ಸೈನಿಕರ ಸೇವೆ ನಿಜಕ್ಕೂ ಶ್ಲಾಘನೀಯ

| Published : Feb 19 2024, 01:37 AM IST

ಸಾರಾಂಶ

ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಕುಟುಂಬದ ಬಗ್ಗೆ ಚಿಂತಿಸದೇ ದೇಶ ರಕ್ಷಣೆಗಾಗಿ ತ್ಯಾಗಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ಭಾರತೀಯ ಸೈನಿಕರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಜಾನಪದ ಹಾಡಕಿ ಮಾಸ್ತರ ಗುರುನಾಥ ಮುರುಡಿ ಹೇಳಿದರು.

ದೇವರಹಿಪ್ಪರಗಿ:

ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಕುಟುಂಬದ ಬಗ್ಗೆ ಚಿಂತಿಸದೇ ದೇಶ ರಕ್ಷಣೆಗಾಗಿ ತ್ಯಾಗಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ಭಾರತೀಯ ಸೈನಿಕರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಜಾನಪದ ಹಾಡಕಿ ಮಾಸ್ತರ ಗುರುನಾಥ ಮುರುಡಿ ಹೇಳಿದರು.

ತಾಲೂಕಿನ ಪಡಗಾನೂರ ಗ್ರಾಮದ ಯೋಧ ರೇವಣಸಿದ್ದ ಮಲ್ಲಪ್ಪ ಸಾತಿಹಾಳ ಸುಮಾರು 22 ವರ್ಷಗಳ ಕಾಲ ದೇಶ ಸೇವೆ ಮಾಡಿ ಮರಳಿ ಸ್ವಗ್ರಾಮಕ್ಕೆ ಆಗಮಿಸಿದ ಕಾರಣ ಹಾಗೂ ಚಿತ್ರಕಲಾ ದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶ್ರೀಶೈಲ್ ಶರಣಪ್ಪ ಭಜಂತ್ರಿ ಅವರಿಗೆ ಗ್ರಾಮದ ಶ್ರೀ ಲಗಮಾದೇವಿ ಡೊಳ್ಳಿನ ಸಂಘದ ಪರವಾಗಿ ಸಮಾಜದ ವತಿಯಿಂದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೈನಿಕರಿಂದ ಇಂದಿನ ಯುವಜನತೆ ಶಿಸ್ತಿನ ಜೀವನ, ತ್ಯಾಗ ಮತ್ತು ದೇಶಪ್ರೇಮದ ಬಗ್ಗೆ ಸ್ಪೂರ್ತಿ ಪಡೆಯಬೇಕು. ಸೈನಿಕರಿಗೆ ಗೌರವ ತೋರಿಸುವುದೆಂದರೆ ದೇವರಿಗೆ ಪೂಜೆ ಮಾಡಿದಂತೆ. ಸುಮಾರು 22 ವರ್ಷಗಳ ಕಾಲ ದೇಶ ಸೇವೆ ಮಾಡಿ ಗ್ರಾಮಕ್ಕೆ ಆಗಮಿಸಿದ್ದಾರೆ ಹಾಗೂ ಚಿತ್ರಕಲಾದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಆದಕಾರಣ ಲಗಮಾದೇವಿ ಡೊಳ್ಳಿನ ಸಂಘದ ಪದಾಧಿಕಾರಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಟ್ಟೆಪ್ಪ ಪೂಜಾರಿ, ಮಾರುತಿ ಮಾಸ್ತರ, ಯಲ್ಲಪ್ಪ ನಿಡುಗುಂದಿ, ರಮೇಶ ಮುರಾಳ, ಸುರೇಶ ಹಿಪ್ಪರಗಿ, ಮತ್ತು ಸಾಸನೂರ, ರೇವಣಸಿದ್ಧ ಯಾಳವಾರ ,ಪರಸಪ್ಪ ಮುರಾಳ, ಅಮೋಗಿ ಕಗ್ಗೋಡ, ಮಲ್ಲು ಬತಗುಣಕಿ, ಮುಡಿಸಿದ್ದ ಸಾತಿಹಾಳ, ರೇವಣಸಿದ್ದ ಮುರಾಳ, ಸಾಹೇಬಣ್ಣ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

--