ಸಾರಾಂಶ
ಕನ್ನಡಪ್ರಭ ವಾರ್ತೆ ರಾವಂದೂರುಪಿರಿಯಾಪಟ್ಟಣ ತಾಲೂಕಿನಾದ್ಯಂತ ಉತ್ತಮ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಬೀರಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ.ಕಳೆದ ಒಂದು ತಿಂಗಳಿಂದ ಕೆಲವೆಡೆ ಮಾತ್ರ ಸ್ವಲ್ಪ ಮಟ್ಟಿಗೆ ಮಳೆಯಾಗಿದ್ದು, ತಂಬಾಕು ನಾಟಿ ಶುರು ಮಾಡಿ, ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ, ಹೊಲದಲ್ಲಿ ನಾಟಿ ಮಾಡಿದ ತಂಬಾಕು ಸಸಿಗಳು ಬಿಸಿಲಿನ ಬೇಗೆಗೆ ಒಣಗಿ ಹೋಗಿದ್ದು, ಇದೀಗ ಉತ್ತಮ ಮಳೆಯಿಂದ ರೈತರು ತಂಬಾಕು ಕೃಷಿ ಚಟುವಟಿಕೆಯನ್ನು ಆರಂಭಿಸಿದ್ದಾರೆ.ಕೂಲಿ ಕಾರ್ಮಿಕರಿಗೆ ಡಿಮ್ಯಾಂಡ್ - ತಾಲೂಕಿನಾದ್ಯಂತ ಒಂದೇ ದಿನ ಉತ್ತಮ ಮಳೆ ಆದ ಹಿನ್ನೆಲೆ ಕೂಲಿ ಕಾರ್ಮಿಕರಿಗೆ ತುಂಬಾ ಬೇಡಿಕೆಯಾಗಿದ್ದು, 900 ರು. ನಿಂದ 1250 ರು. ಗಳನ್ನು ನೀಡಿ ಊಟ ತಿಂಡಿ ನೀಡಿ ಹೊಗೆ ಸೊಪ್ಪು ನಾಟಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೊರ ತಾಲೂಕಿನಿಂದ ಕೂಲಿ ಕಾರ್ಮಿಕರು ಕೆ.ಆರ್. ನಗರ, ಹೊಳೆನರಸೀಪುರ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ಕಳೆದ ಬಾರಿಗಿಂತಲೂ ಮೇ ತಿಂಗಳಲ್ಲಿ ಸರಾಸರಿ 111 ಮಿ.ಮೀ. ಮಳೆಯಾಗಿದ್ದು, ಆದರೆ ಇದುವರೆಗೆ 46 ಮಿಲಿ ಮೀಟರ್ ಮಾತ್ರ ಮಳೆಯಾಗಿದೆ, ಬುಧವಾರ ಸುರಿದ ಮಳೆ ತಾಲೂಕಿನ ಉತ್ತಮ ಮಳೆಯಾಗಿದೆ, ಇದರಲ್ಲಿ ಅತಿ ಹೆಚ್ಚು ಮಳೆ ಬೆಟ್ಟದಪುರ ವ್ಯಾಪ್ತಿಯಲ್ಲಿ 25.3 ಮಿ.ಮೀ. ಮಳೆ ರಾವಂದೂರಿಗೆ 10.6 ಮಿ.ಮೀ ಮಳೆ ಪಿರಿಯಾಪಟ್ಟಣ ಮತ್ತು ಕಸಬಾ 16.9 ಮಿ.ಮೀ. ಮಳೆ ಹಾರನಹಳ್ಳಿ ಹೋಬಳಿಗೆ 14.6 ಮಿ.ಮೀ ಮಳೆಯಾಗಿದೆ.ಕಳೆದ ತಿಂಗಳ ಮಳೆಗೆ ಶೇ. 30ರಷ್ಟು ತಂಬಾಕು ನಾಟಿ ಮಾಡಿದ್ದು, ಬುಧವಾರ ಸುರಿದ ಮಳೆಗೆ ತಾಲೂಕಿನ 90 ರಷ್ಟು ಕೃಷಿ ಚಟುವಟಿಕೆ ಪೂರ್ಣ ಆಗಲಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಪ್ರಸಾದ್ ತಿಳಿಸಿದ್ದಾರೆ.- ಪ್ರಸಾದ್, ಸಹಾಯಕ ಕೃಷಿ ನಿರ್ದೇಶಕ, ಪಿರಿಯಾಪಟ್ಟಣ.