ವಾರಾಣಸಿಯಲ್ಲಿ ಗೋಕರ್ಣ ಅಕ್ರಾಸ್ ಇಂಡಿಯಾ ಪುಸ್ತಕ ಬಿಡುಗಡೆ

| Published : Sep 15 2024, 01:50 AM IST

ವಾರಾಣಸಿಯಲ್ಲಿ ಗೋಕರ್ಣ ಅಕ್ರಾಸ್ ಇಂಡಿಯಾ ಪುಸ್ತಕ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಪ್ರದೇಶ ಸರ್ಕಾರದ ವಸತಿ ಮತ್ತು ನಗರ ಯೋಜನೆಯ ಪ್ರಧಾನ ಕಾರ್ಯದರ್ಶಿ, ಮೂಲತಃ ಇಲ್ಲಿನ ಬಿಜ್ಜೂರಿನವರಾದ ನಿತಿನ್ ರಮೇಶ ಗೋಕರ್ಣ ಅವರು ರಚಿಸಿದ ಪುಣ್ಯ ಕ್ಷೇತ್ರದ ಪರಿಚಯಿಸುವ "ಗೋಕರ್ಣ ಅಕ್ರಾಸ್ ಇಂಡಿಯಾ " ಪುಸ್ತಕ ಬಿಡುಗಡೆ ಕಾರ್ಯಕ್ರಮ ವಾರಾಣಸಿ ಕಂಟೋನ್ಮೆಂಟ್‌ನ ಸೂರ್ಯ ಹೋಟೆಲ್‌ನಲ್ಲಿ ನಡೆಯಿತು.

ಗೋಕರ್ಣ: ಉತ್ತರ ಪ್ರದೇಶ ಸರ್ಕಾರದ ವಸತಿ ಮತ್ತು ನಗರ ಯೋಜನೆಯ ಪ್ರಧಾನ ಕಾರ್ಯದರ್ಶಿ, ಮೂಲತಃ ಇಲ್ಲಿನ ಬಿಜ್ಜೂರಿನವರಾದ ನಿತಿನ್ ರಮೇಶ ಗೋಕರ್ಣ ಅವರು ರಚಿಸಿದ ಪುಣ್ಯ ಕ್ಷೇತ್ರದ ಪರಿಚಯಿಸುವ "ಗೋಕರ್ಣ ಅಕ್ರಾಸ್ ಇಂಡಿಯಾ " ಪುಸ್ತಕ ಬಿಡುಗಡೆ ಕಾರ್ಯಕ್ರಮ ವಾರಾಣಸಿ ಕಂಟೋನ್ಮೆಂಟ್‌ನ ಸೂರ್ಯ ಹೋಟೆಲ್‌ನಲ್ಲಿ ನಡೆಯಿತು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ನಿತಿನ್ ಅವರು, ಪುಸ್ತಕವು ಕರ್ನಾಟಕದ ಗೋಕರ್ಣ ಗ್ರಾಮದ ಇತಿಹಾಸ ಮತ್ತು ಸಂಸ್ಕೃತಿಯನ್ನು ತೋರಿಸುತ್ತದೆ. ಇದು ಒಂದು ರೀತಿಯ ಅಧ್ಯಾತ್ಮಿಕ ಪ್ರಯಾಣ. ಸುಮಾರು ೩೫೦ ಪುಸ್ತಕಗಳು ಮತ್ತು ಲೇಖನಗಳ ಮೇಲೆ ಒಂದೂವರೆ ವರ್ಷಗಳ ಸಂಶೋಧನೆಯ ಆನಂತರ ಈ ಪುಸ್ತಕವನ್ನು ಬರೆಯಲಾಗಿದೆ. ಇದು ಗೋಕರ್ಣದ ಚಿತ್ರಾತ್ಮಕ ಮತ್ತು ಅಧಿಕೃತ ವಿವರಣೆಯನ್ನು ಒಳಗೊಂಡಿದೆ ಎಂದರು. ವಾರಾಣಸಿಯ ಮಹದೇವನ ನಗರದಲ್ಲಿ ಪುಸ್ತಕ ಲೋಕಾರ್ಪಣೆ ಮಾಡಿರುವುದು ನನ್ನ ಸೌಭಾಗ್ಯ ಎಂದ ಅವರು, ಗೋಕರ್ಣದಲ್ಲಿರುವ ಗಣೇಶನ ದೇವಾಲಯವು ಬಟುಕ್ ರೂಪದಲ್ಲಿದೆ. ಈ ಕುರಿತು ರಾಮಾಯಣ ಮತ್ತು ಮಹಾಭಾರತ ಕಾಲದ ಘಟನೆಯನ್ನೂ ಪ್ರಸ್ತಾಪಿಸಲಾಗಿದೆ. ಪುಸ್ತಕದಲ್ಲಿ ಈ ಎಲ್ಲ ಅಂಶಗಳನ್ನು ವಿವರಿಸಲಾಗಿದೆ ಮತ್ತು ಪ್ರಮಾಣೀಕರಿಸಲಾಗಿದೆ. ಕಠ್ಮಂಡುವಿನ (ನೇಪಾಳ) ಪಶುಪತಿನಾಥ ದೇವಾಲಯದಲ್ಲಿ ಗೋಕರ್ಣದ ಅರ್ಚಕರಿರುತ್ತಾರೆ ಎಂಬ ಮಾಹಿತಿಯನ್ನು ಇದೇ ವೇಳೆ ನಿತಿನ್ ಗೋಕರ್ಣ ಮಾಹಿತಿ ನೀಡಿದರು.

ಸೋಮನಾಥ ವಿಶ್ವವಿದ್ಯಾಲಯ ಮಾಜಿ ಉಪಕುಲಪತಿ ಪ್ರೊ. ಗೋಪಬಂಧು ಮಿಶ್ರಾ ಮಾತನಾಡಿ, ಈ ಪವಿತ್ರ ಪುಸ್ತಕ ಗೋಕರ್ಣದ ಬಗೆಗಿನ ಅವರ ಶ್ರದ್ಧೆ ಮತ್ತು ನಿರಂತರ ಪ್ರಯತ್ನಗಳ ಅನನ್ಯ, ಆಹ್ಲಾದಕರ ಮತ್ತು ಜ್ಞಾನವರ್ಧಕ ಫಲಶ್ರುತಿಯಾಗಿದೆ ಎಂದು ಹೇಳಿದರು.

ಲೇಖಕ ನಿತಿನ್ ಗೋಕರ್ಣ ಅವರ ಪತ್ನಿ ಶ್ರೀಲಾ ಗೋಕರ್ಣ, ಗಣೇಶ್ವರ ಶಾಸ್ತ್ರಿ, ದ್ರಾವಿಡ ಗುರೂಜಿ, ಪದ್ಮಶ್ರೀ ಕೆ.ಕೆ. ಪಾಠಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.