ಗೋ ಸೇವೆ ಮಾಡಿದರೆ ಮಾತ್ರ ದೈವಭಕ್ತಿಗೆ ಬೆಲೆಯಿದೆ: ಸರೋಜಮ್ಮ

| Published : Feb 16 2025, 01:48 AM IST

ಗೋ ಸೇವೆ ಮಾಡಿದರೆ ಮಾತ್ರ ದೈವಭಕ್ತಿಗೆ ಬೆಲೆಯಿದೆ: ಸರೋಜಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ನಾತನ ಧರ್ಮಾನುಯಾಯಿ ಗೋ ಸೇವೆಯನ್ನು ಸ್ವಲ್ಪವಾದರೂ ನಡೆಸಿ ಬೇರೆ ಬೇರೆ ದೇವತಾರಾಧನೆ ನಡೆಸಿದರೆ ಮಾತ್ರ ಆತನ ದೈವಭಕ್ತಿಗೆ ಬೆಲೆ ಇದೆ ಎಂದು ಕೆಮ್ಮಣ್ಣು ಗ್ರಾಮದ ಗೋ ಸೇವಕಿ ಸರೋಜಮ್ಮ ಹೇಳಿದರು.

ಭದ್ರಕಾಳಿಯ ಗೋಶಾಲೆ ಆರಂಭ

ಬಾಳೆಹೊನ್ನೂರು: ಸನಾತನ ಧರ್ಮಾನುಯಾಯಿ ಗೋ ಸೇವೆಯನ್ನು ಸ್ವಲ್ಪವಾದರೂ ನಡೆಸಿ ಬೇರೆ ಬೇರೆ ದೇವತಾರಾಧನೆ ನಡೆಸಿದರೆ ಮಾತ್ರ ಆತನ ದೈವಭಕ್ತಿಗೆ ಬೆಲೆ ಇದೆ ಎಂದು ಕೆಮ್ಮಣ್ಣು ಗ್ರಾಮದ ಗೋ ಸೇವಕಿ ಸರೋಜಮ್ಮ ಹೇಳಿದರು.

ದೇವಗೋಡು ಗ್ರಾಮದ ಕೆಮ್ಮಣ್ಣು ಅಮ್ಮನ ಹಡ್ಲುವಿನಲ್ಲಿ ತನೂಡಿ ಗಂಗಯ್ಯ ಸಿದ್ಧಾರ್ಥ ಹೆಗ್ಡೆ ಸ್ಮಾರಕ ನೂತನವಾಗಿ ನಿರ್ಮಾಣಗೊಂಡ ಶ್ರೀ ಮಾತಾ ಭದ್ರಕಾಳಿ ಅಮ್ಮನ ಗೋಶಾಲೆ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಗೋ ಸೇವೆ ಮಾಡಿದರೆ ಜನ್ಮ ಜನ್ಮಾಂತರಗಳ ಪಾಪ ಕರ್ಮಗಳು ನಾಶವಾಗಿ, ಅನಂತ ಪುಣ್ಯಫಲಗಳು ದೊರೆಯಲಿದೆ ಎಂದರು.

ಕೃಷಿಕ ನೀರ್ಕಟ್ಟು ಪ್ರಶಾಂತ್ ಮಾತನಾಡಿ, ಗೋ ಆಧಾರಿತ ಕೃಷಿಯೊಂದೆ ಭಾರತದ ಕೃಷಿಯ ಅಂತಃಸತ್ವ ಹೆಚ್ಚಿಸ ಬಹುದಾಗಿದೆ. ಕೃಷಿಯಲ್ಲಿ ಗೋ ಉತ್ಪನ್ನಗಳನ್ನು ಹೆಚ್ಚು ಬಳಸುವುದರಿಂದ ಉತ್ತಮ, ಆರೋಗ್ಯಪೂರಕ ಇಳುವರಿ ಪಡೆಯಲು ಸಾಧ್ಯವಿದೆ ಎಂದರು.

ಗೋ ಶಾಲೆ ಮುಖ್ಯಸ್ಥ ನಾಗೇಶ್ ಆಂಗೀರಸ ಮಾತನಾಡಿ, ಬೆಂಗಳೂರಿನ ನಾಗಭೂಷಣ್ ಹಾಗೂ ಕೊಡಗಿನ ಮಾತಂಡ ಗಣೇಶ್ ಅವರ ಸಹಕಾರ ಪಡೆದು ಅಮ್ಮನಹಡ್ಲುವಿನಲ್ಲಿ ಆರಂಭಿಸಿರುವ ಕಾಮಧೇನು ಗೋ ಶಾಲೆ ವಿಸ್ತೃತ ಕಟ್ಟಡವನ್ನು ಹಿರಿಯ ಗೋ ಸೇವಕಿಯಿಂದ ಲೋಕಾರ್ಪಣೆಗೊಳಿಸಿದ್ದು, ಇಲ್ಲಿ 500 ಗೋವುಗಳನ್ನು ಸಾಕಿ, ಸಲಹುವ ಉದ್ದೇಶ ಹೊಂದ ಲಾಗಿದೆ. ಗೋ ಸೇವೆಗೆ ಇಂದಿನ ಯುವಜನರು ಹೆಚ್ಚು ಕೈಜೋಡಿಸಬೇಕಿದೆ ಎಂದರು.

ಕಾಮಧೇನು ಗೋ ಶಾಲೆ ವ್ಯವಸ್ಥಾಪಕರಾದ ಸುಮಾ ನಾಗೇಶ್, ಶ್ರೀರಾಮ್ ಆಂಗೀರಸ, ಶಂಕರಕುಡಿಗೆ ಸತೀಶ್, ಶಾಮು, ಲಕ್ಷ್ಮೀನಾರಾಯಣ ಮತ್ತಿತರರು ಹಾಜರಿದ್ದರು.