ಲೊಕಾಪುರ: ಜಮೀನು ಕೆಲಸ ಮಾಡುವಾಗ ಬದುವಿನಲ್ಲಿ ಚೀಲದಲ್ಲಿ ಹಾಕಿಟ್ಟಿದ್ದ ಒಟ್ಟು 15 ಗ್ರಾಂ ಬಂಗಾರದ ಸರವನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೂಸೂರ ಗ್ರಾಮದ ಅಬೂಬಕರ ರಮಜಾನಸಾಬ ಮುಲ್ಲಾ ಬಂಧಿತ ಆರೋಪಿ. ಬಂಧಿತನಿಂದ ೧೫ ಗ್ರಾಂ ತೂಕದ ಚಿನ್ನಾಭರಣ ಮತ್ತು ಒಂದು ಬೈಕ್ ಸೇರಿದಂತೆ ಒಟ್ಟು ₹3 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬನಹಟ್ಟಿ ಮೂಲದ ಅಕ್ಕವ್ವ ಮಹಾಂತೇಶ ಹೂಗಾರ ಸರ ಕಳೆದುಕೊಂಡಿದ್ದರು. ನಂತರ ಅವರು ಸರ ಕಾಣದಾದಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪು4..ಕಾಮನ್... ಬಂಗಾರ ಕಳವು ಆರೋಪಿ ಬಂಧನ
ಲೊಕಾಪುರ: ಜಮೀನು ಕೆಲಸ ಮಾಡುವಾಗ ಬದುವಿನಲ್ಲಿ ಚೀಲದಲ್ಲಿ ಹಾಕಿಟ್ಟಿದ್ದ ಒಟ್ಟು 15 ಗ್ರಾಂ ಬಂಗಾರದ ಸರವನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೂಸೂರ ಗ್ರಾಮದ ಅಬೂಬಕರ ರಮಜಾನಸಾಬ ಮುಲ್ಲಾ ಬಂಧಿತ ಆರೋಪಿ. ಬಂಧಿತನಿಂದ ೧೫ ಗ್ರಾಂ ತೂಕದ ಚಿನ್ನಾಭರಣ ಮತ್ತು ಒಂದು ಬೈಕ್ ಸೇರಿದಂತೆ ಒಟ್ಟು ₹3 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.