ಸಾರಾಂಶ
ವಾಹನಗಳಿಗೆ ಹೈ ಸೆಕ್ಯೂರಿಟ್ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸೈಬರ್ ಸೆಂಟರ್‌ನಲ್ಲಿ ಜನಜಂಗುಳಿ ಏರ್ಪಟ್ಟಿದೆ.
ಗೋಕರ್ಣ:
ವಾಹನಗಳಿಗೆ ಹೈ ಸೆಕ್ಯೂರಿಟ್ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸೈಬರ್ ಸೆಂಟರ್‌ನಲ್ಲಿ ಜನಜಂಗುಳಿ ಏರ್ಪಟ್ಟಿದೆ. ಇದೇ ತಿಂಗಳ 17ರ ಒಳಗೆ 2019ರ ಹಿಂದೆ ನೋಂದಣಿಯಾದ ವಾಹನಗಳಿಗೆ ಈ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯ ಎಂದು ತಿಳಿಸಿದ್ದರಿಂದ ಆನ್‌ಲೈನ್ ಮೂಲಕ ಬುಕಿಂಗ್ ಮಾಡುವ ಕಾರ್ಯ ಬುಧವಾರದ ವರೆಗೂ ಜೋರಾಗಿ ನಡೆದಿದೆ. ಆದರೆ ಸರ್ಕಾರ ಮತ್ತೆ ಗಡುವು ವಿಸ್ತರಿಸಿದ್ದು, ಜನರು ಈ ಬಗ್ಗೆ ಮತ್ತೆ ವಿಮುಖರಾಗುತ್ತಾರೂ ಎಂಬುದು ಕಾದು ನೋಡಬೇಕಿದೆ.ಈಗಾಗಲೇ ಇಲ್ಲಿನ ವಿವಿಧ ಸೈಬರ್ ಸೆಂಟರ್‌ನಲ್ಲಿ ಜನರು ತಮ್ಮ ಅಗತ್ಯ ದಾಖಲಾತಿ ಹಿಡಿದು ನೋಂದಣಿಗೆ ಕುಳಿತಿದ್ದು, ಇಲ್ಲಿಯೂ ಸರ್ವರ ಸಮಸ್ಯೆ ಉಂಟಾಗಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಹೊಸ ನಂಬರ್ ಪ್ಲೇಟ್‍ಗಳು ತಯಾರದ ನಂತರ ಶೋರೂಮ್‍ಗಳಿಗೆ ತೆರಳಿಬೇಕಾಗಿದ್ದು, ಹಲವು ಕಂಪನಿಯ ಬೈಕ್ ಶೋರೂಮ್ ಶಿರಸಿ, ಕಾರವಾರ ತೋರಿಸುತ್ತಿದೆ. ಇವರು ನೀಡಿದ ದಿನಾಂಕದಂದು ಮತ್ತೆ ಅಲ್ಲಿಗೆ ಓಡ ಬೇಕಿದೆ. ಈಗಾಗಲೇ ₹ 400ರಿಂದ ₹ 600ರ ವರೆಗೆ ಶುಲ್ಕ ವಿಧಿಸುತ್ತಿದ್ದು, ಇನ್ನೂ ಶೋರೂಮ್‌ನಿಂದ ತರಲು ಮತ್ತೆ ಪ್ರಯಾಣ ಭತ್ಯೆ ಭರಸಬೇಕಾಗಿದೆ. ಆನ್‌ಲೈನ್ ಮೂಲಕ ಬುಂಕಿಂಗ್ ಮಾಡಿಕೊಂಡವರು ಮನೆ ವಿಳಾಸಕ್ಕೆ ನಂಬರ್ ಪ್ಲೇಟ್ ಕಳುಹಿಸಲಿ ಎಂದು ಜನರು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ ಕ್ರಮ ತೆಗೆದುಕೊಳ್ಳ ಬೇಕಿದೆ.