ಸಾರಾಂಶ
ಗೋಕರ್ಣ: ಪ್ರಾಂಜಲ ಮನಸ್ಸಿನವರು ಪುಣ್ಯ ಕ್ಷೇತ್ರದಲ್ಲಿ ಸಾಕಷ್ಟು ಜನರಿದ್ದು ಒಳ್ಳೆಯ ಕೆಲಸಕ್ಕೆ ಸಹಕಾರ ನೀಡಿದ್ದಾರೆ. ಇವರು ಅಭಿವೃದ್ಧಿಗೆ ಕಾರ್ಯಗಳಿಗೆ ನಿರಂತರ ಜೊತೆಯಾಗಿರಲಿ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಇಲ್ಲಿನ ಮುಖ್ಯ ಕೆಲತೀರದಲ್ಲಿ ನಡೆದ ಗೋಕರ್ಣ ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಹೇಳಿದರು.ಜಿಲ್ಲಾಡಳಿತ, ಜಿಪಂ, ಪ್ರವಾಸೋದ್ಯಮ ಇಲಾಖೆಯ ಸಹಯೋಗವಿದ್ದರೂ ಸಂಪೂರ್ಣ ಕಾರ್ಯಕ್ರಮ ಜವಾಬ್ದಾರಿ ಹೊತ್ತು ಮಾಡಿದವರಲ್ಲಿ ರಾಜಗೋಪಾಲ ಅಡಿ ಗುರೂಜಿ ಕಾರ್ಯ ಪ್ರಮುಖರು. ಮೋಹನ ನಾಯಕ, ಪ್ರದೀಪ ನಾಯಕ ದೇವರಬಾವಿ, ಮಹೇಶ ಶೆಟ್ಟಿ, ತೇಜಸ್ವಿ ನಾಯ್ಕ, ಗ್ರಾಪಂ ಅಧ್ಯಕ್ಷ ಸುಮನಾ ಗೌಡ, ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣು ಗೌಡ, ವಾಸುದೇವ ಕಾಮತ್, ನಾಗೇಶ ಗೌಡ, ಬಾಲಕೃಷ್ಭ ಅಡಿ, ಅನಿಲ್ ಶೇಟ್, ರಮೇಶ ಗೌಡ, ಗ್ರಾಪಂ ಸದಸ್ಯರಾದ ಪ್ರಭಾಕರ ಪ್ರಸಾದ, ಮಂಜುನಾಥ ಜನ್ನು ಗಣಪತಿ ಪಟಗಾರ, ರಾಮು ಕೆಂಚನ್, ಸಂದೀಪ ಅಗಸಾಲಿ, ರಾಮೇಶ್ವರ ಕುರ್ಲೆ ಹರೀಶ ನಾಯಕ, ಪವನ ಗುನಗ ಇದ್ದರು.
ಇದೇ ವೇಳೆ ಬಾಲ ಗಾಯಕಿ ದಿಯಾ ಹೆಗಡೆ ಅವರನ್ನು ಗೌರವಿಸಿದರು. ಯೋಗೇಶ ಮಿರ್ಜಾನ್, ಪ್ರತಿಭಾ ಗೌಡ ಕಾರ್ಯಕ್ರಮವನ್ನು ಆಕರ್ಷಕವಾಗಿ ನಿರ್ವಹಿಸಿದರು.ಮನರಂಚಿಸಿದ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈನಿಕಾ ವಿದ್ವಾನ್ ಆರ್.ಕೆ. ಪ್ರಕಾಶ ರುದ್ರವೀಣಾ ವಾದನ ಸಂಗೀತ ಕಡಲಲ್ಲಿ ತೇಲಿಸಿದರೆ, ನಂತರ ಬಾಲ ಗಾಯಕಿ ದಿಯಾ ಹೆಗಡೆಯ ಕಂಠಿಸಿರಿ ನೆರೆದಿದ್ದ ಜನರ ಮರಂಜಿಸಿತು.ವರಾಹರೂಪಂ ಗೀತೆಯ ಮೂಲಕ ಗಾಯಕ ಸಾಯಿವಿಘ್ನೇಶ ಕಂಠಸಿರಿಯಲ್ಲಿ ಹಾಡು ಅದ್ಭುತವಾಗಿ ಮೂಡಿ ಬಂತು. ಕಾಮಿಡಿ ಕಿಲಾಡಿಗಳು ತಂಡದ ಹಾಸ್ಯಚಟಾಕಿ ಮನೋಜ್ಞವಾಗಿ ಮೂಡಿ ಬಂದಿತು. ಗಾಯಕ ರವಿ ಮೂರೂರ, ಸಂದೇಶ ನೀರ್ಮಾರ್ಗ, ಮಸೂಶ್ರೀ ಹಳೇಮನೆ, ಮಂಗಳೂರಿನ ನೃತ್ಯ ತಂಡದ ನೃತ್ಯ ಬಹು ಆಕರ್ಷಕವಾಗಿತ್ತು. ಎಸ್ಪಿ ಎಂ. ನಾರಾಯಣ ಕಲಾವಿದರ ಜೊತೆ ಹಾಡು ಹಾಡುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಿದರು.
ಸಮಾರೋಪ ಸಮಾರಂಭದಲ್ಲಿ ದಿನಕರ ಶೆಟ್ಟಿ ಮಾತನಾಡಿದರು.