ಯೋಗದಲ್ಲಿ ಚಿನ್ನದ ಪದಕ: ಸುದರ್ಶನಗೆ ಸನ್ಮಾನ

| Published : Jun 02 2024, 01:46 AM IST

ಸಾರಾಂಶ

ನೇಪಾಳದಲ್ಲಿ ಇಂಡೋ-ನೇಪಾಳ ಯೋಗ ಚಾಂಪಿಯನ್‌ಶಿಪ್‌-2024ರ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ಯುವಕ ಸುದರ್ಶನ ಕೃಷ್ಣ ಗುರವ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದಾನೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ನೇಪಾಳದಲ್ಲಿ ಇಂಡೋ-ನೇಪಾಳ ಯೋಗ ಚಾಂಪಿಯನ್‌ಶಿಪ್‌-2024ರ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ಯುವಕ ಸುದರ್ಶನ ಕೃಷ್ಣ ಗುರವ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದಾನೆ.

ಯೋಗಾಸನ ಸ್ಪರ್ಧೆಗೆ ಭಾಗವಹಿಸಲು ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಯುವಕನಿಗೆ ಧನ ಸಹಾಯದ ಜೊತೆಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಹಕಾರ ನೀಡಿದ್ದರು. ಯೋಗಾಸನದಲ್ಲಿ ಸಾಧನೆ ಮಾಡಿರುವ ಯುವಕ ಸುದರ್ಶನ ಗುರವ ಅವರಿಗೆ ಶಂಭು ಕಲ್ಲೋಳಿಕರ ಸನ್ಮಾನಿಸಿ, ಗೌರವಿಸಿದರು. ಧುರೀಣ ಅಪ್ಪಾಸಾಹೇಬ ಬ್ಯಾಳಿ, ರಾಘವೇಂದ್ರ ಸನದಿ, ದಯಾನಂದ ಕಾಂಬಳೆ, ರಾಮ ಮುಗಳಿ, ಕೃಷ್ಣ ಗುರವ, ನಾಗರಾಜ ಪಡಿ ಇದ್ದರು.ಭವ್ಯ ಭಾರತದ ಶಕ್ತಿಯಾಗಿರುವ ಯುವಕರು ಹೆಚ್ಚು ಹೆಚ್ಚಾಗಿ ಕ್ರೀಡೆಯಲ್ಲಿ ಸಾಧನೆ ಮಾಡಿ ದೇಶದ ಕೀರ್ತಿ ಹೆಚ್ಚಿಸಬೇಕು. ಪ್ರತಿಭೆಯಿರುವ ಯುವಕರನ್ನು ಗುರ್ತಿಸಿ ಅವರಿಗೆ ಸಹಕಾರ ನೀಡಲಾಗುತ್ತದೆ.

-ಶಂಭು ಕಲ್ಲೋಳಿಕರ, ನಿವೃತ್ತ ಐಎಎಸ್ ಅಧಿಕಾರಿ.