ಸಾರಾಂಶ
ಮಕ್ಕಳು ಸಂಭ್ರಮದಿಂದ ಪರೀಕ್ಷೆ ಎದುರಿಸಬೇಕು. ಸರ್ಕಾರ ಎಲ್ಲ ಸವಲತ್ತನ್ನು ಉಚಿತವಾಗಿ ನೀಡುತ್ತಿದೆ. ತಂದೆ ತಾಯಿಯನ್ನು ಗೌರವಿಸಬೇಕು. ಭಗವಂತನ ಪೂಜಿಸಬೇಕು. ತಮ್ಮ ಪರೀಕ್ಷೆ ಎಂಬ ಪರ್ವದ ಯಶಸ್ಸಿಗೆ ಶಾರದಾಂಭೆ ಎಂದಿಗೂ ಕೈಬಿಡಲಾರಳು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪ್ರಿಪೇಟರಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿರುವುದು ಸರ್ಕಾರಿ ಶಾಲೆಯಲ್ಲಿನ ಗುಣಮಟ್ಟ ಶಿಕ್ಷಣಕ್ಕೆ ಸಾಕ್ಷಿ ಎಂದು ಕೆಪಿಎಸ್ ಪ್ರೌಢಶಾಲೆ ಉಪ ಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಕೆಪಿಎಸ್ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾರದಾ ಪೂಜೆ, ಬೀಳ್ಕೊಡುಗೆ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ನಿತ್ಯ ಅದೇ ಓದು, ಅದೇ ಬರಹ. ಕಲಿತದನ್ನು ಸ್ಪಷ್ಟವಾಗಿ ಬರೆಯಲು ಭಯವೇಕೆ ಎಂದು ಪ್ರಶ್ನಿಸಿದರು.ಮಕ್ಕಳು ಸಂಭ್ರಮದಿಂದ ಪರೀಕ್ಷೆ ಎದುರಿಸಬೇಕು. ಸರ್ಕಾರ ಎಲ್ಲ ಸವಲತ್ತನ್ನು ಉಚಿತವಾಗಿ ನೀಡುತ್ತಿದೆ. ತಂದೆ ತಾಯಿಯನ್ನು ಗೌರವಿಸಬೇಕು. ಭಗವಂತನ ಪೂಜಿಸಬೇಕು. ತಮ್ಮ ಪರೀಕ್ಷೆ ಎಂಬ ಪರ್ವದ ಯಶಸ್ಸಿಗೆ ಶಾರದಾಂಭೆ ಎಂದಿಗೂ ಕೈಬಿಡಲಾರಳು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಮಾತನಾಡಿ, ಸರ್ಕಾರಿ ಶಾಲೆ ಉಳಿದರೆ ಬಡವ, ದುರ್ಬಲ ಸಮಾಜದ ಮಕ್ಕಳ ಶೈಕ್ಷಣಿಕ ಬದುಕು ಹಸನಾಗಲಿದೆ. ಮಕ್ಕಳಲ್ಲಿ ಶ್ರಮವಿಲ್ಲದ ಓದು ಗುರಿ ತಲುಪಲು ಸಾಧ್ಯವಾಗಲಾರದು. ಶೇ.ನೂರರಷ್ಟು ಫಲಿತಾಂಶ ತರುವಂತೆ ಕರೆ ನೀಡಿದರು.ಉಪನ್ಯಾಸಕ ರಮೇಶ್ ಮಾತನಾಡಿ, ಅಂದವಾದ ಬರವಣಿಗೆ ಹೆಚ್ಚು ಅಂಕಗಳಿಸಲು ಸಹಕಾರಿಯಾಗಲಿದೆ ಎಂದರು. ಪರೀಕ್ಷೆ ಕುರಿತು ಹಲವು ಮಾಹಿತಿ ನೀಡಿದರು.
ಕಿಕ್ಕೇರಿ ವಿಪ್ರ ಬಾಂಧವ ಸೇವಾ ಸಮಿತಿಯಿಂದ ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಹಾಗೂ ವಿಷಯವಾರು ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸಮಾರಂಭದಲ್ಲಿ ಸದಸ್ಯ ದಿನೇಶ್ ಬಾಬು, ವಿಪ್ರಬಾಂಧವ ಸೇವಾ ಸಮಿತಿ ಮಹಾಬಲಶರ್ಮ, ಕೆ.ಬಿ.ವೆಂಕಟೇಶ್, ಕೆ.ಎಸ್.ಪರಮೇಶ್ವರಯ್ಯ, ಪ್ರೌಢಶಾಲಾ ಸಹಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ. ಬಸವರಾಜು, ಬಿ.ಎನ್. ಪರಶಿವಮೂರ್ತಿ, ಸುರೇಶ್, ದೀಪಕ್, ಎಂ.ಎಚ್.ಕೃಷ್ಣಪ್ಪ, ಶಾಹಿದ್ ರುಜ್ವಿ, ಶ್ರೀಕಾಂತ್ ಚಿಮ್ಮಲ್, ಹೆಗಡೆ, ಪ್ರಸನ್ನ, ಗಿರೀಶ್, ರಾಗಿಣಿ, ಲೀಲಾವತಿ, ನಂದಿನಿ, ರಮ್ಯ, ವಿಶಾಲಾಕ್ಷಿ, ಅಶ್ವಿನಿ, ರೋಜಾ, ಲಕ್ಷ್ಮೀದೇವಿ ಇದ್ದರು.