ಸಾರಾಂಶ
ಕಡೂರು, ಪರಸ್ಪರ ಎಂಬ ತತ್ವದಡಿ ಸಹಕಾರ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದ್ದು ಶ್ರೀ ಬೀರಲಿಂಗೇಶ್ವರ ಸೌಹಾರ್ದ ಸಹಕಾರ ಸಂಘ ಆರಂಭವಾದ ಕಡಿಮೆ ಅವಧಿಯಲ್ಲೇ ಎ ಗ್ರೇಡ್ ಪಡೆಯುವ ಮೂಲಕ ಉತ್ತಮ ಲಾಭಗಳಿಸಿದೆ ಎಂದು ಶ್ರೀ ಬೀರಲಿಂಗೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಜಿ.ಜಯಣ್ಣ ತಿಳಿಸಿದರು.
ಕಡೂರು ಪಟ್ಟಣದ ಸಂಘದ ಕಚೇರಿ ಆವರಣದಲ್ಲಿ 2023-24ನೇ ಸಾಲಿನ ವಾರ್ಷಿಕ ಮಹಾ ಸಭೆ
ಕನ್ನಡಪ್ರಭ ವಾರ್ತೆ, ಕಡೂರುಪರಸ್ಪರ ಎಂಬ ತತ್ವದಡಿ ಸಹಕಾರ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದ್ದು ಶ್ರೀ ಬೀರಲಿಂಗೇಶ್ವರ ಸೌಹಾರ್ದ ಸಹಕಾರ ಸಂಘ ಆರಂಭವಾದ ಕಡಿಮೆ ಅವಧಿಯಲ್ಲೇ ಎ ಗ್ರೇಡ್ ಪಡೆಯುವ ಮೂಲಕ ಉತ್ತಮ ಲಾಭಗಳಿಸಿದೆ ಎಂದು ಶ್ರೀ ಬೀರಲಿಂಗೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಜಿ.ಜಯಣ್ಣ ತಿಳಿಸಿದರು.
ಕಡೂರು ಪಟ್ಟಣದ ಸಂಘದ ಕಚೇರಿ ಆವರಣದಲ್ಲಿ 2023-24ನೇ ಸಾಲಿನ ವಾರ್ಷಿಕ ಮಹಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇವಲ ಮೂರು ವರ್ಷ ಪೂರ್ಣಗೊಳಿಸಿರುವ ಸಹಕಾರ ಸಂಘ ನಿರ್ದೇಶಕರ ಸಲಹೆ, ಸದಸ್ಯರು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡುತ್ತಿರುವುದರಿಂದ ಸಂಘ ಎ ಗ್ರೇಡ್ ಪಡೆದು ಉತ್ತಮ ಸಾಧನೆ ಮಾಡಿದೆ.870 ಸದಸ್ಯರನ್ನು ಈಗಾಗಲೇ ಹೊಂದಿದ್ದು ₹ 62 ಲಕ್ಷ ಠೇವಣಿ, ₹29 ಲಕ್ಷ ಷೇರು ಬಂಡವಾಳ ಹೊಂದಿದೆ. ಸುಮಾರು ₹ 74 ಲಕ್ಷ ಸಾಲವನ್ನು ನೀಡಿ ವಾರ್ಷಿಕವಾಗಿ ₹86 ಸಾವಿರ ಲಾಭ ಗಳಿಸಿದೆ. ಷೇರುದಾರರಿಗೆ ಮುಂದಿನ ವರ್ಷದಿಂದ ಡಿವಿಡೆಂಟ್ ನೀಡಲಾಗುವುದು ಎಂದರು.
ಸಂಘ ಸಂಪೂರ್ಣ ಪೇಪರ್ ಲೆಸ್‍ನಿಂದ ಕೂಡಿದ್ದು, ಗಣಕೀಕರಣ ಮಾಡಲಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು. ರಾಷ್ಟ್ರೀಕೃತ ಬ್ಯಾಂಕ್ ಗಳ ಸೇವೆಗೆ ಸರಿ ಸಮಾನವಾಗಿ ಸಂಘ ಮುನ್ನೆಡೆಯುತ್ತಿರುವುದಾಗಿ ತಿಳಿಸಿದರು.ಶ್ರೀ ಬೀರಲಿಂಗೇಶ್ವರ ಸಹಕಾರ ಸಂಘದ ನಿರ್ದೇಶಕರಾದ ಟಿ.ಪರಮೇಶ್ವರಪ್ಪ, ನಲ್ಲೂರಿ ಮಂಜುನಾಥ್, ಹಾಲಪ್ಪ, ಕುಮಾರ್, ಯೋಗೀಶ್
, ಹುಚ್ಚಪ್ಪ, ಮಹೇಶ್ವರಪ್ಪ, ಮಾನಸ, ವೇದಾ ಸಂಘದ ವ್ಯವಸ್ಥಾಪಕಿ ಸಿ.ಆರ್.ಸುಪ್ರಿಯಾ ಮತ್ತು ಸದಸ್ಯರು ಇದ್ದರು.28ಕೆಕೆಡಿಯು1.ಕಡೂರು ಪಟ್ಟಣದ ಶ್ರೀ ಬೀರಲಿಂಗೇಶ್ವರ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ ನಡೆಯಿತು. ಅಧ್ಯಕ್ಷ ಜಿ.ಜಯಣ್ಣ ಮತ್ತು ನಿರ್ದೇಶಕರುಗಳು ಪಾಲ್ಗೊಂಡಿದ್ದರು.