ಗ್ಲೋಬಲ್ ಎಕ್ಸೆಲೆನ್ಸ್ ಟೀಚರ್ ಅವಾರ್ಡ್ ಪ್ರಶಸ್ತಿ ಪ್ರದಾನ

| Published : Sep 29 2025, 03:02 AM IST

ಸಾರಾಂಶ

ಸನ್ಮಾನ ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ.

ಹೂವಿನಹಡಗಲಿ: ಶಿಕ್ಷಕರು ಆಧುನಿಕ ತಂತ್ರಜ್ಞಾನ ಬಳಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಬೋಧಿಸಬೇಕೆಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ ಹೇಳಿದರು.

ತಾಲೂಕಿನ ಹೊಳಗುಂದಿ ಗ್ರಾಮದ ಗ್ಲೋಬಲ್ ಪದವಿ ಪೂರ್ವ ಕಾಲೇಜಿನಲ್ಲಿ ದಲಾಯತ್ ಸುಭಾನಸಾಬ್ ವೆಲ್ಫೇರ್ ಎಜುಕೇಷನ್ ಟ್ರಸ್ಟ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ರಾಧಾಕೃಷ್ಣನ್ ಸ್ಮರಣಾರ್ಥ ಗ್ಲೋಬಲ್ ಎಕ್ಸೆಲೆನ್ಸ್ ಟೀಚರ್ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೋರಿ ಹಾಲೇಶ್ ಮಾತನಾಡಿ, ಸನ್ಮಾನ ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿರಿ ಎಂದು ಹೇಳಿದರು.

ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯ ಸುರೇಶ ಅಂಗಡಿ, ಲೇಖಕ ಆರ್.ಬಿ.ಗುರುಬಸವರಾಜ, ಪತ್ರಕರ್ತರಾದ ಬಿಚ್ಚುಗತ್ತಿ ಖಾಜಾ ಹುಸೇನ್, ವೀರೇಶ್ ಕಲ್ಮಠ, ಗಣಿತ ವಿಜ್ಞಾನ ವೇದಿಕೆಯ ಕೋರಿ ವಿಶ್ವನಾಥ್, ಕೆ.ನಿಂಗಪ್ಪ ಮಾತನಾಡಿದರು.

ದಾವಣಗೆರೆ ಶೈನ್ ಪಿಯುಸಿ ಕಾಲೇಜಿನ ಶಹಬಾಜ್ ಅಹ್ಮದ್ ಶೇಖ್, ಪ್ರಾಚಾರ್ಯರಾದ ಥಾಮಸ್ ಸಂತೋಷ್, ಅಶ್ವಿನ ಕುಮಾರ್, ಆಡಳಿತಾಧಿಕಾರಿ ಡಿ.ಕರೀಮಸಾಬ್, ಶಂಕರ್ ಬೆಟಗೇರಿ, ಸಹ ಶಿಕ್ಷಕರ ಸಂಘದ ಶಿವಬಸವಸ್ವಾಮಿ ಹಿರೇಮಠ, ಕಸ್ತೂರಿ ಮುದ್ದಿ ಇತರರಿದ್ದರು.

ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಫಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಸರ್ಕಾರಿ ಅನುದಾನಿತ ಅನುದಾನ ರಹಿತ ಮೊರಾರ್ಜಿ ವಸತಿ ಪ್ರೌಢ ಶಾಲೆಗಳ ಗಣಿತ ಹಾಗೂ ವಿಜ್ಞಾನ ಶಿಕ್ಷಕರಿಗೆ ಗ್ಲೋಬಲ್ ಎಕ್ಸೆಲೆನ್ಸ್ ಟೀಚರ್ ಅವಾರ್ಡ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಂ.ದಯಾನಂದ, ಮಹಾದೇವ ಸೋಗಿ, ಎಚ್.ಬಸವರಾಜ, ಟಿ.ಅಬುಸಲೇಹ ನಿರ್ವಹಿಸಿದರು.