ಮಗುವಿಗೆ ಗಂಟೆಯೊಳಗಾಗಿ ತಾಯಿಯ ಎದೆ ಹಾಲು ನೀಡಿ

| Published : Aug 10 2025, 02:18 AM IST

ಸಾರಾಂಶ

ಮಗು ಹುಟ್ಟಿದ ತಕ್ಷಣ ಗಂಟೆಯೊಳಗಾಗಿ ತಾಯಿಯ ಎದೆಹಾಲು ಮಗುವಿಗೆ ನೀಡಬೇಕು ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ತಾಯಿ ಮಕ್ಕಳ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಾಯನ್ನವರ ಹೇಳಿದರು.

ಕನ್ನಡಪ್ರಭ ವಾರ್ತೆ ದೇವಲಾಪುರ

ಮಗು ಹುಟ್ಟಿದ ತಕ್ಷಣ ಗಂಟೆಯೊಳಗಾಗಿ ತಾಯಿಯ ಎದೆಹಾಲು ಮಗುವಿಗೆ ನೀಡಬೇಕು ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ತಾಯಿ ಮಕ್ಕಳ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಾಯನ್ನವರ ಹೇಳಿದರು.

ಬೈಲಹೊಂಗಲ ತಾಲೂಕಿನ ನಾಗನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನಿಷ್ಠ 6 ತಿಂಗಳವರೆಗೆ ಯಾವುದೇ ಹೊರಗಿನ ಆಹಾರ ನೀಡದೇ ಕೇವಲ ಎದೆ ಹಾಲನ್ನು ಮಾತ್ರ ನೀಡಬೇಕು. 6 ತಿಂಗಳನಿಂದ 2 ವರ್ಷದವರಗೆ ಮಗುವಿಗೆ ಪೂರಕ ಆಹಾರದೊಂದಿಗೆ ಎದೆ ಹಾಲನ್ನು ಮಗುವಿಗೆ ನೀಡಲು ತಾಯಿಗೆ ಆಕೆಯ ಪೋಷಕರು ಸಹಕರಿಸಿ. ಇದರಿಂದ ಮಗುವಿನ ದೈಹಿಕ, ಮಾನಸಿಕವಾಗಿ ಬೆಳವಣೆಗೆಗೆ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಬರುವ ಲಸಿಕೆಗಳನ್ನು ಮಗುವಿಗೆ ತಪ್ಪದೇ ಹಾಕಿಸಬೇಕು ಎಂದು ಮನವಿ ಮಾಡಿದರು.ಚಿಕ್ಕಮಕ್ಕಳ ತಜ್ಞ ಡಾ.ಬಸವಣೆಪ್ಪ ಕುಂದರನಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಆರ್‌ಎಸ್ ಸಮಿತಿ ಸದಸ್ಯ ಅಡಿವೆಪ್ಪ ಹುಣಸಿಮರದ, ಹಿರಿಯ ದಂತ ವೈದ್ಯಾಧಿಕಾರಿ ಡಾ.ಸಾಗರ ದೇಸಾಯಿ, ಅರವಳಿಕೆ ತಜ್ಞೆ ಡಾ.ಸವಿತಾ ಗುರವ, ಸ್ತ್ರೀರೋಗ ತಜ್ಞೆ ಡಾ.ಪಾತೀಮಾ ಗುಲಜಾರಿ, ಕ್ಷೇತ್ರ ಆರೋಗ್ಯ ಶಿಕ್ಷಾಣಾಧಿಕಾರಿ ಸೋಮಶೇಖರ ಮುತ್ನಾಳ, ಕ್ಷೇತ್ರ ಆರೋಗ್ಯ ಶಿಕ್ಷಾಣಾಧಿಕಾರಿ ಬಸವರಾಜ ಯಲಿಗಾರ, ಎನ್‌ಸಿಡಿ ಆಪ್ತಸಮಾಲೋಚಕ ಆನಂದ ತೋಳಿ, ಐಸಿಟಿಸಿ ಆಪ್ತಸಮಾಲೋಚಕ ಸತೀಶ ಮಳಲಿ, ಗರ್ಭೀಣಿಯರು, ತಾಯಿಂದರು, ಸಾರ್ವಜನಿಕರು ಇಲಾಖೆ ಸಿಬ್ಬಂದಿಯವರು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದರು.