಲಿ ಜಿಲ್ಲೆಯವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.ಗುತ್ತಿಗೆ ಕಾರ್ಮಿಕರಿಗೆ ಅನ್ಯಾಯ

ಸ್ಥಳೀಯವಾಗಿರುವ ಕೈಗಾರಿಕೆಗಳಲ್ಲಿ ಕಾರ್ಮಿಕರನ್ನು ಕೇವಲ ೧೧ ತಿಂಗಳು ಮಾತ್ರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ದುಡಿಸಿಕೊಳ್ಳತ್ತಾರೆ. ನಂತರ ಕಂಪನಿಯಿಂದ ಹೊರ ಕಳಿಸಲಾಗುತ್ತಿದೆ ಇದರ ಬಗ್ಗೆ ಕಾರ್ಮಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಜನಪ್ರತಿನಿಧಿಗಳು ಒಗ್ಗಟ್ಟಿನನಿಂದ ಕೇಲವು ನಿಯಮಗಳನ್ನು ಜಾರಿಗೆ ತಂದು ಸ್ಥಳೀಯರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.ಸಮಸ್ಯೆಗಳ ಪರಿಹರಿಸಿ

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿ ನಿರಂತರವಾಗಿ ಕಾರ್ಮಿಕರು ಸಮಸ್ಯೆಗಳನ್ನು ಎದುರಿಸುವಂತಾಗಿದೆ, ದಿನನಿತ್ಯ ಒಂದಲ್ಲ ಒಂದು ರೀತಿಯಲ್ಲಿ ದೂರುಗಳು ನನ್ನ ಗಮನಕ್ಕೆ ಬಂದಿವೆ, ಕೂಡಲೇ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಎಂಎಲ್ಸಿ ಇಂಚರ ಗೋವಿಂದರಾಜು, ಬೆಳ್ಳೂರು ಗ್ರಾಪಂ ಅಧ್ಯಕ್ಷೆ ಮಮತ, ಮಾಜಿ ಅಧ್ಯಕ್ಷ ವೆಂಕಟಸ್ವಾಮಿ, ಹಾಲಿ ಸದಸ್ಯರಾದ ಸಂತೋಷ ಕುಮಾರ್, ರಘುಪತಿ, ಏರೋಸ್ಪೇಸ್ ಕಂಪನಿ ಮುಖ್ಯಸ್ಥ ಡಾ.ಕಾರ್ತಿಕ್ ಕೃಷ್ಣಮೂರ್ತಿ, ಕಾರ್ಖಾನೆಯ ಮುಖ್ಯಸ್ಥ ಆಶೀಶ್ ಮಹಾಲೆ, ಮಾನವ ಸಂಪನ್ಮೂಲ ಮುಖ್ಯಸ್ಥ ನಾಗರಾಜ ಇದ್ದರು.