ಜಾಗತೀಕರಣದಿಂದ ಪರಿಸರ ಹಾನಿ

| Published : Jul 27 2025, 12:01 AM IST

ಜಾಗತೀಕರಣದಿಂದ ಪರಿಸರ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಗಿಡಮರಗಳಿಲ್ಲದೆ ಶುದ್ಧ ಗಾಳಿ, ಮಳೆ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯು ಹತ್ತಾರು ಸಸಿಗಳನ್ನು ಪ್ರತಿ ವರ್ಷ ನೆಟ್ಟು ಬೆಳಸಬೇಕು

ಹಾವೇರಿ: ಇಂದಿನ ಜನಸಮೂಹವು ಪರಿಸರ ಸಂರಕ್ಷಣೆ ಮರೆಯುತ್ತಿದೆ. ಜಾಗತೀಕರಣ ನಾಗಾಲೋಟದಿಂದ ಪರಿಸರ ಹಾನಿ ಹೆಚ್ಚುತ್ತಿದೆ. ಪ್ರತಿಯೊಬ್ಬ ನಾಗರಿಕರು ಪರಿಸರ ಸಂರಕ್ಷಣಾ ಕೆಲಸ ಜವಾಬ್ದಾರಿಯಿಂದ ಮಾಡಬೇಕು ಎಂದು ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಹೇಳಿದರು.

ನಗರದಲ್ಲಿ ಸಹಯೋಗ ಮಲ್ಟಿ ಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಗಿಡಮರಗಳಿಲ್ಲದೆ ಶುದ್ಧ ಗಾಳಿ, ಮಳೆ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯು ಹತ್ತಾರು ಸಸಿಗಳನ್ನು ಪ್ರತಿ ವರ್ಷ ನೆಟ್ಟು ಬೆಳಸಬೇಕು. ಇವತ್ತು ಸಹಯೋಗ ಸೊಸೈಟಿ ನಮ್ಮ ಶಾಲೆಗೆ ಸಸಿ ತಂದು ನಾಟಿ ಮಾಡುವ ಎಲ್ಲರೂ ಸ್ಫೂರ್ತಿ ಕೊಟ್ಟಿದೆ ಎಂದರು.

ಸಹಯೋಗ ಸೊಸೈಟಿ ಮ್ಯಾನೇಜರ್ ಸಂತೋಷ ಗಾಳೇಮ್ಮನವರ ಮಾತನಾಡಿದರು.

ಈ ಸಂದರ್ಭದಲ್ಲಿ ಮುನ್ಸಿಪಲ್ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಶೋಭಾ ಜಾಗಟಗೇರಿ, ಸಹ ಶಿಕ್ಷಕರಾದ ವಿದ್ಯಾ ಎನ್.ಪಿ, ರೇಖಾ ಟಿ.ಆರ್, ವೆಂಕಟೇಶ ಕೆ.ಎಚ್. ರವಿ ಲಮಾಣಿ, ವೀರೇಶ ಹಿತ್ತಲಮನಿ, ಎಂ.ಎನ್. ಓಲೇಕಾರ, ಸಿ.ಬಿ.ಮುದಿಗೌಡ್ರ, ಗಿರೀಶ ಯತ್ತಿನಹಳ್ಳಿ, ಅಶೋಕ ಎಣ್ಣಿಯವರ, ಅರುಣ ಗುಳ್ಳಣ್ಣನವರ, ನೇಮಣ್ಣ ಲಮಾಣಿ, ಜಾವಿಧ ನದಾಫ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಇದ್ದರು.