ಹೊನ್ನೂರು ಗ್ರಾಮ ಪಂಚಾಯಿತಿ ನರೇಗಾದಲ್ಲಿ ಉತ್ತಮ ಪ್ರಗತಿ: ರಂಜನ್ ಕುಮಾರ್

| Published : Jul 11 2025, 11:48 PM IST

ಹೊನ್ನೂರು ಗ್ರಾಮ ಪಂಚಾಯಿತಿ ನರೇಗಾದಲ್ಲಿ ಉತ್ತಮ ಪ್ರಗತಿ: ರಂಜನ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಪಿಡಿಒ ನಿರಂಜನ್ ಕುಮಾರ್ ಮಾಹಿತಿ ನೀಡಿದರು.

ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಪಿಡಿಒ ನಿರಂಜನ್ ಕುಮಾರ್ ಮಾಹಿತಿ ನೀಡಿದರು.

ಹೊನ್ನೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ಶುಕ್ರವಾರ ನಡೆದ ನರೇಗಾ ಸಾಮಾಜಿಕ ಪರಿಶೋಧನಾ ಹಾಗೂ ೧೫ ನೇ ಹಣಕಾಸು ಯೋಜನೆಯ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.

ಈ ಸಾಲಿನಲ್ಲಿ ಒಟ್ಟು ೨೦೬ ಕಾಮಗಾರಿಗಳು ನಡೆದಿವೆ. ಇದರಲ್ಲಿ ತೋಟಗಾರಿಕಾ ಇಲಾಖೆಯ ೩, ಅರಣ್ಯ ಇಲಾಖೆಯ ೨, ಪಂಚಾಯತ್ ರಾಜ್ ಇಲಾಖೆಯ ೩೭ ಹಾಗೂ ಗ್ರಾಮ ಪಂಚಾಯಿತಿಯ ೧೬೪ ಕಾಮಗಾರಿಗಳು ಸೇರಿವೆ. ಇದರಲ್ಲಿ ಸಾವಿರಾರು ಕೂಲಿ ಕಾರ್ಮಿಕರು ಕೆಲಸವನ್ನು ಮಾಡಿದ್ದಾರೆ. ಕೂಲಿ ಮೊತ್ತವಾಗಿ ೧.೬೦ ಕೋಟಿ ರು. ಸಾಮಗ್ರಿ ಮೊತ್ತ ೧.೨೮ ಕೋಟಿ ರು. ಸೇರಿದಂತೆ ಒಟ್ಟು ೨.೮೯ ಕೋಟಿ ರು. ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.ರೈತ ಸಂಘದ ಹೊನ್ನೂರು ಪ್ರಕಾಶ್ ಮಾತನಾಡಿ, ನಮ್ಮ ಪಂಚಾಯಿತಿಯಲ್ಲಿ ಕುಡಿಯುವ ನೀರಿಗೆ ತೆರಿಗೆ ಕಟ್ಟುವುದಿಲ್ಲ. ಈ ಬಗ್ಗೆ ನೀವು ನಿಮ್ಮ ಮೇಲಾಧಿಕಾರಿಗಳಿಗೆ ಪತ್ರ ಬರೆಯಿರಿ, ಇಲ್ಲಿನ ಕುಡಿಯುವ ನೀರು ಕಲುಷಿತವಾಗಿದ್ದು ಶುದ್ಧ ನೀರನ್ನು ಪೂರೈಸಬೇಕು. ನರೇಗಾ ಬಗ್ಗೆ ಗ್ರಾಮಸ್ಥರಲ್ಲಿ ಇನ್ನಷ್ಟು ಅರಿವು ಮೂಡಿಸಿ, ಇ-ಸ್ವತ್ತು ಪಡೆದುಕೊಳ್ಳಲು ಇರುವ ತೆರಿಗೆಯನ್ನು ಶೇ. ೧೦ ಕ್ಕೆ ಇಳಿಸಬೇಕು, ಕಾಲುವೆ ದುರಸ್ತಿ ಮಾಡಿಸಬೇಕು, ಎಲ್ಲಾ ಇಲಾಖೆಯ ಅಧಿಕಾರಿಗಳು ಗ್ರಾಮಸಭೆಯಲ್ಲಿ ಹಾಜರಿರಬೇಕು ಎಂದರು..ಗ್ರಾಪಂ ಅಧ್ಯಕ್ಷ ಎಂ. ಗುರುಪ್ರಸಾದ್, ಉಪಾಧ್ಯಕ್ಷೆ ನೇತ್ರಾವತಿ ಸದಸ್ಯರಾದ ಆರ್. ಪುಟ್ಟಬಸವಯ್ಯ, ಇಂದಿರಾ, ಎಚ್.ಕೆ. ಶಿವಪ್ರಕಾಶ್, ಎ. ನಾಗರತ್ನಮ್ಮ, ಜಿ. ಅನಿತನಿರಂಜನ್, ಜಯಮ್ಮ, ಭಾಗ್ಯಮ್ಮ, ಟಿ.ಎನ್. ರಾಧಾ, ಎಚ್.ಜಿ. ನಾಗರಾಜು, ರಾಧ, ಎಚ್.ಆರ್. ಕುಮಾರ್, ಕೆ. ಚಿನ್ನಸ್ವಾಮಿ, ಎನ್. ಶಂಕರ್‌ರೂಪೇಶ್, ಮಹದೇವಸ್ವಾಮಿ ಇದ್ದರು.