ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಲೆನಾಡಿನ ತೀರ್ಥಹಳ್ಳಿ ಭಾಗದಲ್ಲಿ ಮನೆ ಮಾತಾಗಿದ್ದ ನ್ಯಾಷನಲ್ ಸಂಸ್ಥೆಯು ಶಿವಮೊಗ್ಗ ನಗರದ ಬಿ.ಎಚ್.ರಸ್ತೆಯಲ್ಲಿ ತೆರೆದಿರುವ ನ್ಯಾಷನಲ್ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಂ ಉದ್ಘಾಟನೆಗೊಂಡ ಮೊದಲ ದಿನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ನೂರಾರು ಗ್ರಾಹಕರು, ಗಣ್ಯರ ಸಮ್ಮುಖದಲ್ಲಿ ಪರೇಖ್ ವಿನಾಯಕ ಮಾಲ್ ಎದುರಿನ ಮೂರಂತಸ್ತಿನ ಕಟ್ಟಡದಲ್ಲಿ ಚಿನ್ನಾಭರಣ ಮಳಿಗೆ ಆರಂಭವಾಗಿದೆ. ಮಳಿಗೆಯನ್ನು ನ್ಯಾಷನಲ್ ಗ್ರೂಪ್‍ನ ಆರು ಪಾಲುದಾರರು ಹಾಗೂ ಅವರ ತಾಯಿ ಹಾಜಿರಾಬಿ ಅವರು ಉದ್ಘಾಟಿಸಿದರು. ಸಂಸ್ಥೆಯ ಪಾಲುದಾರರಾದ ಯೂಸುಫ್ ಹೈದರ್, ಅಬ್ದುಲ್ ರೆಹಮಾನ್, ಇಮ್ರಾಹಿಂ ಷರೀಫ್, ಸುಲೇಮಾನ್ ಮತ್ತಿತರರು ಪಾಲ್ಗೊಂಡಿದ್ದರು. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮತ್ತಿತರರು ಮಳಿಗೆಗೆ ಭೇಟಿ ನೀಡಿ ಶುಭ ಹಾರೈಸಿದರು.

ನೂತನ ಮಳಿಗೆಯಲ್ಲಿ ರೆಗ್ಯುಲುರ್ ವೇರ್, ಲೈಟ್‍ವೇಟ್ ಆಭರಣಗಳು, ಆ್ಯಂಟಿಕ್, ಮದುವೆ ಆಭರಣಗಳ ಸಂಗ್ರಹ, ವಜ್ರಾಭರಣ, ಮುತ್ತುರತ್ನ ಖಚಿತ ಅಮೂಲ್ಯ ಆಭರಣ, ಉಡುಗೊರೆಗಳು, ಆ್ಯಂಟಿಕ್ ಬೆಳ್ಳಿ ಆಭರಣ ಮತ್ತು ಬೆಳ್ಳಿ ಸಾಮಗ್ರಿಗಳ ಅನನ್ಯ ಸಂಗ್ರಹ ಮತ್ತು ವಿಶ್ವವಿಖ್ಯಾತ ಪ್ರಸಿದ್ಧ ಬ್ರ್ಯಾಂಡ್‍ಗಳ ವಾಚ್‍ಗಳಿದ್ದು, ವಾಚ್‍ಗಳ ಕೌಂಟರನ್ನು ನಟಿ ಖುಷಿ ರವಿ ಉದ್ಘಾಟಿಸಿದರು.

ಶೋ ರೂಂನ ಶುಭಾರಂಭದ ನಿಮಿತ್ತ ಖಚಿತ-ಉಚಿತ ಉಡುಗೊರೆ, ವಿಶೇಷ ರಿಯಾಯಿತಿ ಹಾಗೂ ಆಕರ್ಷಕ ಬಹುಮಾನಗಳಿದ್ದು, ಮೊದಲ ದಿನದಿಂದಲೇ ಗ್ರಾಹಕರನ್ನು ಆಕರ್ಷಿಸಿತು. ಭಾನುವಾರದಿಂದಲೇ ಜೂ.28ರವರೆಗೆ 1.50 ಲಕ್ಷ ರು. ಮೇಲ್ಪಟ್ಟ ಖರೀದಿಗೆ ಉಚಿತ ಚಿನ್ನದ ನಾಣ್ಯ, 30 ಸಾವಿರ ರು. ಮೇಲ್ಪಟ್ಟ ಖರೀದಿಗೆ ಉಚಿತ ಬೆಳ್ಳಿ ನಾಣ್ಯ, ಹತ್ತು ಸಾವಿರ ರು. ಮೇಲ್ಪಟ್ಟ ಖರೀದಿಗೆ ಆಕರ್ಷಕ ಗೃಹೋಪಕರಣ ನೀಡಲಾಗುತ್ತಿದೆ.


ವಜ್ರಾಭರಣ ಖರೀದಿಗೆ ಪ್ರತಿ ಕ್ಯಾರಟ್‍ಗೆ 12 ಸಾವಿರ ಬೆಳ್ಳಿ ಆಭರಣ, ಸಾಮಗ್ರಿ ಖರೀದಿಗೆ ಪ್ರತಿ ಕೆಜಿಗೆ 15 ಸಾವಿರ ರೂ. ರಿಯಾಯಿತಿ ಮತ್ತು ವಾಚ್‍ಗಳ ಮೇಲೆ ಶೇ.5ರಿಂದ 10 ರಿಯಾಯಿತಿ ಇದೆ. ಸೆ.14ರವರೆಗೆ 5 ಸಾವಿರ ರೂ. ಮೇಲ್ಪಟ್ಟ ವಾಚ್ ಖರೀದಿಯೊಂದಿಗೆ ಒಂದು ಉಚಿತ ಕೂಪನ್ ವಿಜೇತರಿಗೆ ರಾಯಲ್ ಎನ್‍ಫಿಲ್ಡ್ ಬುಲೆಟ್ ಹಾಗೂ ಸಾಪ್ತಾಹಿಕವಾಗಿ ಜೂ.21ರಿಂದ 28ರವರೆಗೆ 10 ಸಾವಿರ ರು. ಚಿನ್ನಾಭರಣ ಅಥವಾ ಬೆಳ್ಳಿ ಖರೀದಿಗೆ ಉಚಿತ ಕೂಪನ್‍ಗೆ ಟಿವಿಎಸ್ ಜುಪಿಟರ್ ಸ್ಕೂಟರ್ ಗೆಲ್ಲುವ ಅವಕಾಶವೂ ಇಲ್ಲಿದೆ.