ಕೆಚ್ಚಲನ್ನು ಕತ್ತರಿಸಿದವಿರಿಗೆ ಕಠಿಣ ಶಿಕ್ಷೆ ವಿಧಿಸಿ

| Published : Jan 18 2025, 12:48 AM IST

ಕೆಚ್ಚಲನ್ನು ಕತ್ತರಿಸಿದವಿರಿಗೆ ಕಠಿಣ ಶಿಕ್ಷೆ ವಿಧಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲನ್ನು ಕತ್ತರಿಸಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡರು, ಶಿವಮೊಗ್ಗದ ಗೋ ರಕ್ಷಾ ಪರಿವಾರದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶಿವಮೊಗ್ಗ: ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲನ್ನು ಕತ್ತರಿಸಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡರು, ಶಿವಮೊಗ್ಗದ ಗೋ ರಕ್ಷಾ ಪರಿವಾರದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಚಾಮರಾಜಪೇಟೆಯಲ್ಲಿ ಗೋವಿನ ಕೆಚ್ಚಲುಗಳನ್ನು ಕತ್ತರಿಸಿ ವಿಕೃತಿ ಮೆರೆಯಲಾಗಿದೆ. ಇದು ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಇಟ್ಟಿರುವ ಕೊಳ್ಳಿಯಾಗಿದೆ. ಕರುಳು ಹಿಂಡುವ ಇಂತಹ ದುಷ್ಕೃತ್ಯಗಳು ನಡೆಯದಂತೆ ಎಚ್ಚರವಹಿಸಬೇಕಾಗಿದೆ. ಕೂಡಲೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಈ ಪ್ರಕರಣದಲ್ಲಿ ಆರೋಪಿ ಮಾನಸಿಕ ಖಿನ್ನತೆಯುಳ್ಳವನು. ಕುಡಿದ ಅಮಲಿನಲ್ಲಿ ಕೃತ್ಯವೆಸಗಿದ್ದಾನೆ ಎಂದು ಬಿಂಬಿಸಿ ದಿಕ್ಕು ತಪ್ಪಿಸಲಾಗುತ್ತಿದೆ. ಇದು ನಿಜವಾಗಿಯೂ ಗೋವಿನ ಕೆಚ್ಚಲನ್ನು ಕತ್ತರಿಸಬೇಕೆಂದು ಮಾಡಿದ ತಪ್ಪಿದು. ಗೋ ಮಾಲೀಕರಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಬೇಕು. ಗೋವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು. ಗೋಶಾಲೆಯ ಅನುದಾನಗಳನ್ನು ನಿಲ್ಲಿಸಿರುವುದನ್ನು ತೆರವುಗೊಳಿಸಬೇಕು, ಗೋ ಹತ್ಯೆ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಬಜರಂಗದಳದ ಮುಖಂಡ ರಾಜೇಶ್ ಗೌಡ ಮಾತನಾಡಿ, ಗೋವಿನ ಕೆಚ್ಚಲು ಕುಯ್ಯಲು ಪ್ರಮುಖ ಕಾರಣ ಪಶು ಆಸ್ಪತ್ರೆಯ ಜಾಗವನ್ನು ಉಳಿಸಿಕೊಳ್ಳಲು ಕರ್ಣ ಎಂಬುವವರು ಗೋವಿನೊಂದಿಗೆ ಪ್ರತಿಭಟನೆ ಮಾಡಿ ದರ್ಗಾ ಮಾಡಲು ಹೊರಟ ಪಶು ಆಸ್ಪತ್ರೆ ಜಾಗವನ್ನು ಉಳಿಸಿಕೊಳ್ಳುತ್ತಾರೆ. ಇದಕ್ಕೆ ಪ್ರತಿಯಾಗಿ ಅವರ ಮನೆಯ ಹಸುಗಳ ಮೇಲೆ ಕ್ರೂರತ್ವ ಮೆರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪೊಲೀಸರು ಬಂಧಿಸಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಅಲ್ಲ, ಆತ ಅಲ್ಲೇ ಬೇಕರಿಯೊಂದರಲ್ಲಿ 7 ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ. ಸಚಿವ ಜಮೀರ್ ಅಹಮ್ಮದ್ ಸಲಹೆ ಮೇರೆಗೆ ಈ ಕೃತ್ಯ ಎಸಗಿದ್ದಾನೆ ಎಂದು ಕಾಣುತ್ತಿದೆ. ಪೊಲೀಸರು ಸುಳ್ಳು ಕೇಸ್ ದಾಖಲಿಸಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಪ್ರಮುಖರಾದ ವಾಸುದೇವ್, ನಾರಾಯಣ ವರ್ಣೇಕರ್, ದೇವರಾಜ್, ದತ್ತಾತ್ರಿ, ರಾಜೇಶ್ ಗೌಡ, ಆನಂದರಾವ್ ಜಾಧವ್, ಮಾಲತೇಶ್, ರಮೇಶ್ ಜಾಧವ್, ದೀನದಯಾಳ್, ಜ್ಞಾನೇಶ್ವರ್, ಸುರೇಖಾ ಮುರಳೀಧರ್, ಸುನಿತಾ, ಚೈತ್ರಾ, ಲಕ್ಷ್ಮಿ, ಯಶೋದಾ, ಗೀತಾ ಲಕ್ಷ್ಮಿ ಮೊದಲಾವರಿದ್ದರು.

ಕಾಂಗ್ರೆಸ್ ಭಿನ್ನಮತ ಮುಚ್ಚಿ ಹಾಕಲು ಇದೊಂದು ಷಡ್ಯಂತ್ರ

ಶಿವಮೊಗ್ಗ: ಕಾಂಗ್ರೆಸ್ ಭಿನ್ನಮತ ಮುಚ್ಚಿ ಹಾಕಲು ತಮ್ಮ ಅಧಿಕಾರವನ್ನು ಸುಭದ್ರಗೊಳಿಸಲು ಕಾಂಗ್ರೆಸ್ ಸರ್ಕಾರ ತುಷ್ಠೀಕರಣದ ನೀತಿ ಅನುಸರಿಸುವ ಭಾಗವಾಗಿ ಇದೊಂದು ಷಡ್ಯಂತ್ರ ಅಷ್ಟೇ. ನಿನ್ನೆ ಕೂಡ ಹಿಂದೂಗಳ ಪವಿತ್ರ ಸ್ಥಳವಾದ ನಂಜನಗೂಡಿನಲ್ಲಿ ದೇವರಿಗೆ ಬಿಟ್ಟ ಹಸುವಿನ ಬಾಲವನ್ನು ತುಂಡರಿಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಹಿಂದೂ, ಮುಸ್ಲಿಮರಲ್ಲಿ ಬೆಂಕಿ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಹೊರಟಿದೆ. ಹಿಂದೆ ಕಾಂಗ್ರೆಸ್ ಚಿಹ್ನ ಹಸು ಮತ್ತು ಕರು ಆಗಿತ್ತು. ಯಾವಾಗ ಇವರು ಹಸುವಿನ ಹಾಲು ಕುಡಿದು ವಿಷ ಕೊಡುತ್ತಾರೆ ಎಂದು ಗೊತ್ತಾಯತೋ ಚುನಾವಣಾ ಆಯೋಗವೇ ಕಾಂಗ್ರೆಸ್ ನಿಂದ ಈ ಚಿಹ್ನೆ ಕಿತ್ತುಕೊಂಡಿದೆ ಎಂದರು.ಕಾಂಗ್ರೆಸ್ ನಡೆಗೂ ನುಡಿಗೂ ಸಂಬಂಧವಿಲ್ಲ. ಹಿಂದೂಗಳು ಬಳೆ ತೊಟ್ಟುಕೊಂಡು ಕುಳಿತಿಲ್ಲ ಎಂದು ಹರಿಹಾಯ್ದರು.ಮುಸ್ಲಿಮರು ಗೋಹತ್ಯೆ ನಿಲ್ಲಿಸಬೇಕು : ಚನ್ನಬಸಪ್ಪಶಿವಮೊಗ್ಗ: ಸಹನೆ ನಮ್ಮ ದೌರ್ಬಲ್ಯವಲ್ಲ, ರಾಜ್ಯದಲ್ಲಿ ಮುಸ್ಲಿಮರು ನೆಮ್ಮದಿಯಿಂದ ಬಾಳಬೇಕಾದರೆ ಗೋಹತ್ಯೆ ನಿಲ್ಲಿಸಬೇಕು. ಹಿಂದೂಗಳು ತೀರ್ಮಾನ ಮಾಡಿದರೆ ನೀವು ತಡೆದುಕೊಳ್ಳಲು ಆಗುವುದಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಮುಸ್ಲಿಂ ತುಷ್ಠೀಕರಣ ನೀತಿ ಅವರಿಗೇ ರಕ್ಷಣೆಯಾಗಿದೆ. ನಾವು 25ಕ್ಕೂ ಹೆಚ್ಚು ಗೋಹತ್ಯೆ ಪ್ರಕರಣಗಳನ್ನು ಹಿಡಿದುಕೊಟ್ಟರೂ ಇದುವರೆಗೂ ಯಾವುದೇ ಕೇಸ್ ದಾಖಲಿಸಿಲ್ಲ. ಶಿವಮೊಗ್ಗದಲ್ಲಿ ಹಾಗಾದರೇ ಗೋಹತ್ಯೆ ನಿಷೇಧ ಕಾನೂನು ಇಲ್ಲವೇ ಎಂದು ಪ್ರಶ್ನಿಸಿದರು.