ಸಾರಾಂಶ
ಗಣೇಶಕಮಲನಗರ ಪಟ್ಟಣದ ಅಲ್ಲಮಪ್ರಭು ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ವ್ಯಾಪಾರಿ ಗಣೇಶ ಮಂಡಳಿಯ ಗಣೇಶ ಮಹೋತ್ಸವ ಕಾರ್ಯಕ್ರಮವನ್ನು ಸಿಪಿಐ ಅಮರೆಪ್ಪಾ ಎಸ್. ಸಿವಬಲ ಪೂಜೆ ನೇರವೇರಿಸಿದರು.
ಕನ್ನಡಪ್ರಭ ವಾರ್ತೆ ಕಮಲನಗರ
ಯಾವುದೇ ಉತ್ತಮ ಕಾರ್ಯ ಮಾಡಲು ದೇವರ ಕೃಪೆ ಹಾಗೂ ಆಶೀರ್ವಾದ ಬೇಕು. ಕಳೆದ ಹಲವಾರು ವರ್ಷಗಳಿಂದ ನಾಡಿನ ಜನತೆಯ ಕಲ್ಯಾಣಕ್ಕಾಗಿ ವ್ಯಾಪಾರಿ ಗಣೇಶ ಮಂಡಳಿ ಪ್ರತಿಷ್ಠಾಪನೆ ಮಾಡಿ ಪೂಜಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಬೆನ್ನಲುಬಾಗಿ ನಿಲ್ಲಬೇಕು ಎಂದು ಕಮಲನಗರ ಸಿಪಿಐ ಅಮರೆಪ್ಪಾ.ಎಸ್. ಸಿವಬಲ ಹೇಳಿದರು.ಶನಿವಾರ ಪಟ್ಟಣದ ಅಲ್ಲಮಪ್ರಭು ವೃತ್ತದ ಬಳಿ ವ್ಯಾಪಾರಿ ಗಣೇಶ ಮಂಡಳಿ ಪ್ರತಿಷ್ಠಾಪಿಸಿದ ಮಹೋತ್ಸವದಲ್ಲಿ ಮಾತನಾಡಿ, ನಮ್ಮಲ್ಲಿ ಭಕ್ತಿ ಮತ್ತು ಶ್ರದ್ಧೆ ಸಮ್ಮಿಳಿತವಾಗಿದ್ದು. ದೇವರು ನಮಗೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಜೀವನ ನೀಡಲಿದ್ದಾನೆ. ಆದ್ದರಿಂದ ಯಾವುದೇ ವಿಚಾರಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸದಾ ಕಾಲ ಉತ್ತಮ ಕಾರ್ಯದಲ್ಲಿ ತೊಡಗಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನ ಮಾತನಾಡಿ, ವ್ಯಾಪಾರಿ ಗಣೇಶ ಮಂಡಳಿಯವರು ಪ್ರತಿ ವರ್ಷ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡುತ್ತಾ ಬರುತ್ತಿದ್ದಾರೆ ಹಾಗೂ ಪ್ರತಿ ದಿವಸ ಅನ್ನ ದಾಸೋಹ ಕಾರ್ಯಕ್ರಮವೂ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.ಈ ವೇಳೆ ಪಿಎಸ್ಐ ಚಂದ್ರಶೇಖರ ನಿರ್ಣೆ, ವ್ಯಾಪಾರಿ ಗಣೇಶ ಮಂಡಳಿ ಅಧ್ಯಕ್ಷ ಶಿವಾನಂದ ವಡ್ಡೆ, ಗ್ರಾಪಂ ಸದಸ್ಯ ಶಿವರಾಜ ಝುಲ್ಪೆ, ಮೀನಾಕ್ಷಿ ನಿಟ್ಟೂರೆ, ಶಿಲ್ಪಾ ತೋರಣೆಕರ, ನಿರ್ಮಲಾ ಕಾರಬಾರಿ, ಮಂಡಳಿಯ ಸದಸ್ಯರಾದ ನಾಗೇಶ ಪತ್ರೆ, ಚಂದ್ರಕಾಂತ ಸಂಗಮೆ, ರಾಜಕುಮಾರ ಬಿರಾದಾರ, ಸಂಜು ನಿಟ್ಟೂರೆ, ರವಿ ಕಾರಬಾರಿ, ಲಿಂಗಾನಂದ ಮಹಾಜನ, ಮನೋಹರ ಬಿರಾದಾರ, ಪ್ರವೀಣ ಪಾಟೀಲ, ಮಹೇಶ ಸಜ್ಜನ ಮುಂತಾದವರಿದ್ದರು.