ಸಾರಾಂಶ
ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಸಿ.ಶ್ರೀಕಾಂತ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಹವಾಮಾನ ಬದಲಾವಣೆ ಜಾಗತಿಕ ತಾಪಮಾನ ಅರಣ್ಯ ನಾಶ ಮತ್ತು ಜೀವ ವೈವಿಧ್ಯದ ನಷ್ಟದ ಬಗ್ಗೆ ಜಾಗೃತಿ ಮೂಡಿಸುವುದೇ ವಿಶ್ವ ಪರಿಸರ ದಿನಾಚರಣೆಯ ಮಹತ್ವವಾಗಿದೆ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ. ಶ್ರೀಕಾಂತ್ ಹೇಳಿದರು.ಪಟ್ಟಣದದ ಎಂಜಿಎಸ್ವಿ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ರೋಟರಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ 10 ಸಾವಿರ ಗಿಡಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ವರ್ಷದ ತಾಪಮಾನ ನಮ್ಮೆಲ್ಲರಿಗೂ ಪರಿಸರದ ಮೇಲೆ ಉಂಟಾಗಿರುವ ದುಷ್ಪರಿಣಾಮಗಳಿಗೆ ಹಿಡಿದ ಕೈಗನ್ನಡಿಯಾಗಿದ್ದು ಇನ್ನಾದರೂ ನಾವುಗಳು ಎಚ್ಚೆತ್ತು ಪರಿಸರ ಸ್ವಚ್ಛತೆ ಪ್ಲಾಸ್ಟಿಕ್ ನಿರ್ಮೂಲನೆ ಕಡೆಗೆ ಗಮನಹರಿಸಬೇಕು. ಹಿರಿಯರು ನಮಗಾಗಿ ಬಿಟ್ಟುಕೊಟ್ಟ ಪರಿಸರವನ್ನು ಮುಂದಿನ ಪೀಳಿಗೆಗೂ ಉಳಿಸಲು ನಾವೆಲ್ಲರೂ ಕಟಿಬದ್ದರಾಗಬೇಗಿದೆ ಎಂದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ್ ಕುಮಾರ್ ಮಾತನಾಡಿ, ಪ್ರತಿಯೊಬ್ಬ ಪ್ರಜೆಗೂ ಉತ್ತಮ ಪರಿಸರದಲ್ಲಿ ಬಾಳುವಂತೆ ಅವಕಾಶ ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಉತ್ತಮ ಪರಿಸರವನ್ನು ಬಯಸುವ ಪ್ರತಿಯೊಬ್ಬ ಪ್ರಜೆಯು ಉತ್ತಮ ಪರಿಸರ ನಿರ್ಮಾಣದಲ್ಲಿ ತಮ್ಮ ಪಾತ್ರ ಅರಿತು ಪರಿಸರಕ್ಕೆ ಪೂರಕ ಸಹಕಾರಿಸುವವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಕಾನೂನು ಸಲಹೆಗಾರ ವೆಂಕಟಾಚಲ ಮಾತನಾಡಿ, ಜಾಗತಿಕ ತಾಪಮಾನ ನೀರಿನ ಮಟ್ಟ ಕುಸಿಯುತ್ತಿರುವುದು ದಿನ ದಿನಕ್ಕೆ ಗಂಭೀರ ಸಮಸ್ಯೆಯಾಗಿ ಪರಿಗಣಿಸುತ್ತಿದೆ. ಈ ಬಗ್ಗೆ ಅರಿವು ಪಡೆದುಕೊಂಡು ಪರಿಸರ ದಿನಾಚರಣೆಯನ್ನು ಕೇವಲ ಗಿಡ ನೀಡುವ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ ಭೂಮಿಯ ಮರುಸ್ಥಾಪನೆ ಬಗ್ಗೆ ಪ್ರತಿಯೊಬ್ಬರು ಕಾರ್ಯೋನ್ಮುಖರಾಗಬೇಕಿದೆ ಎಂದರು.ಈ ವೇಳೆ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಸುನೀತ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ನಂದಿನಿ, ವಕೀಲರ ಸಂಘದ ಅಧ್ಯಕ್ಷ ಸಿ ರವಿ, ಉಪಾಧ್ಯಕ್ಷೆ ಸಿ.ಆರ್,ನಿರ್ಮಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ , ಸಹಾಯಕ ಅರಣ್ಯ ಅಧಿಕಾರಿ ಶಶಿಧರ್, ವಲಯ ಅರಣ್ಯ ಅಧಿಕಾರಿಗಳಾದ ಭರತ್, ವಾಸು, ಕುಮಾರಿ ಪ್ರಫುಲ ಇನ್ನಿತರಿದ್ದರು.