ಸಿರುಗುಪ್ಪ ತಾಲೂಕಿನಾದ್ಯಂತ ಉತ್ತಮ ಮಳೆ

| Published : May 19 2025, 02:55 AM IST

ಸಾರಾಂಶ

ತಾಲೂಕಿನಾದ್ಯಂತ ಶನಿವಾರ ತಡರಾತ್ರಿಯಲ್ಲಿ ಉತ್ತಮ ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ಸಿರುಗುಪ್ಪ

ತಾಲೂಕಿನಾದ್ಯಂತ ಶನಿವಾರ ತಡರಾತ್ರಿಯಲ್ಲಿ ಉತ್ತಮ ಮಳೆಯಾಗಿದೆ.

ಕಳೆದ ಮೂರು ನಾಲ್ಕು ದಿನಗಳಿಂದ ಕೆಲವು ಕಡೆ ಸಾಧರಣ ಮಳೆಯಾಗಿತ್ತು. ಶನಿವಾರ ತಡರಾತ್ರಿ ಗುಡುಗು ಸಹಿತ ಉತ್ತಮ ಮಳೆಯಾಗಿ, ಹಳ್ಳಕೊಳ್ಳಗಳು ಭರ್ತಿಯಾಗಿವೆ.

ವೇದಾವತಿ-ಹಗರಿ ನದಿಯು ನೀರಿಲ್ಲದೆ ಬತ್ತಿ ಹೋಗಿತ್ತು, ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಹಗರಿ ನದಿ ಭರ್ತಿಯಾಗಿದೆ.

ರಾರಾವಿ ಗ್ರಾಮದಿಂದ ಕುರುವಳ್ಳಿಗೆ ಸಂಪರ್ಕ ಕಲ್ಪಿಸುವ ಯಲ್ಲಮ್ಮನ ಹಳ್ಳವು ಉಕ್ಕಿ ಹರಿಯುತು. ಎಚ್.ಹೊಸಳ್ಳಿ ಗ್ರಾಮದಿಂದ ತಾಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಿರೇಹಳ್ಳದ ಸೇತುವೆ ಮೇಲೆ ನೀರು ಹರಿದು ರಸ್ತೆ ಸಂಪರ್ಕ ಕಡಿತವಾಗಿದೆ. ತಾಲೂಕಿನ ತಾಳೂರು ಗ್ರಾಮದ ಶಿವಮ್ಮಅವರ ಮನೆಯ ಮೇಲ್ಛಾವಣಿ ಕುಸಿದಿದೆ. ರಾರಾವಿ ಗ್ರಾಮದ ಮಾರೆಮ್ಮಎಂಬುವರ ಮನೆಗೆ ಮಳೆಯಿಂದ ಭಾಗಶಃ ಹಾನಿಯಾಗಿದೆ ಎಂದು ತಹಶೀಲ್ದಾರ ನರಸಪ್ಪ ತಿಳಿಸಿದ್ದಾರೆ.

ಸಿರುಗುಪ್ಪ ನಗರ 26.2 ಮಿಮೀ, ತೆಕ್ಕಲಕೋಟೆ 28.8 ಮಿಮೀ, ಸಿರಿಗೇರಿ 48.3 ಮಿಮೀ, ಎಂ.ಸೂಗೂರು 26.8 ಮಿಮೀ, ಹಚ್ಚೊಳ್ಳಿ 28.8 ಮಿಮೀ, ರಾವಿಹಾಳ್ 18.6 ಮಿಮೀ, ಕರೂರು 50.2 ಮಿಮೀ, ಕೆ.ಬೆಳಗಲ್ಲು70.4 ಮಿಮೀ ಮಳೆಯಾಗಿದೆ ಎಂದು ತಾಲೂಕು ಆಡಳಿತ ತಿಳಿಸಿದೆ.ಸಂಡೂರಲ್ಲಿ ಉತ್ತಮ ಮಳೆ:

ಸಂಡೂರು ತಾಲೂಕಿನ ವಿವಿಧೆಡೆ ಶನಿವಾರ ರಾತ್ರಿ ಉತ್ತಮ ಮಳೆಯಾಗಿದೆ. ಭಾನುವಾರ ಸಂಜೆ ಸಂಡೂರು ಸುತ್ತಮುತ್ತ ತುಂತುರು ಮಳೆಯಾಗಿದೆ.ಮಳೆ ವಿವರ:

ಸಂಡೂರು, ಚೋರುನೂರು, ಕುರೆಕುಪ್ಪ ಹಾಗೂ ವಿಠಲಾಪುರ ಮಳೆ ಮಾಪನ ಕೇಂದ್ರಗಳಲ್ಲಿ ಶನಿವಾರ ಕ್ರಮವಾಗಿ ೫೪.೮ ಮಿಮೀ, ೪೦ ಮಿಮೀ, ೫೭.೨ ಮಿಮೀ ಹಾಗೂ ೩೦.೪ ಮಿಮೀ ಮಳೆಯಾದ ವರದಿಯಾಗಿದೆ.ಕೆಲ ದಿನಗಳಿಂದ ವಿವಿಧ ಕೆರೆ ಕುಂಟೆಗಳಲ್ಲಿ ನೀರು ಸಂಗ್ರಹಗೊಳ್ಳುತ್ತಿರುವುದರಿಂದ ಪ್ರಾಣಿ-ಪಕ್ಷಿಗಳಿಗೆ ನೀರಿನ ದಾಹವನ್ನು ತೀರಿಸಲು ಅನುಕೂಲವಾಗುತ್ತದೆ. ಅಂತರ್ಜಲದ ಮಟ್ಟವೂ ಹೆಚ್ಚಲು ಕಾರಣವಾಗಲಿದೆ.