ಸಾರಾಂಶ
ಶಿಸ್ತು ಬದ್ಧ ವಿದ್ಯಾರ್ಜನೆಯು, ಉತ್ತಮ ಜೀವನ ಕೌಶಲ್ಯ ಹೊಂದಲು ಉಪಯೋಗವಾಗುತ್ತದೆ
ಧಾರವಾಡ: ಉತ್ತಮ ಸಾಧನೆಗೆ ಅತ್ಯುತ್ತಮ ಜೀವನದ ಅಳವಡಿಕೆ ಅಷ್ಟೇ ಮಹತ್ವ ಎಂದು ಕೌಶಲ್ಯ ತರಬೇತುದಾರರಾದ ನಿವೇದಿತಾ ಶ್ರೀನಾಥ ಹೇಳಿದರು.
ಇಲ್ಲಿಯ ಜನತಾ ಶಿಕ್ಷಣ ಸಮಿತಿಯ ಕೆ.ಎಚ್.ಕಬ್ಬೂರ್ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕೌಶಲ್ಯ ತರಬೇತಿ ಉದ್ಘಾಟನೆ ನೆರವೇರಿಸಿದ ಅವರು, ಶಿಸ್ತು ಬದ್ಧ ವಿದ್ಯಾರ್ಜನೆಯು, ಉತ್ತಮ ಜೀವನ ಕೌಶಲ್ಯ ಹೊಂದಲು ಉಪಯೋಗವಾಗುತ್ತದೆ. ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಜ್ಞಾನ ಹೊಂದುವುದರ ಮೂಲಕ ಕೌಟುಂಬಿಕ ವಿಶ್ವಾಸ ಉಳಿಸಿ ಮುಂದುವರಿಸಿಕೊಳ್ಳಬೇಕು ಎಂಬ ಸಲಹೆ ನೀಡಿದರು.ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯ ವೇದಾವತಿ ಆರ್.ತಿವಾರಿ ವಹಿಸಿದ್ದರು. ಸಂಯೋಜನಾಧಿಕಾರಿ ವಿ.ಕೆ.ಭರಣಿ ವಿವಿಧ ವಿಭಾಗಗಳ ಮುಖ್ಯಸ್ಥರಿದ್ದರು. ಶ್ರೀನಿವಾಸ್ ದೊಡ್ಡಮನಿ ಪರಿಚಯ, ಶಿವಾನಂದ ಶಂಭೋಜಿ ಸ್ವಾಗತ, ಮೀನಾಕ್ಷಿ ತಳವಾರ್, ರವಿ ಯಮನಮರಡಿ, ಗಿರೀಶ್ ಬೆಳಗಾಂವಕರ, ವೀಣಾ ಹಂಪಿ ಹೋಳಿ, ವೈಷ್ಣವಿ ಮಾಗಣಗೇರಿ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))