ಸಾರಾಂಶ
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಗ್ರಾಮೀಣ ಭಾಗದ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣದ ಅಗತ್ಯವಿದೆ. ಅವರಿಗಾಗಿ ಬಾಗಲಕೋಟೆಯ ಬಿ.ವಿ.ವಿ. ಸಂಘ ಪಟ್ಟಣದಲ್ಲಿ ಸಿಬಿಎಸ್ಸಿ ಶಾಲೆ ಪ್ರಾರಂಭಿಸಿರುವುದು ಶ್ಲಾಘನೀಯವಾಗಿದೆ ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಹೇಳಿದರು.ಸೋಮವಾರ ಪಟ್ಟಣದ ಹತ್ತಿರವಿರುವ ಎಸ್.ಆರ್. ವಸ್ತ್ರದ ರೂರಲ್ ಪಾಲಿಟೆಕ್ನಿಕ್ ಹತ್ತಿರ, ತೂಗುಣಸಿ ಕ್ರಾಸ್ ಬಳಿ ಇರುವ ಬಿ.ವಿ.ವಿ. ಸಂಘದ ಬಸವೇಶ್ವರ ಇಂಟರನ್ಯಾಷನಲ್ ಪಬ್ಲಿಕ್ ಸ್ಕೂಲ್ ನೂತನ ಕಟ್ಟಡದ ವಾಸ್ತುಶಾಂತಿ ಹಾಗೂ ಶಾಲಾ ಪ್ರಾರಂಭೋತ್ವವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ನೂತನ ಶಾಲಾ ಕಟ್ಟಡ ಉಧ್ಘಾಟಿಸಿ ಮಾತನಾಡಿ, ಈ ಮೊದಲು ಸಿಬಿಎಸ್ಸಿ ಶಾಲೆಗೆ ಹೋಗಬೇಕಾದರೆ ಬೆಂಗಳೂರಿಗೆ ಹೋಗಬೇಕಿತ್ತು, ದೇಶಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬಸವೇಶ್ವರ ವೀರಶೈವ ವಿಧ್ಯಾವರ್ಧಕ ಸಂಘ ಇಂದು ಸಣ್ಣ ಗ್ರಾಮದಲ್ಲಿ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು, ಸಿಬಿಎಸ್ಸಿ ಶಾಲೆಯನ್ನು ಗುಳೆದಗುಡ್ದದ ಹತ್ತಿರ ಪ್ರಾರಂಭ ಮಾಡಿರುವುದು ಶ್ಲಾಘನಿಯ, ಸಂಘದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇಲ್ಲಿಗೆ ಬರುವು ನೀರಿಕ್ಷೆ ಇದ್ದು, ಎಲ್ಲರಿಗೂ ಇಲ್ಲಿ ಕಲಿಯುವ ಅವಕಾಶ ಸಿಗಲಿ, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಈ ಶಾಲೆ ಅಡಿಪಾಯವಾಗಲಿ, ಜಿಲ್ಲೆಯಾದ್ಯಂತ ಶಾಲೆಯ ಹೆಸರು ಬೆಳಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಈಗಾಗಲೇ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಶಾಲಾ ಕಾಲೇಜುಗಳನ್ನು ಆಯಾ ಪ್ರದೇಶವಾರು ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿನ ನಗರ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪಡೆದು ದೇಶಕ್ಕೆ ಉತ್ತಮ ಪ್ರಜೆಯಾಗಲಿ, ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಗುಳೇದಗುಡ್ಡ ಹತ್ತಿರ ಬಿ.ವಿ.ವಿ. ಸಂಘದಿಂದ ಬಸವೇಶ್ವರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲಾಗಿದೆ, ಇಲ್ಲಿ ಗ್ರಂಥಾಲಯ, ಕಂಪ್ಯೂಟರ್, ಉತ್ತಮ ಕೊಠಡಿಗಳು, ಕ್ರೀಡಾ ಮೈದಾನ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳ ಜೊತೆಗೆ ಆಧುನಿಕ ಶೈಕ್ಷಣಿಕ ಉಪಕರಣಗಳ ಮೂಲಕ ಆಟ ಪಾಠಗಳು, ಒಟ್ಟಾರೆ ಮಕ್ಕಳಿಗೆ ಜೀವನ ಭದ್ರತೆಯನ್ನೊಳಗೊಂಡ ಗುಣಮಟ್ಟದ ಶಿಕ್ಷಕ ನುರಿತ ಶಿಕ್ಷಕರಿಂದ ಸಿಗಲಿದೆ ಎಂದರು.ಕೋಟಿಕಲ್ ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ನೂತನ ಕಟ್ಟಡದ ವಾಸ್ತುಶಾಂತಿ, ಹೋಮ, ಲಕ್ಷ್ಮೀ, ಸರಸ್ವತಿ, ಹಾಗೂ ಗಣಪತಿಯ ಪೂಜೆಗಳು ಜರುಗಿದವು. ವಾರಣಾಸಿಯ ಜಂಗಮವಾಡಿಮಠದ ಕಾಶಿಯ ಡಾ.ಚಂದ್ರಶೇಖ ಶಿವಾಚಾರ್ಯ ಶ್ರೀಗಳಿಗೆ ಸಂಘದಿಂದ ಗೌರವ ಸನ್ಮಾನ ಮಾಡಲಾಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಬಿ.ವಿ.ವಿ. ಸಂಘದ ಕಾರ್ಯದರ್ಶಿ ಮಹೇಶ್ವರ ಅಥಣಿ, ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಕಟ್ಟಡಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹೇಶ ಕಕರೆಡ್ಡಿ, ಪ್ರಾಚಾರ್ಯ ರಾಜಶೇಖರ ಬಿಂಗೊಳಿ ಸೇರಿದಂತೆ ಸಂಘದ ಎಲ್ಲ ಸದಸ್ಯರು, ಹಿತೈಸಿಗಳು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))