ಜಿಲ್ಲೆಯ ಕಾರ್ಮಿಕರ ಸಮಸ್ಯೆ ಪರಿಹರಿಸಲು ಮುಂದಾಗಿ: ಸಿಐಟಿಯು

| Published : Oct 19 2024, 12:23 AM IST

ಜಿಲ್ಲೆಯ ಕಾರ್ಮಿಕರ ಸಮಸ್ಯೆ ಪರಿಹರಿಸಲು ಮುಂದಾಗಿ: ಸಿಐಟಿಯು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ದುಡಿಯುವ ಜನರ ಸಮಸ್ಯೆಗಳನ್ನು ಪರಿಹಾರ ನೀಡಬೇಕಾದ ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲ. ಇಎಸ್‌ಐ ಚಿಕಿತ್ಸಾಲಯದಲ್ಲಿ ಸಹ ವೈದ್ಯರ ಮತ್ತು ಔಷಧಿಗಳ ಸಮಸ್ಯೆ, ಪಿ.ಎಫ್, ಕಚೇರಿಯಲ್ಲಿ ಆಯುಕ್ತರು ಇಲ್ಲ. ಈ ಕುರಿತು ಆಳುವ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳನ್ನು ಪರಿಹಾರ ನೀಡುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಅಗ್ರಹಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯ ದುಡಿಯುವ ಜನರ ಸಮಸ್ಯೆಗಳನ್ನು ಪರಿಹಾರ ನೀಡಬೇಕಾದ ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲ. ಇಎಸ್‌ಐ ಚಿಕಿತ್ಸಾಲಯದಲ್ಲಿ ಸಹ ವೈದ್ಯರ ಮತ್ತು ಔಷಧಿಗಳ ಸಮಸ್ಯೆ, ಪಿ.ಎಫ್, ಕಚೇರಿಯಲ್ಲಿ ಆಯುಕ್ತರು ಇಲ್ಲ. ಈ ಕುರಿತು ಆಳುವ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳನ್ನು ಪರಿಹಾರ ನೀಡುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಅಗ್ರಹಿಸಿದರು.

ನಗರದ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಶುಕ್ರವಾರ ಸಿಐಟಿಯು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತಾನಾಡಿದರು. ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡುವ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಸರ್ಕಾರ ಕ್ರಮ ವಹಿಸಬೇಕು. ಇದನ್ನು ಮಾಡದೆ ಸಹಕಾರ ಸಂಘದ ಮೂಲಕ ಕಾರ್ಮಿಕರನ್ನು ಒದಗಿಸುವುದು ದಶಕಗಳಿಂದ ಕಾಯಂಮಾತಿಯ ಅಸೆ ಹೊಂದಿರುವ ಗುತ್ತಿಗೆ ಕಾರ್ಮಿಕರಿಗೆ ನಿರಾಸೆ ಮೂಡಿಸಿದೆ ಎಂದರು.

ಸಿಐಟಿಯು ಜಿಲ್ಲಾ ಖಜಾಂಚಿ ಎ.ಲೊಕೇಶ್ ಮಾತನಾಡಿ, ಕಾರ್ಮಿಕರ ರಾಜ್ಯವಿಮಾ ಚಿಕಿತ್ಸಾಲಯದಲ್ಲಿ ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ. ಇಲ್ಲಿ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಬೇಕಾಗುವ ಔಷಧಿಗಳು ಲಭ್ಯವಾಗುತ್ತಿಲ್ಲ. ಇಲ್ಲಿ ಸಹ ಅಗತ್ಯ ಇರುವ ವೈದ್ಯರು ಮತ್ತು ಇತರೆ ಸಿಬ್ಬಂದಿಯ ಕೊರತೆ ಇದೆ. ಜಿಲ್ಲಾ ಕೇಂದ್ರದಲ್ಲಿ ಈ ತಕ್ಷಣ 300 ಹಾಸಿಗೆಯ ಇ,ಎಸ್.ಐ ಅಸ್ವತ್ರೆಯನ್ನು ಆರಂಭಿಸುವಂತೆ ಒತ್ತಾಯಿಸಿದರು

ಸಿಐಟಿಯು ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಮಾತನಾಡಿ, ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಉಪ ಲೆಕ್ಕ ಕಚೇರಿಯು ಜಿಲ್ಲಾ ಕೇಂದ್ರ ತುಮಕೂರಿನಲ್ಲಿದೆ. ಇಲ್ಲಿ ಸಾವಿರಾರು ಕಾರ್ಮಿಕರ ಪಿಂಚಣಿದಾರರ ಕೆಲಸಗಳನ್ನು ನಿರ್ವಹಣೆಗೆ ಆಯುಕ್ತರು ಹುದ್ದೆ ಇದ್ದರೂ ಕಳೆದ ಹಲವು ತಿಂಗಳುಗಳಿಂದ ಈ ಹುದ್ದೆಗೆ ಪೂರ್ಣಕಾಲದ ಅಯುಕ್ತರು ಇಲ್ಲದೆ ಕಾರ್ಮಿಕರ ಕೊರಿಕೆ ಅರ್ಜಿಗಳು / ಸಮಸ್ಯೆಗಳು ಇತ್ಯರ್ಥವಾಗದೆ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ.

ತುಮಕೂರು ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಕುಮಾರ ಮಾತನಾಡಿ, 20-25 ವರ್ಷಗಳಿಂದ ಕನಿಷ್ಟ ಕೂಲಿ ಪಡೆದು ದುಡಿಯುತ್ತಿದ್ದು ಸಮಾನ ವೇತನ ಇಲ್ಲ. ಕೆಲಸದ ಅವಧಿ- ವಾರದ ರಜೆ, ಹಬ್ಬದ ರಜೆಗಳಿಲ್ಲದೆ ದುಡಿಯುತ್ತಿದ್ದಾರೆ. ನಮಗೆ ಯಾಕೆ ಕಾಯಂ ಇಲ್ಲ ಎಂದು ಪ್ರಶ್ನಿಸಿದರು.ಕಾರ್ಮಿಕ ಅಧಿಕಾರಿ ತೇಜೊವತಿವರ ಮೂಲಕ ಕಾರ್ಮಿಕ ಸಚಿವರಿಗೆ,ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಮಹಾನಗರ ಪಾಲಿಕೆ ಕಸದ ವಾಹನ ಚಾಲಕರ ಸಂಘದ ಮಂಜುನಾಥ್, ಶ್ರೀನಿವಾಸ್, ಪೌರ ಕಾರ್ಮಿಕರ ಸಂಘ ಮಂಜುನಾಥ್, ವಾಹನ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್, ಜನವಾಧಿ ಮಹಿಳಾ ಸಂಘಟನೆಯ ಸಂಚಾಲಕಿ ಟಿ,ಅರ್, ಕಲ್ವನಾ, ಕಟ್ಟಡ ಕಾರ್ಮಿಕರ ಸಂಘದ ಇಬ್ರಾಹಿಂ ಕಲೀಲ್ ಇದ್ದರು.