ದೇವನಹಳ್ಳಿ: ಹಿಂದುಳಿದ ಸಮುದಾಯಗಳಿಗೆ ರಾಜಕೀಯವಾಗಿ ಪ್ರಾತಿನಿದ್ಯ ಕೊಡುವ ನಿಟ್ಟಿನಲ್ಲಿ ಯಾದವ ಜನಾಂಗವನ್ನು ಪರಿಗಣಿಸಿ ಹಿರಿಯ ರಾಜಕಾರಣಿ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡಬೇಕು ಎಂದು ಯಾದವ ಸಮುದಾಯದ ಮುಖಂಡ ವೈ.ಕೆ. ಚಂದ್ರಶೇಖರ್ ಒತ್ತಾಯಿಸಿದರು.

ದೇವನಹಳ್ಳಿ: ಹಿಂದುಳಿದ ಸಮುದಾಯಗಳಿಗೆ ರಾಜಕೀಯವಾಗಿ ಪ್ರಾತಿನಿದ್ಯ ಕೊಡುವ ನಿಟ್ಟಿನಲ್ಲಿ ಯಾದವ ಜನಾಂಗವನ್ನು ಪರಿಗಣಿಸಿ ಹಿರಿಯ ರಾಜಕಾರಣಿ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡಬೇಕು ಎಂದು ಯಾದವ ಸಮುದಾಯದ ಮುಖಂಡ ವೈ.ಕೆ. ಚಂದ್ರಶೇಖರ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುವರ್ಷಗಳ ಹಿಂದೆ ಕೃಷ್ಣಪ್ಪನವರನ್ನು ಸಚಿವರನ್ನಾಗಿ ಮಾಡಿದ್ದು ಹೊರತುಪಡಿಸಿದರೆ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಯಾದವ ಜನಾಂಗವನ್ನು ಕಡೆಗಣಿಸಲಾಗುತ್ತಿದೆ. ಪ್ರಸ್ತುತ ಕಾಂಗ್ರೆಸ್ ಮುಖಂಡರಾಗಿ ೪೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಿಎಂಟಿಸಿ ನಿಗಮದ ಮಾಜಿ ಅಧ್ಯಕ್ಷ ಯಾದವ್‌ 4 ದಶಕಗಳಿಂದ ಕಾಂಗ್ರೆಸ್ ಸಿದ್ಧಾಂತ ಒಪ್ಪಿ ರಾಜ್ಯಕ್ಕೆ ಅವಿರತ ಸೇವೆ ಸಲ್ಲಿಸುತ್ತಿದ್ದು, ಶೋಷಿತ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ನಿರಂತರಗಿ ಹೋರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ೪೦ ಲಕ್ಷ ಯಾದವ ಸಮುದಾಯದ ಜನಸಂಖ್ಯೆ ಇದೆ. ಅವರ ಸೇವೆಯನ್ನು ಪರಿಗಣಿಸಿ ಪುನರ್ ರಚನೆಯ ಸಂಪುಟದಲ್ಲಿ ಯಾದವ ಸಂಘದ ಪರವಾಗಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡಬೇಕೇಂದು ಆಗ್ರಹಿಸಿದರು.

ಬೆಂಗಳೂರು ಉತ್ತರ ತಾಲೂಕು ಯಾದವ ಸಂಘದ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮಾತನಾಡಿ, ಸಂವಿಧಾನದ ಆಶಯಗಳನ್ನು ಉಳಿಸುವುದಕ್ಕೋಸ್ಕರ ಅಹಿಂದ ಸಮುದಾಯಗಳಿಗೆ ರಾಜಕೀಯವಾಗಿ ಆಗಿರುವ ಅನ್ಯಾಯವನ್ನು ಸರಿಪಡಿಸುವುದಕ್ಕಾಗಿ ಸರ್ಕಾರ ಈ ಬಾರಿ ನಾಗರಾಜ್ ಯಾದವ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕು. ಇದರಿಂದಾಗಿ ಹಿಂದುಳಿದ ವರ್ಗಕ್ಕೆ ರಾಜಕೀಯ ಪ್ರಾತಿನಿದ್ಯ ಸಿಕ್ಕಂತಾಗಲಿದೆ ಎಂದರು. ಈ ವೇಳೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯಾದವ ಸಂಘದ ಮುಖಂಡ ಪಾಲನಹಳ್ಳಿ ಈರಪ್ಪ, ಕಟ್ಟಿಗೇನಹಳ್ಳಿ ಶಿವರಾಜ್, ಮುನಿರಾಜು, ಅನಿಲ್ ಯಾದವ್, ಪುರಸಭಾ ಮಾಜಿ ಸದಸ್ಯ ಗೋಪಾಲ್, ಪುರಸಭಾ ಸದಸ್ಯರು ಬಾಂಬೆ ನಾರಾಯಣಸ್ವಾಮಿ, ಕುಂದಾಣ ಗ್ರಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ಇತರರಿದ್ದರು.

೦೧ ದೇವನಹಳ್ಳಿ ೦೧ ಚಿತ್ರಸುದ್ದಿ:

ದೇವನಹಳ್ಳಿಯಲ್ಲಿ ಯಾದವ ಸಮಾಜದ ಮುಖಂಡರಾದ ವೈಕೆ. ಚಂದ್ರಶೇಖರ್, ಬೆಂಗಳೂರು ಉತ್ತರ ತಾಲೂಕು ಯಾದವ ಸಂಘದ ಅಧ್ಯಕ್ಷ ಡಾ. ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.