- ಆರೋಗ್ಯ ತಪಾಸಣೆ-ರಕ್ತದಾನ ಶಿಬಿರದಲ್ಲಿ ದಿನೇಶ ಶೆಟ್ಟಿ ಅಭಿಮತ
- - -ದಾವಣಗೆರೆ: ಒತ್ತಡದ ಜೀವನದಿಂದ ಮುಕ್ತಿ ಹೊಂದಲು ನಿತ್ಯ ವಾಕಿಂಗ್, ವ್ಯಾಯಾಮ, ಧ್ಯಾನ, ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.
ನಗರದ ಎಸ್.ಎಸ್. ಬಡಾವಣೆಯ ಕುಂದವಾಡ ಕೆರೆ ರಸ್ತೆಯಲ್ಲಿರುವ ಲಿಟಲ್ ಚಾಂಪ್ಸ್ ಗುರುಕುಲಂ ಶಾಲೆಯಲ್ಲಿ ಶನಿವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಎಸ್.ಎಸ್.ಕೇರ್ ಟ್ರಸ್ಟ್, ಲೈಫ್ ಲೈನ್ ಸ್ವಯಂ ರಕ್ತದಾನಿಗಳ ಸಮೂಹ, ಲಿಟಲ್ ಚಾಂಪ್ಸ್ ಗುರುಕುಲಂ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಅಪಘಾತ ಸಂದರ್ಭ, ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ಸಾಕಷ್ಟು ರಕ್ತದ ಅವಶ್ಯಕತೆ ಇರುತ್ತದೆ. ರಕ್ತಕ್ಕೆ ಪರ‍್ಯಾಯ ವಸ್ತುವಿಲ್ಲ. ಈ ಹಿನ್ನೆಲೆಯಲ್ಲಿ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ವಿವರಿಸಿದರು.ಸಂಸ್ಥೆ ಮಾರ್ಗದರ್ಶಕರಾದ ಡಾ. ಎ.ಎಂ. ಶಿಲ್ಪಶ್ರೀ ಮಾತನಾಡಿ, ಲೈಫ್ ಲೈನ್ ಸಮೂಹದ ಈ ಸದಸ್ಯರು ಕೋವಿಡ್ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನೂ ಗಮನಿಸದೇ ನಿರಂತರ ನೆರವು ನೀಡುತ್ತ ಬಂದಿದ್ದಾರೆ. ರಕ್ತದಾನ, ಅಗತ್ಯ ಇರುವವರಿಗೆ ಆಹಾರ ಪೊಟ್ಟಣ, ದಿನಸಿ ಕಿಟ್, ಔಷಧಿ ವಿತರಣಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ಚೆನ್ನೈ, ಕೊಡಗು ಸೇರಿದಂತೆ ವಿವಿಧ ಭಾಗಗಳಲ್ಲಾದ ಜಲಾವೃತ, ನೆರೆ ಹಾವಳಿ ಸಂದರ್ಭದಲ್ಲಿ ತಾವೇ ಎಲ್ಲರೂ ಸೇರಿ ಅಲ್ಲಿನ ತೊಂದರೆಯಲ್ಲಿದ್ದ ಜನರಿಗೆ ಸಹಾಯ ಮಾಡಿದ್ದನ್ನು ಇಲ್ಲಿ ಸ್ಮರಿಸಬೇಕಾಗಿದೆ ಎಂದರು.
ಸಮೂಹದ ಕಾರ್ಯದರ್ಶಿ, ರಕ್ತದಾನಿ ಅನಿಲ್ ಬಾರೆಂಗಳ್ ಮಾತನಾಡಿದರು. ಗುರುಕುಲಂ ವ್ಯವಸ್ಥಾಪಕ ಪೃಥ್ವಿರಾಜ ಬಾದಾಮಿ, ಪ್ರಾಚಾರ್ಯೆ ಛಾಯಾ ಪೃಥ್ವಿರಾಜ್, ಕೆ.ಎನ್. ಗೋಪಾಲಕೃಷ್ಣ, ಮಾಧವಿ ಗೋಪಾಲಕೃಷ್ಣ, ರಾಜೇಶ್ವರಿ, ಎಂ.ಜಿ.ಶ್ರೀಕಾಂತ್, ಶೇಷಾಚಲ, ನಟರಾಜ, ವಿಕಾಸ ಹರಿಹರ, ಚನ್ನಬಸವ ಶೀಲವಂತ್, ಸಂತೋಷ ಗಾಯಕವಾಡ್, ಎ.ಎನ್. ಕೃಷ್ಣ, ಸುನಿಲ್, ರಾಜೇಂದ್ರ, ಶ್ರೀಕಾಂತ್, ಎಸ್.ಎಸ್.ಕೇರ್ ಟ್ರಸ್ಟಿನ ಸಂಯೋಜನಾಧಿಕಾರಿ ಹರೀಶ, ಬಾಪೂಜಿ ರಕ್ತನಿಧಿ ಕೇಂದ್ರದ ಡಾ.ಗೋವರ್ಧನ್, ಇತರೆ ವೈದ್ಯರು, ಪದಾಧಿಕಾರಿಗಳು, ಸಿಬ್ಬಂದಿ ಇತರರು ಇದ್ದರು.
35 ಜನರು ರಕ್ತದಾನ ಮಾಡಿದರು. 225ಕ್ಕೂ ಹೆಚ್ಚು ಜನರು ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರು.
- - --13ಕೆಡಿವಿಜಿ32: ದಾವಣಗೆರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ದಿನೇಶ ಕೆ. ಶೆಟ್ಟಿ, ಅನಿಲ್ ಬಾರೆಂಗಳ್, ಡಾ.ಶಿಲ್ಪಶ್ರೀ ಇತರರು ಇದ್ದರು. ಹಲವರು ರಕ್ತದಾನ ಮಾಡಿದರು.