ಅಲ್ಪಸಂಖ್ಯಾತ ಸಮುದಾಯದ ಆದ್ಯತೆ ನೀಡಿ

| Published : May 27 2024, 01:03 AM IST

ಸಾರಾಂಶ

ವಿಜಯಪುರ ಜಿಲ್ಲೆಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಆದ್ಯತೆ ನೀಡುವಂತೆ ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡರು ಸರ್ವಾನುಮತದಿಂದ ಠರಾವು ಪಾಸ್ ಮಾಡಿದರು.ನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶಬ್ಬೀರ ಜಾಗೀರದಾರ ಅಧ್ಯಕ್ಷತೆಯಲ್ಲಿ ಈ ಕರ್ನಾಟಕ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಮರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ಜಿಲ್ಲೆಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಆದ್ಯತೆ ನೀಡುವಂತೆ ಅಲ್ಪಸಂಖ್ಯಾತ ಕಾಂಗ್ರೆಸ್‌ ಮುಖಂಡರು ಸರ್ವಾನುಮತದಿಂದ ಠರಾವು ಪಾಸ್‌ ಮಾಡಿದರು.ನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶಬ್ಬೀರ ಜಾಗೀರದಾರ ಅಧ್ಯಕ್ಷತೆಯಲ್ಲಿ ಈ ಕರ್ನಾಟಕ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಮರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ವಿಜಯಪುರ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಕೊಡುಗೆ ಅಪಾರವಾಗಿದೆ. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ದೃಷ್ಟಿಯಿಂದ ಇದು ಅತ್ಯವಶ್ಯಕವಾಗಿದ್ದು, ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರುಗಳು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿ ನ್ಯಾಯ ಒದಗಿಸಲು ಆಗ್ರಹಿಸಿದರು.

ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ಮಹ್ಮದರಫೀಕ ಟಪಾಲ್, ಆಜಾದ್ ಪಟೇಲ್, ಎಸ್.ಎಂ.ಪಾಟೀಲ್ ಗಣಿಹಾರ, ಚಾಂದಸಾಬ ಗಡಗಲಾವ, ಜಮೀರ ಬಕ್ಷೀ, ಎಂ.ಸಿ.ಮುಲ್ಲಾ, ಐ.ಎಂ.ಇಂಡೀಕರ, ಡಿ.ಹೆಚ್.ಕಲಾಲ, ಎಚ್.ಎಂ.ಬಾಗವಾನ, ಯಾಕುಬ್ ನಾಟೀಕಾರ, ಫಯಾಜ ಕಲಾದಗಿ, ಅನ್ವರ ಜಮಾದಾರ, ದಸ್ತಗೀರ ಸಾಲೋಟಗಿ, ಇಲಿಯಾಸ ಸಿದ್ದಿಕಿ, ರಜಾಕಸಾಬ ಕಾಖಂಡಕಿ, ತಾಜುದ್ದೀನ್ ಖಲೀಫಾ, ಅಲ್ಲಾಬಕ್ಷ, ಅಸ್ಮಾ ಕಾಲೇಬಾಗ, ಹಮೀದಾ ಪಟೇಲ್, ಅಕ್ಬರ್ ಗೋಕಾವಿ, ಅವಾಹಿಲ್ ಹಕ್ ಪಾಟೀಲ, ಕುಲದೀಪ್ ಸಿಂಗ್, ಅಬೂಬಕರ್ ಕಂಬಾಗಿ, ಲಾಲಸಾಬ ಕೋರಬು, ಹಾಜಿಲಾಲ ದಳವಾಯಿ, ಗುರಿಕಾರ, ಪೈರೋಜ ಶೇಖ, ಶಕೀಲ್ ಗಡೇದ, ಸಮೀರ ತಾಜಿಂತರಕ ಮುಂತಾದವರು ಇದ್ದರು.