ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಹಸಿದ ಹೊಟ್ಟೆಗೆ ಅನ್ನ ಹಾಕುವುದು ಪುಣ್ಯದ ಕೆಲಸ. ಆ ಕೆಲಸವನ್ನು ಹಲಗೂರು ಲಯನ್ಸ್ ಸಂಸ್ಥೆ ಮಾಡಿಕೊಂಡು ಬರುತ್ತಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಬಿ.ಮಹೇಂದ್ರ ಪ್ರಶಂಸೆ ವ್ಯಕ್ತಪಡಿಸಿದರು.ಹಲಗೂರು ಪೊಲೀಸ್ ಠಾಣೆಯಲ್ಲಿ ಎರಡು ವರ್ಷಗಳ ಕರ್ತವ್ಯ ನಿರ್ವಹಿಸಿ ಮೈಸೂರಿಗೆ ವರ್ಗಾವಣೆಗೊಂಡ ಬಿ.ಮಹೇಂದ್ರ ಅವರು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಸ್ಥೆ ಹಲವು ತಿಂಗಳಿಂದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ರೋಗಿಗಳು, ಸಂಬಂಧಿಕರಿಗೆ ಹಸಿವು ನಿವಾರಣೆ ಮಾಡುತ್ತಿದೆ. ಈ ದಿನ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಪುಣ್ಯ ಎಂದರು.
ದಾನಕ್ಕಿಂತ ದೊಡ್ಡ ದಾನ ಅನ್ನದಾನ. ಈ ಭಾಗದಲ್ಲಿ ಸೇವೆ ಸಲ್ಲಿಸಿ ನಾಲ್ಕು ಜನರಿಗೆ ಅನ್ನ ಹಾಕುವ ಭಾಗ್ಯ ನನಗೆ ಇಂದು ಸಿಕ್ಕಿರುವುದು ಸಂತಸ ತಂದಿದೆ. ಇದೇ ರೀತಿ ಈ ಸಂಸ್ಥೆಯವರು ನಿರಂತರವಾಗಿ ಈ ಸೇವೆ ಮಾಡಲಿ ಆಶಿಸಿದರು.ಈ ವೇಳೆ ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಕೆ ಕುಮಾರ್, ಕೆ.ಶಿವರಾಜು, ಪದ್ಮನಾಭ, ಎಂ.ಜಯಶಂಕರ್ (ಜಯಣ್ಣ ), ಡಾ ಷಂಶುದ್ದೀನ್, ಮನೋಹರ್, ಎಚ್. ಎಸ್. ಕೃಷ್ಣ, ರಾಜೇಂದ್ರ, ಬಿ.ಸಿ .ಬಸವರಾಜು ಸೇರಿದಂತೆ ಇತರರು ಇದ್ದರು.
ಇಂದು ಶಾಲಾ ವಾರ್ಷಿಕೋತ್ಸವ ಸಮಾರಂಭಮಂಡ್ಯ: ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಚೆನ್ನಮ್ಮ ಎಜುಕೇಷನ್ ಟ್ರಸ್ಟ್, ಚನ್ನಮ್ಮ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭ ಫೆ.14ರಂದು ನಡೆಯಲಿದೆ. ಶಾಲಾ ಆವರಣದ ಕಜ್ಞಮಯೋಗಿ ಚಿಕ್ಕಹನುಮಯ್ಯ ವೇದಿಕೆಯಲ್ಲಿ ನಡೆಯುವ ಸಮಾರಂಭದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಡೀಸಿ ಡಾ.ಕುಮಾರ ಅಧ್ಯಕ್ಷತೆ ವಹಿಸುವರು. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸಮಾರೋಪ ಭಾಷಣ ಮಾಡುವರು. ಕಾರ್ಯಕ್ರಮವನ್ನು ಎಸಿ ಎಂ.ಶಿವಮೂರ್ತಿ ಉದ್ಘಾಟಿಸುವರು. ಬಿಇಒ ಕೆ.ಟಿ.ಸೌಭಾಗ್ಯ ವಿದ್ಯಾರ್ಥಿಗಳಿಗೆ ಹಿತವಚನ ನೀಡುವರು. ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಟಿ.ಬಿ.ಹೇಮಾವತಿ, ಪೌರಾಯುಕ್ತ ಎಂ.ಎಸ್.ವೀಣಾ, ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಮಮತಾ, ಗ್ರಾಪಂ ಅಧ್ಯಕ್ಷ ಎಸ್.ಕೆ.ವಿನಯ್ ಬಹುಮಾನ ವಿತರಿಸುವರು.