ಶ್ರೀ ಚಾಮುಂಡೇಶ್ವರಿ ದೇವಿಗೆ ಧನಲಕ್ಷ್ಮೀ ನೋಟಿನ ಅಲಂಕಾರ

| Published : Aug 09 2025, 12:00 AM IST

ಸಾರಾಂಶ

ದೇವಿಯನ್ನು ನೋಟಿನಿಂದ ಅಲಂಕಾರ ಮಾಡಿದ್ದರಿಂದ ಧನಲಕ್ಷ್ಮೀ ಅವತಾರದಲ್ಲಿ ಭಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಪ್ರತಿ ವರ್ಷ ಈ ದೇವಾಲಯದಲ್ಲಿ ಎಲ್ಲಾ ಬಗೆಯ ನೋಟುಗಳ ಸಂಗ್ರಹಿಸಿ ದೇವಿಗೆ ನೋಟಿನ ಅಲಂಕಾರ ಮಾಡುವುದು ಪ್ರಸಿದ್ದಿಗೊಂಡಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಪಟ್ಟಣದ ಶ್ರೀ ಚಾಮುಂಡೇಶ್ವರಿ ದೇವಿಗೆ ನೋಟುಗಳಿಂದ ಅಲಂಕರಿಸಿ ಭಕ್ತರನ್ನು ಕಂಗೊಳಿಸುವಂತೆ ಮಾಡಿತು.

ಪಟ್ಟಣದ ಚಾಮುಂಡೇಶ್ವರಿ ಬೀದಿಯ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ 10, 20, 50, 100, 500 ರು.ಗಳ ಮುಖ ಬೆಲೆಯ ನೋಟುಗಳ ಸಂಗ್ರಹಿಸಿ ದೇವಿಗೆ ಮಾಡಿದ ಅಲಂಕಾರ ಭಕ್ತರನ್ನು ಆಕರ್ಷಿಸಿಸಿತು.

ದೇವಾಲಯದ ಅರ್ಚಕ ಲಕ್ಷ್ಮೀಶ ನೇತೃತ್ವದಲ್ಲಿ ಇತರ ಅರ್ಚಕ ವೃಂದ ಜೊತೆಗೂಡಿ ಗುರುವಾರ ಸಂಜೆಯಿಂದಲೂ ದೇವಾಲಯದ ಒಳ ಭಾಗ ಹಾಗೂ ಗಭ ರ್ಗುಡಿಯ ಸುತ್ತಲೂ 500 ರು. ಮುಖಬೆಲೆಯ 200 ನೋಟುಗಳು ಹಾಗೂ ಉಳಿದಂತೆ ಎಲ್ಲಾ ಮುಖಬೆಲೆಯ 1 ಸಾವಿರ ನೋಟುಗಳು ಸೇರಿ ಒಟ್ಟು 4 ಲಕ್ಷದ 50 ಸಾವಿರ ರು. ಬಳಸಿಕೊಂಡು ದೇವಿಗೆ ಅಲಂಕಾರ ಮಾಡಲಾಗಿತ್ತು.

ದೇವಿಯನ್ನು ನೋಟಿನಿಂದ ಅಲಂಕಾರ ಮಾಡಿದ್ದರಿಂದ ಧನಲಕ್ಷ್ಮೀ ಅವತಾರದಲ್ಲಿ ಭಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಪ್ರತಿ ವರ್ಷ ಈ ದೇವಾಲಯದಲ್ಲಿ ಎಲ್ಲಾ ಬಗೆಯ ನೋಟುಗಳ ಸಂಗ್ರಹಿಸಿ ದೇವಿಗೆ ನೋಟಿನ ಅಲಂಕಾರ ಮಾಡುವುದು ಪ್ರಸಿದ್ದಿಗೊಂಡಿದೆ.

ಪಟ್ಟಣ ಮಾತ್ರವಲ್ಲ ತಾಲೂಕಿನ ವಿವಿಧ ಗ್ರಾಮಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಧನಲಕ್ಷ್ಮೀ ಅವತಾರದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಪುನೀತರಾದರು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಪೂಜಾ ಕಾರ್ಯ ನೆರವೇರಿಸಿ ಮಹಾ ಮಂಗಳಾರತಿ ಜೊತೆ ತೀರ್ಥ, ಪ್ರಸಾದ ವಿತರಿಸಲಾಗುತ್ತಿತ್ತು.