ಸಾರಾಂಶ
ಕುಕನೂರು: ಉತ್ತಮ ಆರೋಗ್ಯಕ್ಕೆ ಸದೃಢ ಮನಸ್ಸು ಬೇಕು ಎಂದು ವೈದ್ಯ ಮಂಜುನಾಥ ಬ್ಯಾಲಹುಣಸಿ ಹೇಳಿದರು.ತಾಲೂಕಿನ ತಳಬಾಳಿನ ಸರ್ಕಾರಿ ವಸತಿಯುಕ್ತ ಮಾದರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುಕನೂರು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಬನ್ನಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿಜರುಗಿದ ಆರೋಗ್ಯ ಜಾಗೃತಿ ಮತ್ತು ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯದ ಬಗ್ಗೆ ಕಾಳಜಿ ಪ್ರತಿಯೊಬ್ಬರಲ್ಲಿ ಇರಬೇಕು. ಆರೋಗ್ಯವನ್ನು ಯಾರು ಹಾಳು ಮಾಡಿಕೊಳ್ಳಬಾರದು. ದುಶ್ಚಟಗಳಿಗೆ ಯುವಕರು ದಾಸರಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ದುಶ್ಚಟಗಳಿಗೆ ಒಳಗಾಗದೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.ಪ್ರತಿಯೊಬ್ಬರು ಸದೃಢವಾಗಿ ಬಲಿಷ್ಠವಾಗಿ ಮತ್ತು ದೈಹಿಕವಾಗಿ ಮಾನಸಿಕವಾಗಿ ಸದೃಢತೆ ಹೊಂದಬೇಕು ಎಂದು ಹೇಳಿದರು.ಸಹಾಯಕ ಪ್ರಾಧ್ಯಾಪಕಿ ಶುಭಾ ಮಾತನಾಡಿ, ಆರೋಗ್ಯದ ಬಗ್ಗೆ ಸರ್ಕಾರ ಸಹ ಕಾಳಜಿ ವಹಿಸುತ್ತಿದ್ದು, ಬಡವರ್ಗದ ಜನರಿಗೆ ಅನುಕೂಲ ಆಗಲು ಸರ್ಕಾರಿ ಯೋಜನೆಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.ದಂತವೈದ್ಯೆ ಸುಷ್ಮಾ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮತ್ತು ಮದ್ಯ, ಮಾದಕ ವಸ್ತುಗಳಿಗೆ ಅದೆಷ್ಟೋ ಯುವಕರು ಬಲಿಯಾಗುತ್ತಿದ್ದಾರೆ ಎಂದರು.ಪ್ರಾಂಶುಪಾಲ ಯಮನೂರಪ್ಪ ಮಾತನಾಡಿ, ಆರೋಗ್ಯದ ಕಾಳಜಿ ಸದೃಢತೆ ಬಗ್ಗೆ ಗಮನಹರಿಸಬೇಕು. ಸಮಾನತೆ, ಪ್ರಜಾಪ್ರಭುತ್ವದ ಈ ದಿನಮಾನಗಳಲ್ಲಿ ಆರೋಗ್ಯದ ಕಾಳಜಿ ಪ್ರತಿಯೊಬ್ಬರ ಹಕ್ಕು. ಅದು ಕೂಡ ಸಾರ್ವತ್ರಿಕ ಎಂದರು.ಆರೋಗ್ಯ ಮಿತ್ರ ಗೋವಿಂದರಾವ್ ಮರಾಠಿ ಮತ್ತು ಐಸಿಟಿಸಿ ಆಪ್ತ ಸಮಾಲೋಚಕಿ ಕವಿತಾ, ಆರ್.ಕೆ.ಎಸ್.ಕೆ. ಯೋಜನೆಯ ಆಪ್ತ ಸಮಾಲೋಚಕ ಕಳಕಪ್ಪ ಬಂಡಿ, ಎಸ್‌ಟಿಎಸ್ ವಿಭಾಗದ ಟಿಬಿ ವಿಭಾಗದ ಸಂಯೋಜಕ ಪ್ರವೀಣ್ ಮತ್ತು ಪ್ರಯೋಗಶಾಲಾ ತಜ್ಞರಾದ ವಿರುಪಾಕ್ಷಿ, ಅನಿಲ್ ನೇತ್ರಾಧಿಕಾರಿ ಶರಣಪ್ಪ, ಯಾಸಿನ್, ಕಮ್ಯುನಿಟಿ ಹೆಲ್ತ್ ಆಫೀಸರ್ ಪ್ರತಿಭಾ, ಪ್ರಾಧ್ಯಾಪಕರಾದ ನವೀನ ಮರಿಗೌಡ್ರು, ಸಂತೋಷ ಇತರರಿದ್ದರು.