ಹೈನುಗಾರಿಕೆಯಿಂದ ಉತ್ತಮ ಆದಾಯ ಪಡೆಯಲು ಸಾಧ್ಯ-ಡಾ. ಗಿರೀಶ

| Published : Oct 27 2024, 02:35 AM IST / Updated: Oct 27 2024, 02:36 AM IST

ಹೈನುಗಾರಿಕೆಯಿಂದ ಉತ್ತಮ ಆದಾಯ ಪಡೆಯಲು ಸಾಧ್ಯ-ಡಾ. ಗಿರೀಶ
Share this Article
  • FB
  • TW
  • Linkdin
  • Email

ಸಾರಾಂಶ

ಹೈನುಗಾರಿಕೆ ಲಾಭದಾಯಕವಾದ ಕೃಷಿ ಉಪ ಉದ್ಯಮವಾಗಿದ್ದು, ಇದನ್ನು ವಾಣಿಜ್ಯ ವ್ಯಾಪಾರದ ನೆಲೆಯಲ್ಲಿ ವೈಜ್ಞಾನಿಕವಾಗಿ ಮಾಡುವ ಮೂಲಕ ಉತ್ತಮ ಆದಾಯ ಪಡೆಯಲು ಸಾಧ್ಯ ಎಂದು ತಾಲೂಕು ಪಶು ವೈದ್ಯಾಧಿಕಾರಿ ಡಾ. ಗಿರೀಶ ರಡ್ಡೇರ ತಿಳಿಸಿದರು.

ಹಾನಗಲ್ಲ: ಹೈನುಗಾರಿಕೆ ಲಾಭದಾಯಕವಾದ ಕೃಷಿ ಉಪ ಉದ್ಯಮವಾಗಿದ್ದು, ಇದನ್ನು ವಾಣಿಜ್ಯ ವ್ಯಾಪಾರದ ನೆಲೆಯಲ್ಲಿ ವೈಜ್ಞಾನಿಕವಾಗಿ ಮಾಡುವ ಮೂಲಕ ಉತ್ತಮ ಆದಾಯ ಪಡೆಯಲು ಸಾಧ್ಯ ಎಂದು ತಾಲೂಕು ಪಶು ವೈದ್ಯಾಧಿಕಾರಿ ಡಾ. ಗಿರೀಶ ರಡ್ಡೇರ ತಿಳಿಸಿದರು.

ಹಾನಗಲ್ಲ ತಾಲೂಕಿನ ಅಕ್ಕಿಆಲೂರು ವಲಯದ ಗಿರಿಸಿನಕೊಪ್ಪ ಗ್ರಾಮದಲ್ಲಿ ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಘಟಕ ಆಯೋಜಿಸಿದ ಆಯ್ದ ರೈತರಿಗೆ ಹೈನುಗಾರಿಕೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾಹಿತಿ ನೀಡಿದ ಅವರು, ಹೈನುಗಾರಿಕೆಗಾಗಿ ಹಸುಗಳ ಆಯ್ಕೆ ಅತ್ಯಂತ ಮುಖ್ಯವಾದುದು. ಸಮತೋಲನ ಆಹಾರ ನೀಡುವುದು, ವೈಜ್ಞಾನಿಕವಾಗಿ ಕೊಟ್ಟಿಗೆ ನಿರ್ಮಾಣ, ಜಾನುವಾರುಗಳ ರೋಗ ನಿಯಂತ್ರಣ, ಸಕಾಲಿಕವಾಗಿ ಲಸಿಕೆಗಳನ್ನು ನೀಡುವುದು, ಜಾನುವಾರುಗಳಿಗೆ ಕೃತಕ ಗರ್ಭಧಾರಣೆ, ಕರುಗಳ ಸಾಕಣೆ. ಈ ಎಲ್ಲ ವಿಷಯದಲ್ಲಿ ಸರಿಯಾದ ಜ್ಞಾನ ಪಡೆಯಬೇಕು. ಪಶು ಸಂಗೋಪನೆಗಾಗಿ ಸರಕಾರದಿಂದಲೂ ಹಲವು ಯೋಜನೆಗಳು ಇವೆ. ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಮಹಾಂತೇಶ ಹರಕುಣಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮಾಜಿಕ ಸೇವೆಯ ಜೊತೆಗೆ ಕೃಷಿಗೆ ಪೂರಕವಾದ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರಿಗೆ ಜ್ಞಾನದ ಪ್ರವಾಸಗಳು, ಸಾವಯವ ಕೃಷಿ ಯೋಜನೆಗಳು, ಭೂಮಿ ನೀರುಉಳಿಸುವ ಕಾರ್ಯಕ್ರಮಗಳು ಸೇರಿದಂತೆ ನಾಡಿನ ಜನತೆಯಲ್ಲಿ ಜಾಗೃತಿ ಮೂಡಿಸುವ ಹಾಗೂ ಆರ್ಥಿಕ ಅನುಕೂಲಕ್ಕಾಗಿ ವಿವಿಧ ತರಬೇತಿ ನೀಡುವ ಕಾರ್ಯ ಮಾಡುತ್ತಿದೆ. ಆದರೆ ಕೃಷಿಕರು ಈ ಎಲ್ಲ ಅನುಕೂಲಗಳ ಲಾಭ ಪಡೆಯಬೇಕಾಗಿರುವುದ ಅತ್ಯಂತ ಅವಶ್ಯ ಎಂದರು.ಕಾರ್ಯಕ್ರಮದಲ್ಲಿ ಪ್ರಗತಿಪರ ಹೈನುಗಾರರಾದ ಶಿವಶಂಕರ ಲಕ್ಕಪ್ಪನವರ, ಪುಟ್ಟಪ್ಪ ದಾಸರ, ಬಸನಗೌಡ ತಹಶೀಲ್ದಾರ, ಗಂಗಪ್ಪ ಗುಡಿಹಾಳ, ಮಂಜು ಚೋಣ್ಣದವರ, ಸೇವಾ ಪ್ರತಿನಿಧಿಗಳಾದ ಸೋಮನಗೌಡ ಪಾಟೀಲ ಇದ್ದರು.