28, 29,30 ರಂದು ಸುವರ್ಣ ಮಹೋತ್ಸವ, ವ್ಯಾಪಾರ ಮೇಳ

| Published : Jun 25 2024, 12:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಚಿಕ್ಕೋಡಿಯ ರೋಟರಿ ಕ್ಲಬ್ ಸಂಸ್ಥೆಗೆ 50 ವರ್ಷಗಳು ಪೂರೈಸಿದ್ದರಿಂದ ಜೂ.28, 29,30 ರಂದು ಸುವರ್ಣ ಮಹೋತ್ಸವ ಆಚರಣೆ ಹಾಗೂ ರೋಟರಿ ವ್ಯಾಪಾರ ಮೇಳ ಆಯೋಜಿಸಲಾಗಿದೆ ಎಂದು ಚಿಕ್ಕೋಡಿ ರೋಟರಿ ಕ್ಲಬ್ ಅಧ್ಯಕ್ಷ ಶಿವಮೂರ್ತಿ ಪಡಲಾಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಚಿಕ್ಕೋಡಿಯ ರೋಟರಿ ಕ್ಲಬ್ ಸಂಸ್ಥೆಗೆ 50 ವರ್ಷಗಳು ಪೂರೈಸಿದ್ದರಿಂದ ಜೂ.28, 29,30 ರಂದು ಸುವರ್ಣ ಮಹೋತ್ಸವ ಆಚರಣೆ ಹಾಗೂ ರೋಟರಿ ವ್ಯಾಪಾರ ಮೇಳ ಆಯೋಜಿಸಲಾಗಿದೆ ಎಂದು ಚಿಕ್ಕೋಡಿ ರೋಟರಿ ಕ್ಲಬ್ ಅಧ್ಯಕ್ಷ ಶಿವಮೂರ್ತಿ ಪಡಲಾಳೆ ಹೇಳಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ ಪಟ್ಟಣದ ರೋಟರಿಯ ಸುವರ್ಣ ಮಹೋತ್ಸವ ವರ್ಷದ ನಿಮಿತ್ತ ಜೂ.28 ರಂದು ಸಂಜೆ 4.30ಕ್ಕೆ ಆರ್.ಡಿ.ಕಾಲೇಜು ಮೈದಾನದಲ್ಲಿ ವಾಣಿಜ್ಯ ಮೇಳವನ್ನು ಉದ್ಘಾಟಿಸಲಾಗುವುದು. ಈ ಸ್ಥಳದಲ್ಲಿ ವಿವಿಧ ರೀತಿಯ ಆಹಾರ, ಆಟೋಮೊಬೈಲ್, ಟೆಕ್ಸಟೈಲ್, ಬಟ್ಟೆಗಳು ಸೇರಿದಂತೆ ವಿವಿಧ ವಸ್ತುಗಳ ಮಾರಾಟದ 100 ಸ್ಟಾಲ್‌ಗಳು ಇರುತ್ತವೆ. ಅದೇ ದಿನ ಸಂಜೆ 6 ಗಂಟೆಗೆ ಪಟ್ಟಣದ ಕೇಶವ ಕಲಾ ಭವನದಲ್ಲಿ ಸುವರ್ಣ ಮಹೋತ್ಸವ ಆಚರಣೆ ಕಾರ್ಯಕ್ರಮ ನಡೆಯಲಿದೆ ಎಂದರು.ಕಾರ್ಯಕ್ರಮದಲ್ಲಿ ಕಳೆದ 50 ವರ್ಷಗಳಿಂದ ಚಿಕ್ಕೋಡಿ ರೋಟರಿಯ ಅಧ್ಯಕ್ಷರು, ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುವುದು. ರೋಟರಿ ಇಂಟರ್‌ನ್ಯಾಷನಲ್‌ ನಿರ್ದೇಶಕ ಮಹೇಶ ಕೊಟಬಾಗಿ, ಜಿಲ್ಲಾ ಗವರ್ನರ್ ನಾಸೀರ ಬೋರಸದ್ವಾಲ, ಸಹಾಯಕ ಗವರ್ನರ್ ಅವಿನಾಶ ಪೋತದ್ದಾರ ಸೇರಿದಂತೆ ಬೆಳಗಾವಿ, ಕೊಲ್ಹಾಪುರ, ಸಾಂಗಲಿ ಜಿಲ್ಲಾ ರೋಟರಿ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ವಿವರಿಸಿದರು.ಗೋಷ್ಠಿಯಲ್ಲಿ ಕ್ಲಬ್‌ನ ಕಾರ್ಯದರ್ಶಿ ಶಿರೀಷ ಮೆಹ್ತಾ, ಸುವರ್ಣ ಮಹೋತ್ಸವದ ಅಧ್ಯಕ್ಷ ವಿಜಯ ಮಾಂಜರೇಕರ, ಕಾರ್ಯಕ್ರಮದ ಅಧ್ಯಕ್ಷ ಮಹೇಶ್ ನೇರ್ಲಿ, ಸಹಾಯಕ ಗವರ್ನರ್ ಮಕರಂದ ಕುಲಕರ್ಣಿ, ಖಜಾಂಚಿ ದರ್ಶನ ಉಪಾಧ್ಯ, ರಾಜ ಜಾಧವ, ರಾಜೇಂದ್ರ ಪಾಟೀಲ, ಮಂಜುನಾಥ ದುಂಬಾಳ, ರಾಜು ಗೊಂಡೆ, ಶ್ರೀಧರ್ ಗಜನ್ನವರ, ಅಭಯ ಗೌರಜ, ಅಶೋಕ ಪಾಠಕ, ರಾಜು ಪಾಠಕ, ರಾಜೇಶ್ವರಿ ಕುಲಕರ್ಣಿ, ಪ್ರತಿಮಾ ಮಹಾಜನ, ವೇದಾ ಜಾಧವ ಉಪಸ್ಥಿತರಿದ್ದರು.

ಕೋಟ್‌....1974ರಲ್ಲಿ ಚಿಕ್ಕೋಡಿ ಪಟ್ಟಣದಲ್ಲಿ ರೋಟರಿ ಕ್ಲಬ್ ಆರಂಭಗೊಂಡಿದ್ದು, ಪ್ರಸ್ತುತ 77 ಸದಸ್ಯರಿದ್ದಾರೆ. ರೋಟರಿಯಲ್ಲಿ ಜಾತಿ, ಧರ್ಮ, ರಾಜಕೀಯ, ಗುಂಪುಗಾರಿಕೆ, ಬಡವರು, ಶ್ರೀಮಂತರು ಕಾಣುವುದಿಲ್ಲ. ಸೇವಾ ಮನೋಭಾವನೆಯಿಂದ ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸಲಾಗುತ್ತಿದೆ. ಚಿಕ್ಕೋಡಿ ರೋಟರಿಯು ಉಳಿಸಿದ ಮೊತ್ತದಿಂದ ಸಾರ್ವಜನಿಕರಿಗೆ ಮತ್ತು ಸಮಾಜಕ್ಕೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ರೋಟರಿ ಇಂಟರ್‌ನ್ಯಾಷನಲ್ ಕ್ಲಬ್‌ನಿಂದ ಪಲ್ಸ್ ಪೋಲಿಯೊವನ್ನು ವಿಶ್ವದಾದ್ಯಂತ ವಿತರಿಸಲಾಗುತ್ತದೆ. ಬೆಳಗಾವಿಯಲ್ಲಿ ಡಯಾಲಿಸಿಸ್ ಯಂತ್ರ ಸೇರಿದಂತೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.-ಶಿವಮೂರ್ತಿ ಪಡಲಾಳೆ, ಚಿಕ್ಕೋಡಿ ರೋಟರಿ ಕ್ಲಬ್ ಅಧ್ಯಕ್ಷರು.