ಸಾರಾಂಶ
ಹೊಸಕೋಟೆ: ಕರ್ನಾಟಕಕ್ಕೆ ಜೈನ ಸಮುದಾಯ ಅತ್ಯುತ್ತಮ ಕೊಡುಗೆ ನೀಡಿದ್ದು, ಗಂಗರ ಕಾಲದಿಂದಲೂ ಉತ್ತಮ ಬಾಂಧವ್ಯ ಬೆಸೆದುಕೊಂಡಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ: ಕರ್ನಾಟಕಕ್ಕೆ ಜೈನ ಸಮುದಾಯ ಅತ್ಯುತ್ತಮ ಕೊಡುಗೆ ನೀಡಿದ್ದು, ಗಂಗರ ಕಾಲದಿಂದಲೂ ಉತ್ತಮ ಬಾಂಧವ್ಯ ಬೆಸೆದುಕೊಂಡಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ರಾಷ್ಟ್ರೀಯ ಹೆದ್ದಾರಿ-೭೫ರ ಪಕ್ಕದಲ್ಲಿ ನೂತನ ಜೈನ್ ಸಮುದಾಯದ ನೂತನ ಜೀರಾವಾಲ ಪಶುನಾಥ ಜೈನ್ ದೇವಾಲಯದ ದೀಕ್ಷಾ ಕಲ್ಯಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜೈನ್ ಸಮುದಾಯ ಶತಮಾನಗಳಿಂದಲೂ ಕನ್ನಡಿಗರ ಜೊತೆ ಬೆರೆತುಹೋಗಿದೆ. ಕನ್ನಡಿಗರು-ಜೌನರ ಬಾಂಧವ್ಯಕ್ಕೆ ಶ್ರವಣಬೆಳಗೊಳದಲ್ಲಿರುವ ಬಾಹುಬಲಿಯ ವಿಗ್ರಹವೇ ನಿದರ್ಶನ. ರಾಜ್ಯದಲ್ಲಿ ೬೦ ಜೈನ ದೇವಾಲಯಗಳಿದ್ದು ಇಂದು ಹೊಸಕೋಟೆಯಲ್ಲಿ ನೂತನ ದೇವಾಲಯ ಉದ್ಘಾಟಿಸುತ್ತಿರುವುದು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ. ಜೈನ ಸಮುದಾಯಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.ಜೈನ ಸಮುದಾಯದ ಸ್ವಾಮೀಜಿ ಶ್ರೀ ಚಂದ್ರ ಯಶ ಸೂರ್ಯ ಸ್ವಾಮೀಜಿ ಮಾತನಾಡಿ, ದಯವೇ ಧರ್ಮದ ಮೂಲ ಎಂಬಂತೆ ಅಹಿಂಸೆ ಸಹ ಧರ್ಮದ ಮೂಲವಾಗಿದ್ದು, ದೇಶದಲ್ಲಿ ಅಹಿಂಸಾ ರಹಿತ ಆಡಳಿತವಾಗಲಿ, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ದೇವಾಲಯ ನಿರ್ಮಾಣಕ್ಕೆ ಪ್ರಮುಖ ಕೊಡುಗೆ ನೀಡಿದ ಸಂಘದ ವಸಂತಿಬಾಯಿ ಭೋರ್‌ಮಲ್‌ಜೀ ತುಲೇಛ್ವಾ ವೋತಾ ರಿಲೀಜಿಯಸ್ ಮತ್ತು ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಭರತ್ ಜೈನ್, ರಾಜೇಂದ್ರ ಜೈನ್, ಹಿತೇಂದ್ರ ಜೈನ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವಮೂರ್ತಿ, ನಿರ್ದೇಶಕ ಡಾ.ಎಚ್.ಎಂ.ಸುಬ್ಬರಾಜ್, ಕಾಂಗ್ರೆಸ್ ನಗರಾಧ್ಯಕ್ಷ ಬಿ.ವಿ. ಬೈರೇಗೌಡ, ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಡಿ.ಎಸ್.ರಾಜ್ ಕುಮಾರ್, ತಾಲೂಕಿನ ಜೈನ ಸಮುದಾಯದ ಮುಖಂಡರಾದ ಧರ್ಮಿ ಚಂದ್, ದೀಪಕ್ ಜೈನ್, ನರೇಂದ್ರ ಜೈನ್ ಮೊದಲಾದವರು ಹಾಜರಿದ್ದರು.ಫೋಟೋ: 19 ಹೆಚ್‌ಎಸ್‌ಕೆ 1
ಹೊಸಕೋಟೆಯಲ್ಲಿ ನಿರ್ಮಿಸಿರುವ ಜೀರಾವಾಲ ಪಶುನಾಥ ಜೈನ್ ದೇವಾಲಯದ ದೀಕ್ಷಾ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಿ ಶುಭ ಹಾರೈಸಿದರು.