ಮೂಲ್ಕಿ: ಸುವರ್ಣ ಸಂಭ್ರಮ, ಸಾಧಕರಿಗೆ ಗೌರವ ಕಾರ್ಯಕ್ರಮ

| Published : Dec 26 2024, 01:03 AM IST

ಸಾರಾಂಶ

ತೋಕೂರು ಕುಮಾರ್ ಆರ್ಟ್ಸ್ ನ ಶಿವಕುಮಾರ್, ಕಲಾವಿದರಾದ ಶರತ್ ಭಟ್ ತೋಕೂರು, ಶಂಕರ್ ಕಾಫಿಕಾಡು, ಜೀವನ್ ಪಡುತೋಟ, ಆರ್ ಎನ್ ಶೆಟ್ಟಿಗಾರ್, ನರೇಂದ್ರ ಪಡುತೋಟ ಅವರನ್ನು ಸನ್ಮಾನಿಸಲಾಯಿತು ಹಾಗೂ ಉದ್ಯಮಿ ಜೈ ಕೃಷ್ಣ ಕೋಟ್ಯಾನ್ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಸೇವಾ ಸಂಸ್ಥೆಗಳು ಕಲೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಬೇಕು ಎಂದು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು.

ಪಡುಪಣಂಬೂರು ಶಾನ್ ಇಲೆಕ್ಟ್ರಿಕಲ್ಸ್ ಮತ್ತು ಕುಮಾರ್ ಆರ್ಟ್ಸ್ ತೋಕೂರು ಸಂಯೋಜನೆಯಲ್ಲಿ ಅರಮನೆಯ ಬಾಕಿ ಮಾರು ಗದ್ದೆಯಲ್ಲಿ ನಡೆದ ಸುವರ್ಣ ಸಂಭ್ರಮ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ತೋಕೂರು ಕುಮಾರ್ ಆರ್ಟ್ಸ್ ನ ಶಿವಕುಮಾರ್, ಕಲಾವಿದರಾದ ಶರತ್ ಭಟ್ ತೋಕೂರು, ಶಂಕರ್ ಕಾಫಿಕಾಡು, ಜೀವನ್ ಪಡುತೋಟ, ಆರ್ ಎನ್ ಶೆಟ್ಟಿಗಾರ್, ನರೇಂದ್ರ ಪಡುತೋಟ ಅವರನ್ನು ಸನ್ಮಾನಿಸಲಾಯಿತು ಹಾಗೂ ಉದ್ಯಮಿ ಜೈ ಕೃಷ್ಣ ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಪಡುಪಣಂಬೂರು ಗ್ರಾ.ಪಂ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್,ಹೊಯ್ಗೆಗುಡ್ಡೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅರ್ಚಕ ರಾಮ ಭಟ್, ಸುವರ್ಣ ಮೂಲಸ್ಥಾನದ ಸುಚೇಂದ್ರ ಅಮೀನ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್, ಉಪಾಧ್ಯಕ್ಷ ಶ್ಯಾಮಪ್ರಸಾದ್, ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್, ರಂಗ ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್ ಬೈಲ್, ಚಂದ್ರಹಾಸ್ ಪಡುತೋಟ, ಶಾನ್ ಇಲೆಕ್ಟ್ರಿಕಲ್ಸ್ ನ ಸುಧೇಶ್ ಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕ ದಿನಕರ್ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.