ಪುರಸಭೆ ಸದಸ್ಯ ಜ್ಯೋತಿ ಹಾನಗಲ್ ಮಾತನಾಡಿ, ಪೋಲಿಯೋ ಲಸಿಕೆ ಬಗ್ಗೆ ನಿರ್ಲಕ್ಷ್ಯ ಬೇಡ. ಮಕ್ಕಳು ಮಾರಕ ರೋಗಗಳಿಂದ ದೂರವಿರಲು ತಪ್ಪದೇ ಹನಿ ಹಾಕಿಸಿ ಎಂದರು.
ಮುಂಡರಗಿ: 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮನವಿ ಮಾಡಿದರು.ಪಟ್ಟಣದ ಗ್ರಾಮ ಚಾವಡಿಯಲ್ಲಿ ಭಾನುವಾರ ತಾಲೂಕು ಸರ್ಕಾರಿ ಆಸ್ಪತ್ರೆ ವತಿಯಿಂದ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಾತನಾಡಿದರು.ಪುರಸಭೆ ಸದಸ್ಯ ಜ್ಯೋತಿ ಹಾನಗಲ್ ಮಾತನಾಡಿ, ಪೋಲಿಯೋ ಲಸಿಕೆ ಬಗ್ಗೆ ನಿರ್ಲಕ್ಷ್ಯ ಬೇಡ. ಮಕ್ಕಳು ಮಾರಕ ರೋಗಗಳಿಂದ ದೂರವಿರಲು ತಪ್ಪದೇ ಹನಿ ಹಾಕಿಸಿ ಎಂದರು.ತಾಲೂಕು ಪಲ್ಸ್ ಪೋಲಿಯೋ ನೋಡಲ್ ಅಧಿಕಾರಿ ಡಾ. ವೆಂಕಟೇಶ ರಾಠೋಡ ಚಾಲನೆ ನೀಡಿದರು. ಪುರಸಭೆ ಸದಸ್ಯ ರೆಹೆಮಾನಸಾಬ್ ಮಲ್ಲನಕೇರಿ, ತಾಪಂ ಇಒ ವಿಶ್ವನಾಥ ಹೊಸಮನಿ, ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ, ಡಾ. ಕೆ.ವಿ. ಬಡಿಗೇರ, ಡಾ. ಪ್ರವೀಣ, ಡಾ. ತಸ್ಲೀಮ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ಮಂಜುಳಾ ಸಜ್ಜನರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವದಂತಿಗೆ ಕಿವಿಗೊಡದೇ ತಪ್ಪದೇ ಲಸಿಕೆ ಹಾಕಿಸಿಲಕ್ಷ್ಮೇಶ್ವರ: ಮಗುವಿನ ಅರೋಗ್ಯಪೂರ್ಣ ಭವಿಷ್ಯಕಾಗಿ ಎರಡು ಪೋಲಿಯೋ ಹನಿ ತಪ್ಪದೆ ಹಾಕಿಸಿ ಎಂದು ಲಕ್ಷ್ಮೇಶ್ವರ ಸಮುದಾಯ ಅರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ತಿಳಿಸಿದರು.ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಭಾನುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಾತನಾಡಿದರು.ಪೋಲಿಯೋ ರೋಗವನ್ನು ದೂರ ಮಾಡುವ ಮೂಲಕ ಭವಿಷ್ಯದ ಜಗತ್ತನ್ನು ಸುಂದರವಾಗಿ ಕಾಣುವಂತೆ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕಾಗಿ ಪ್ರತಿಯೊಂದು ಶೂನ್ಯದಿಂದ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ ಅವರು, ಪೋಷಕರು ಯಾವುದೇ ವದಂತಿಗಳಿಗೆ ಕಿವಿಕೊಡದೆ, ತಪ್ಪದೆ ಪೋಲಿಯೋ ಲಸಿಕೆ ಹಾಕಿಸಿ. ಪೋಲಿಯೋ ಎಂಬ ರೋಗದಿಂದ ಮಕ್ಕಳನ್ನು ರಕ್ಷಿಸಲು ಲಸಿಕೆ ಏಕೈಕ ಮದ್ದು ಎಂದರು.
5 ವರ್ಷದೊಳಗಿನ ಮಕ್ಕಳಿಗೆ ಹತ್ತಿರ ಪೋಲಿಯೋ ಲಸಿಕೆ ಹಾಕುವ ಕೇಂದ್ರಗಳಿಗೆ ಭೇಟಿ ನೀಡಿ ಹಾಕಿಸಿ ಎಂದು ಹೇಳಿದ ಅವರು, ತಾಲೂಕಿನಲ್ಲಿ ಆರೋಗ್ಯ, ಆಶಾ ಕಾರ್ಯಕರ್ತೆಯರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ತಾಲೂಕಿನಲ್ಲಿ ಒಟ್ಟು12050 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ ಎಂದರು.ಡಾ. ಪ್ರವೀಣ ಸಜ್ಜನ, ಅರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಕರ್ಜಗಿ, ಎಫ್.ಸಿ. ಹೊಸಮಠ, ಗಂಗಾಧರ ಮೆಣಸಿನಕಾಯಿ, ಪ್ರವೀಣ ಬೋಮಲೆ, ನವೀನ ಹಿರೇಮಠ, ಬಸವರಾಜ ಕಲ್ಲೂರ, ವಿಜಯ ಕುಂಬಾರ, ದುಂಡೇಶ ಕೋಟಗಿ, ಜಾಹೀರ ಮೊಮೀನ್, ಮಂಜುನಾಥ ಬಸಾಪುರ, ರಮೇಶ ಹಾಳದೋಟದ, ಭೀಮಣ್ಣ ಯಂಗಾಡಿ, ರವಿ ಕೋರಿ, ರುದ್ರಪ್ಪ ಉಮಚಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಶ್ವೇತಾ ಶಿರೋಳ, ಆಶಾ ಭಂಡಾರಿ, ರೇಣುಕಾ ಡೊಂಬರ, ಸುಧಾ ಕಂತ್ರೋಜಿ, ಬಿ.ಎಸ್. ನಾಗಣ್ಣವರ, ರೇಖಾ ಶಿರಹಟ್ಟಿ, ಸೀತಾ ಅಮ್ಮಿನಬಾವಿ ಇದ್ದರು.