ಸಾರಾಂಶ
ಹುಬ್ಬಳ್ಳಿ: ವಿದ್ಯುತ್ ದರ ಹೆಚ್ಚಳ, ಉರುವಲು ಕೊರತೆಯಿಂದ ಮನೆಗಳಲ್ಲಿ ನೀರು ಕಾಯಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ, ಈಗ ಈ ಸಮಸ್ಯೆಗೆ ಮುಕ್ತಿ ನೀಡುವುದಕ್ಕಾಗಿಯೇ ಗೊಮ್ಮಟೇಶ್ ಬಾಯ್ಲರ್ ಆ್ಯಂಡ್ ಸೋಲಾರ್ ಸಂಸ್ಥೆಯು ಸ್ಟೀನ್‌ಲೆಸ್ ಸ್ಟೀಲ್ ಕಾಯಿಸುವ ಟಾಕಿ (ಬಾಯ್ಲರ್) ಪರಿಹಾರದ ರೂಪದಲ್ಲಿ ನೀಡುತ್ತಿದೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದ ಗೊಮಟೇಶ ಕೃಷಿ ಸೇವಾ ಕೇಂದ್ರ ಇಂತಹ ಬಾಯ್ಲರ್‌ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ನೀಡಿದೆ. ಧಾರವಾಡದಲ್ಲಿ ಶನಿವಾರದಿಂದ ಆರಂಭವಾಗಿರುವ ಕೃಷಿ ಮೇಳದಲ್ಲಿ ಗ್ರಾಹಕರು ಇವುಗಳ ಖರೀದಿಗೆ ಮುಗಿ ಬೀಳುತ್ತಿದ್ದಾರೆ.ಸುಮಾರು 18 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿರುವ ಈ ಕೇಂದ್ರವು ಕೃಷಿ ಮೇಳದಲ್ಲಿ ಮಳಿಗೆ ಸ್ಥಾಪಿಸಿದ್ದು, ಶುದ್ಧ ಸ್ಟೀಲ್‌ನಿಂದ ತಯಾರಿಸಲಾಗಿದೆ. ಮೇಳದಲ್ಲಿ ಒಟ್ಟು 5 ಬಗೆಯ ಟಾಕಿಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ಮಾಡುತ್ತಿದೆ. ಇದರಲ್ಲಿ ಎರಡು ಬಗೆಯಲ್ಲಿ ಕಟ್ಟಿಗೆ, ಇಲೆಕ್ಟಿಕ್, ಗ್ಯಾಸ್, ಡಿಸೇಲ್ ಬಳಕೆ ಮಾಡಿ ನೀರು ಕಾಯಿಸುವ ಬಾಯ್ಲರ್ ದೊರೆಯುತ್ತಿವೆ. ರಾಷ್ಟ್ರೀಯ ಮಾನ್ಯತೆ ಪಡೆದ ಎಂಜಿನಿಯರ್‌ಗಳು ಮೊಟ್ಟಮೊದಲ ಬಾರಿಗೆ ರೂಪಿಸಿದೆ, ದೀರ್ಘಕಾಲ ಬಾಳಿಕೆ ಬರುವ ಬಾಯ್ಲರ್ ಇದಾಗಿದ್ದು, ಕೇವಲ 7 ನಿಮಿಷದಲ್ಲಿ ಬಿಸಿ ನೀರು ದೊರೆಯುತ್ತದೆ. ಒಮ್ಮೆ ನೀರು ಕಾಯಿಸಿದರೆ 18 ಗಂಟೆಗಳ ಕಾಲ ಬಿಸಿಯಾಗಿರುತ್ತದೆ. ಈ ಟಾಕಿ ನಿರ್ವಹಣೆ ಸಹ ಕಡಿಮೆ. ಕಟ್ಟಿಗೆ, ರದ್ವಿ, ರಟ್ಟು ತೆಂಗಿನ ನಾರು, ಇತರ ನಿರುಪಯುಕ್ತ ವಸ್ತುಗಳನ್ನು ಬಾಯ್ಲರ್‌ಗೆ ಬಳಸಬಹುದಾಗಿದೆ.
20 ಲೀಟರ್‌ನಿಂದ ಹಿಡಿದು 1000 ಲೀಟರ್ ಸಾಮರ್ಥ್ಯ ಹೊಂದಿರುವ ಬಾಯ್ಲರ್‌ಗಳು ಮಾರಾಟಕ್ಕೆ ಲಭ್ಯವಿವೆ. 35 ರಿಂದ 40 ವರ್ಷಗಳ ವರೆಗೆ ಬಾಳಿಕೆ ಬರಲಿವೆ. ಕೃಷಿಮೇಳದಲ್ಲಿ ಬುಕ್ ಮಾಡಿದರೆ ಸೂಕ್ತ ರಿಯಾಯಿತಿ ಜತೆಗೆ ಉಚಿತವಾಗಿ ಹೋಂ ಡೆಲಿವರಿ ವ್ಯವಸ್ಥೆ ಕಲ್ಪಿಸಿದೆ.ಗೊಮಟೇಶ ಸೋಲಾರ್:
ಮೇಳದಲ್ಲಿ ಬಾಯ್ಲರ್‌ನೊಂದಿಗೆ ಟಾಪೆಸ್ಟ್ ಮಾಡಲ್‌ನ ಸೋಲಾರ್‌ಗಳನ್ನು ಮಾರಾಟಕ್ಕಿರಿಸಿರುವುದು ಮತ್ತಷ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಿಎಲ್, ಜಿಐ, ಎಸ್‌ಎಸ್, ಎಂಎಸ್ ಸೇರಿದಂತೆ ಹಲವು ವಿಧಗಳಲ್ಲಿ ಸೋಲಾರ್‌ಗಳು ಇಲ್ಲಿ ದೊರೆಯುತ್ತಿವೆ.ಇಲ್ಲಿಗೆ ಸಂಪರ್ಕಿಸಿ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಳಗವಾಡಿಯಲ್ಲಿರುವ ಗೊಮ್ಮಟೇಶ ಬಾಯ್ಲರ್ ಆ್ಯಂಡ್ ಸೋಲಾರ್ ಸಂಸ್ಥೆ ಮೊ 9972284678, 9686704678, 9353100008 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.ನಮ್ಮದು 18 ವರ್ಷಗಳ ಅನುಭವ ಹೊಂದಿದ ಸಂಸ್ಥೆಯಾಗಿದೆ. ಈಗಾಗಲೇ ಕರ್ನಾಟಕ ಸೇರಿ ಅನ್ಯ ರಾಜ್ಯಗಳಲ್ಲೂ ಬಾಯ್ಲರ್ ಮಾರಾಟ ಮಾಡಲಾಗಿದೆ. ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ಗೊಮ್ಮಟೇಶ ಬಾಯ್ಲರ್ ಆ್ಯಂಡ್ ಸೋಲಾರನ ಮಾಲಿಕ ಪ್ರಜ್ವಲ್ ಐತವಾಡಿ ತಿಳಿಸಿದ್ದಾರೆ.