ಪ್ರಾಮಾಣಿಕ ನಿಸ್ವಾರ್ಥ ಸೇವೆಗೆ ಭಗವಂತನ ಸಹಯೋಗ

| Published : May 07 2025, 12:53 AM IST

ಸಾರಾಂಶ

ಸಂಘ-ಸಂಸ್ಥೆಗಳು ಸಮಾಜದ ಹಿತಕ್ಕನುಗುಣವಾಗಿ ನಿರಂತರ ಸೇವಾ ಕಾರ್ಯದಲ್ಲಿ ಗುರುತಿಸಿಕೊಳ್ಳಬೇಕು. ಪ್ರಾಮಾಣಿಕ ನಿಸ್ವಾರ್ಥ ಸೇವೆಗೆ ಭಗವಂತನ ಸಹಯೋಗ ಇರುತ್ತದೆ

ಕುಮಟಾ: ಸಂಘ-ಸಂಸ್ಥೆಗಳು ಸಮಾಜದ ಹಿತಕ್ಕನುಗುಣವಾಗಿ ನಿರಂತರ ಸೇವಾ ಕಾರ್ಯದಲ್ಲಿ ಗುರುತಿಸಿಕೊಳ್ಳಬೇಕು. ಪ್ರಾಮಾಣಿಕ ನಿಸ್ವಾರ್ಥ ಸೇವೆಗೆ ಭಗವಂತನ ಸಹಯೋಗ ಇರುತ್ತದೆ ಎಂದು ದೀವಗಿಯ ಚೇತನಾ ಸೇವಾ ಸಂಸ್ಥೆಯ ಅಧ್ಯಕ್ಷ ಆರ್.ಕೆ. ಅಂಬಿಗ ಹೇಳಿದರು.

ತಾಲೂಕಿನ ಮಾಸೂರಿನ ಕಲಬಾವಿಯಲ್ಲಿ ಶ್ರೀಗಂಗಾಮಾತಾ ಯುವ ಬಳಗ, ಕ್ರಿಕೆಟ್ ಪಂದ್ಯಾವಳಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಉ.ಕ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಚಿಂತನ ಸಾಕಾರ ವೇದಿಕೆಯ ಪ್ರಭಾಕರ ಹೆಗಡೆಕರ ಮಾತನಾಡಿದರು.

ದೀವಗಿಯ ಶ್ರೀಮದ್ಭಗವದ್ಗೀತಾ ಪಾಠಶಾಲೆಯ ಸಂಚಾಲಕಿ ಎ.ಆರ್. ಭಾರತಿ ನಿಜಶರಣ ಅಂಬಿಗರ ಚೌಡಯ್ಯನವರ ಕುರಿತು ಉಪನ್ಯಾಸ ನೀಡಿದರು.

ವಕೀಲ ವಿನಾಯಕ ಪಟಗಾರ, ಮಾಸೂರು ಅಂಬಿಗ ಸಮಾಜದ ಯಜಮಾನ ರಾಮಾ ಪಿ.ಅಂಬಿಗ, ಲುಕ್ಕೇರಿ ಅಂಬಿಗ ಸಮಾಜದ ಯಜಮಾನ ಗಂಗಾಧರ ಅಂಬಿಗ, ವೆಂಕಟೇಶ ಕೊಡಿಯಾ, ಉದ್ಯಮಿ ವಾಮನ ಪಟಗಾರ, ರಮೇಶ ಎಚ್. ನಾಯ್ಕ, ಕಲಬಾವಿಯ ಚೌಡೇಶ್ವರಿ ಯುವಕ ಸಮಿತಿಯ ಅಧ್ಯಕ್ಷ ಪಾಂಡುರಂಗ ಕೆ. ಅಂಬಿಗ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ದಂಪತಿ ಆರ್.ಕೆ. ಅಂಬಿಗ, ಎ.ಆರ್. ಭಾರತಿ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಮುಕ್ತಾ ಗಣಪತಿ ಅಂಬಿಗ, ಶಶಾಂಕ ರಾಮ ಗೌಡ ಅವರಿಗೆ ಪುರಸ್ಕರಿಸಲಾಯಿತು.

ರಶ್ಮಿ ಸಂಗಡಿಗರು ಪ್ರಾರ್ಥಿಸಿದರು. ಶ್ರೀಗಂಗಾಮಾತಾ ಯುವ ಬಳಗದ ಅಧ್ಯಕ್ಷ ಗುರು ರಾಮ ಅಂಬಿಗ ಸ್ವಾಗತಿಸಿದರು. ಮನೋಜ ಅಂಬಿಗ ಲುಕ್ಕೇರಿ ನಿರೂಪಿಸಿ, ವಂದಿಸಿದರು.