ಮನೆಗಳ್ಳನಿಂದ 45 ಲಕ್ಷ ಮೌಲ್ಯದ ಚಿನ್ನಾಭರಣ ವಶ

| Published : Jan 25 2024, 02:04 AM IST

ಸಾರಾಂಶ

ರಾಮನಗರ: ಮನೆಗಳ್ಳನನ್ನು ಬಂಧಿಸಿರುವ ತಾವರೆಕೆರೆ ಪೊಲೀಸರು 45 ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ 7 ಲಕ್ಷ ರುಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ರಾಮನಗರ: ಮನೆಗಳ್ಳನನ್ನು ಬಂಧಿಸಿರುವ ತಾವರೆಕೆರೆ ಪೊಲೀಸರು 45 ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ 7 ಲಕ್ಷ ರುಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಅಮೃತೂರು ಹೋಬಳಿ ಜಿನ್ನಾಗರದ ಶಿವರಾಜು ಅಲಿಯಾಸ್ ಕಪ್ಪೆ ಶಿವ ಬಂಧಿತ. ಕಳೆದ ಅಕ್ಟೋಬರ್ 25ರಂದು ತಾವರೆಕೆರೆ ಹೋಬಳಿ ಹೊನ್ನಗನಹಟ್ಟಿ ಗ್ರಾಮದ ಕೆಂಪೇಗೌಡ ಕುಟುಂಬ ಸಮೇತ ಹೊರಗೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲವೆಂದರಿತ ಆರೋಪಿ ಶಿವರಾಜು, ಮನೆ ಬಾಗಿಲನ್ನು ಆಯುಧದಿಂದ ಮೀಟಿ ಒಳ ಪ್ರವೇಶಿಸಿ, ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಹಾಗೂ ದಾಖಲಾತಿಗಳನ್ನು ದೋಚಿ ಪರಾರಿಯಾಗಿದ್ದ. ಮನೆ ಮಾಲೀಕ ಕೆಂಪೇಗೌಡ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಟಿ.ವಿ. ಸುರೇಶ್ , ಲಕ್ಷ್ಮಿ ನಾರಾಯಣ, ಮಾಗಡಿ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಎಂ.ಪ್ರವೀಣ್ ಮಾರ್ಗದರ್ಶನದಲ್ಲಿ ಸಬ್ಇನ್ಸ್ ಪೆಕ್ಟರ್ ರಾಮಪ್ಪ ಬಿ ಗುತ್ತೇರ್ ನೇತೃತ್ವದ ತಂಡ ಆರೋಪಿ ಶಿವರಾಜುನನ್ನು ಬಂಧಿಸಿತು. ಆರೋಪಿಯಿಂದ 45 ಲಕ್ಷ ಬೆಲೆ ಬಾಳುವ ಸುಮಾರು 800 ಗ್ರಾಂ ಚಿನ್ನಾಭರಣ, 7 ಲಕ್ಷ ರು. ನಗದು ಹಣ, ಸುಮಾರು 350 ಗ್ರಾಂ ನಕಲಿ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನ ವಶ ಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್ಐ ಭಾಸ್ಕರ್, ಸಿಂಗೇಗೌಡ, ಸಿಬ್ಬಂದಿ ಮಂಜುನಾಥ್, ಹೇಮಂತ್ ಕುಮಾರ್, ಲಕ್ಷ್ಮಿಕಾಂತ, ಗೋವಿಂದರಾಜು, ಫರ್ಮಾನ್, ಶರಣಪ್ಪ, ತಿಪ್ಪೆಸ್ವಾಮಿ, ಶ್ರೀನಿವಾಸ್, ಹನುಮಂತರಾಜು, ಸೌಮ್ಯ ಪಾಲ್ಗೊಂಡಿದ್ದರು.24ಕೆಆರ್ ಎಂಎನ್ 6.ಜೆಪಿಜಿ

ತಾವರೆಕೆರೆ ಠಾಣೆ ಪೊಲೀಸರು ವಶ ಪಡಿಸಿಕೊಂಡಿರುವ ಚಿನ್ನಾಭರಣ ಹಾಗೂ ನಗದು ಹಣ.