ಪರಿಸರ ಉಳಿಸಲು ಮುಂದಾಗಿ: ಪ್ರಾಚಾರ್ಯ ಮುಸ್ತಫಾ

| Published : Jun 06 2024, 12:30 AM IST

ಪರಿಸರ ಉಳಿಸಲು ಮುಂದಾಗಿ: ಪ್ರಾಚಾರ್ಯ ಮುಸ್ತಫಾ
Share this Article
  • FB
  • TW
  • Linkdin
  • Email

ಸಾರಾಂಶ

World Environment Day was celebrated in Hireguntanur village near Sirigere.

ವಿಶ್ವ ಪರಿಸರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಸಲಹೆ

ಕನ್ನಡಪ್ರಭ ವಾರ್ತೆ ಸಿರಿಗೆರೆ

ನಾವೆಲ್ಲರೂ ಪರಿಸರ ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ. ಗಿಡಗಳನ್ನ ಬೆಳೆಸಿ ಅವುಗಳನ್ನು ಪೋಷಿಸಿ ಹೆಮ್ಮರವಾಗಿಸಿದರೆ ನಮಗೆ ಉತ್ತಮವಾದ ಆರೋಗ್ಯ ಲಭಿಸುತ್ತದೆ ಎಂದು ಹಿರೇಗುಂಟನೂರಿನ ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಆರ್.ಮುಸ್ತಫಾ ಹೇಳಿದರು.

ಸಮೀಪದ ಹಿರೇಗುಂಟನೂರು ಗ್ರಾಮದಲ್ಲಿ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಗಿಡಗಳನ್ನು ನೆಟ್ಟು ಪೋಷಿಸಿದರೆ ನಮಗೆ ಉತ್ತಮ ಆರೋಗ್ಯ ದೊರೆಯುತ್ತದೆ ವಿನಹ ಪರಿಸರದಿಂದ ಯಾವುದೇ ರೀತಿ ವಿನಾಶಕಾರಿಯಂತು ಆಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಖಾಲಿ ಜಾಗಗಳಲ್ಲಿ ಹಾಗೂ ಹೊಲಗಳಲ್ಲಿ ಗಿಡ ಬೆಳೆಸುವುದರ ಮೂಲಕ ಪರಿಸರ ವೃದ್ಧಿಸಬೇಕಾಗಿದೆ ಎಂದರು.

ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್‌ ಮೈತ್ರ ಮಾತನಾಡಿ, ಮಾನವ ಪರಿಸರದಿಂದ ಎಷ್ಟೆಲ್ಲ ಲಾಭ ಪಡೆದುಕೊಂಡರು ಸಹ ಪರಿಸರ ಅಭಿವೃದ್ಧಿ ಮಾಡದೆ, ವಿನಾಶದ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದೇ ರೀತಿ ಪರಿಸರದ ವಿನಾಶ ಮುಂದುವರೆದರೆ ಮುಂದೊಂದು ದಿನ ಮಾನವನ ಸರ್ವನಾಶ ಖಂಡಿತ ಎಂದರು.

ಅಕ್ಷರ ತಿಳಿಯದ ಮಹಾನ್ ತಾಯಿ ಸಾಲುಮರದ ತಿಮ್ಮಕ್ಕನವರ ಸಾಧನೆ ವಿಜ್ಞಾನಕ್ಕೆ ಒಂದು ರೀತಿ ಮಾದರಿಯಾಗಿದೆ. ಸಾವಿರಾರು ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಸಮಾಜಕ್ಕೆ ಉತ್ತಮ ಪರಿಸರ ನೀಡಿದ್ದಾರೆ ಎಂದು ತಿಳಿಸಿದರು.

ಚಿತ್ರದುರ್ಗ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯರೆಲ್ಲರೂ ಪರಿಸರ ವಿನಾಶ ಮಾಡುವಂತಹ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನೇ ಯಥೇಚ್ಛವಾಗಿ ಬಳಸುವುದರಿಂದ ಪರಿಸರದ ವಿನಾಶದ ಕಡೆಗೆ ಮಾನವ ಸಾಗುತ್ತಿದ್ದಾನೆ. ಅವುಗಳನ್ನು ನಿಯಂತ್ರಿಸಿ ಪರಿಸರವನ್ನು ಅಭಿವೃದ್ಧಿ ಕಡೆಗೆ ಸಾಗಬೇಕಾಗಿದೆ ಎಂದರು.

ಪರಿಸರದ ವಿನಾಶಕ್ಕೆ ಮಾನವನೇ ಮೊದಲ ಕಾರಣ. ಮನುಷ್ಯನ ಅತಿ ಆಸೆಯಿಂದ ಕಾಡನ್ನು ಸರ್ವನಾಶದ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ವಾತಾವರಣದಲ್ಲಿ ಕಲುಷಿತ ವಾತಾವರಣ ನಿರ್ಮಾಣಗೊಂಡಿದ್ದರಿಂದ ತಾಪಮಾನದಲ್ಲಿ ವಿಪರೀತ ಬದಲಾವಣೆಯಾಗಿ ಉತ್ತಮ ಆರೋಗ್ಯ, ಗಾಳಿ, ವಾತಾವರಣ ದೊರೆಯದೆ ಅನೇಕ ರೋಗಗಳಿಗೆ ಮಾನವ ತುತ್ತಾಗುತ್ತಿದ್ದಾನೆ. ಪ್ರತಿಯೊಬ್ಬ ನಾಗರಿಕನು ಕೂಡ ಉತ್ತಮ ವಾತಾವರಣ ಕಾಪಾಡಿಕೊಳ್ಳಲು ಪರಿಸರ ಸಂರಕ್ಷಣೆ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಿವಮೂರ್ತಿ, ಶ್ರೀಧರ್, ಪೊಲೀಸ್ ಅಧಿಕಾರಿ ಮಂಜಣ್ಣ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸಿದರು.

ಈ ವೇಳೆ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಆನಂದ್.ಡಿ ಆಲಘಟ್ಟ, ಪ್ರದೀಪ್ ಮಹಾಂತೇಶ್ ದ್ಯಾಮ ಕುಮಾರ್, ಪ್ರವೀಣ್, ಸಂದೀಪ್, ಅಭಿಷೇಕ್, ನಾಗರಾಜ್, ನಿಸಾರ್ ಅಹಮದ್ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.