ಬ್ಯಾಡಗಿ: ಕಳೆದ ತಿಂಗಳು ತಾಲೂಕಿನ ಕದರಮಂಡಲಗಿ ಗ್ರಾಮದ ಮನೆಯೊಂದರಲ್ಲಿ ನಗದು ಸೇರಿದಂತೆ ಬೆಳ್ಳಿ ಹಾಗೂ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಅಪ್ರಾಪ್ತ ಬಾಲಕನನ್ನು ಬ್ಯಾಡಗಿ ಪೋಲಿಸರು ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ.

ಕಳೆದ ಜ.8ರಂದು ಗ್ರಾಮದ ಮನೆಯೊಂದರಲ್ಲಿ ಬೆಳಗಿನ ಜಾವ 5 ಗಂಟೆ ವೇಳೆಗೆ ಮನೆ ಬೀಗ ಮುರಿದು ಬೀರುವಿನಲ್ಲಿದ್ದ ಒಟ್ಟು ರು. 13,74,500 ಮೌಲ್ಯದ ಬೆಳ್ಳಿ, ಬಂಗಾರ ಹಾಗೂ 44,800 ರು. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, 111 ಗ್ರಾಂ.ಚಿನ್ನ ಹಾಗೂ 355 ಗ್ರಾಂ. ಬೆಳ್ಳಿ ಆಭರಣ ಸೇರಿದಂತೆ ನಗದು 44,800 ರು.ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿ ಬಾಲಕ ತನ್ನ ನಿತ್ಯದ ಶೋಕಿ ಹಾಗೂ ಚಟಗಳಿಗಾಗಿ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಗಿ ತಿಳಿದು ಬಂದಿದೆ.

ಹಾವೇರಿ ಎಸ್ಪಿ ಯಶೋದಾ ವಂಟಗೋಡಿ, ಅಡಿಶನಲ್ ಎಸ್ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿ ಗಿರಿಮಲ್ಲ ತಳಕಟ್ಟಿ (ರಾಣಿಬೆನ್ನೂರ) ಇವರ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಬಿ. ಚಿಕ್ಕಣ್ಣನವರ, ಪಿಎಸ್‌ಐ ಭಾರತಿ ಕುರಿ, ಡಿ.ಜಿ. ಪರಮೇಶ (ಪಿಎಸ್ ಐ-1 ರಾಣಿಬೆನ್ನೂರ) ಎನ್.ಕೆ. ನಿಂಗಣ್ಣನವರ, ಎನ್.ಎಚ್. ದೊಡ್ಮನಿ (ಪಿಎಸ್ ಐ -2) ಇವರ ನೇತೃತ್ವದಲ್ಲಿ ಎಎಸ್‌ಐಗಳಾದ ಬಸವರಾಜ ಅಂಜುಟಗಿ, ಯು.ಬಿ. ನಂದಿಗೌಡ್ರ, ಸಿಬ್ಬಂದಿಗಳಾದ ಅಶೋಕ ಬಾರ್ಕಿ, ಲೋಕೇಶ ಲಮಾಣಿ, ಗುಡ್ಡಪ್ಪ ಹಳ್ಳೂರು, ಮಂಜನಾಥ ಬಾಳಿಕಾಯಿ, ಹಿದಾಯತ್ ದೊಡ್ಡಮುಲ್ಲಾ, ರಾಜು ಗೊಂದೇರ, ಪ್ರಭು ಸಿಂದಗಿಮಠ, ಅಮರಾವತಿ, ಚೇತನಾ, ಮಾರುತಿ, ಹಾಲಭಾವಿ, ಸತೀಶ ಮಾರಿಕಟ್ಟಿ, ವಾಹನ ಚಾಲಕರಾದ ಮಂಜುನಾಥ ಮುಚ್ಚಟ್ಟಿ, ಹನುಮಂತ ಸುಂಕದ ಇನ್ನಿತರರಿದ್ದ ತಂಡವು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.