ಸಾರಾಂಶ
ಕನ್ನಡಪ್ರಭ ವಾರ್ತೆ ಗೊರೂರು
ಹಾಸನ ಜಿಲ್ಲೆಯ ಆರೋಗ್ಯ ಸೇವಾ ಕ್ಷೇತ್ರಕ್ಕೆ ಹೆಮ್ಮೆ ತರುವಂತ ಮಹತ್ವದ ಸಾಧನೆಯನ್ನು ಗೊರೂರು ಪ್ರಾಥಮಿಕ ಆರೋಗ್ಯ ಕೇಂದ್ರ ರಾಷ್ಟ್ರಮಟ್ಟದ ನ್ಯಾಷನಲ್ ಕ್ವಾಲಿಟಿ ಸ್ಟಾಂಡರ್ಡ್ ಅಶುರೆನ್ಸ್ ಪ್ರಮಾಣಪತ್ರವನ್ನು ಗಳಿಸಿದೆ. ರಾಷ್ಟçಮಟ್ಟದ ಗುಣಾತ್ಮಕ ತಂಡಗಳು ಕಳೆದ ತಿಂಗಳು ಎರಡು ದಿನಗಳ ಕಾಲ ನಡೆಸಿದ ಸೂಕ್ಷ್ಮ ಬಹು ಹಂತಗಳ ಪರಿಶೀಲನೆ ಬಳಿಕ ಈ ಗೌರವ ದೊರಕಿದೆ.ಎನ್.ಕ್ಯೂ.ಎ.ಎಸ್. ಪ್ರಮಾಣಪತ್ರವು ದೇಶದಲ್ಲೇ ಅತ್ಯಂತ ಕಠಿಣವಾದ ಮೌಲ್ಯಮಾಪನ ಪ್ರಕ್ರಿಯೆಗಳಲ್ಲಿ ಒಂದಾಗಿದ್ದು, ಆರೋಗ್ಯ ಕೇಂದ್ರದ ಸ್ವಚ್ಛತೆ, ಮೂಲಸೌಕರ್ಯ, ಚಿಕಿತ್ಸಾ ಗುಣಮಟ್ಟ, ರೋಗಿಗಳಿಗೆ ದೊರೆಯುವ ಸೇವೆಗಳ ನಿರ್ವಹಣೆ, ದಾಖಲೆ ಸಂರಕ್ಷಣೆ ಸೇರಿದಂತೆ ಅನೇಕ ಮಾನದಂಡಗಳ ಮೇಲೆ ಕೇಂದ್ರಗಳನ್ನು ಪರೀಕ್ಷಿಸಲಾಗುತ್ತದೆ.ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ತಜ್ಞರು ಒಳಗೊಂಡ ತಂಡ ಗೊರೂರು ಪಿ.ಎಚ್.ಸಿ. ಅನ್ನು 48 ಗಂಟೆಗಳ ಕಾಲ ವಿಭಿನ್ನ ಹಂತಗಳಲ್ಲಿ ಪರಿಶೀಲಿಸಿ ಈ ಪ್ರಮಾಣಪತ್ರಕ್ಕೆ ಶಿಫಾರಸು ಮಾಡಿದೆ. ಗೊರೂರು ಪಿ.ಎಚ್.ಸಿ.ಯು.ಇ. ಈ ಮುನ್ನಡೆ ದೊರಕಲು ವೈದ್ಯಾಧಿಕಾರಿ ಡಾ. ತೇಜಸ್ವಿ ಅವರ ನಿಯೋಜಿತ ಮಾರ್ಗದರ್ಶನ, ತಂಡದ ಸಹಕಾರ ಮತ್ತು ಆರೋಗ್ಯ ಸಿಬ್ಬಂದಿಗಳ ನಿಷ್ಠೆ ಪ್ರಮುಖ ಕಾರಣವಾಗಿವೆ. ಜನಸ್ನೇಹಿ ವೈದ್ಯರಾಗಿ ಪರಿಚಿತರಾಗಿರುವ ಡಾ. ತೇಜಸ್ವಿ, ಪರಿಸರ ಸಂರಕ್ಷಣೆ ಮತ್ತು ಗುಣಮಟ್ಟದ ಸಾರ್ವಜನಿಕ ಆರೋಗ್ಯ ಸೇವೆಗಾಗಿ ವರ್ಷಗಳಿಂದ ಶ್ರಮಿಸುತ್ತಿದ್ದು, ಅವರ ನೇತೃತ್ವದಲ್ಲಿ ಒಟ್ಟಾರೆ ಆಸ್ಪತ್ರೆಯ ಕಾರ್ಯವೈಖರಿ ಚಿತ್ರಣವೇ ಬದಲಾಗಿದೆ. ಕೇವಲ ಆರು ತಿಂಗಳ ಹಿಂದೆ ಕಾರ್ಲೆ ಪ್ರಾಥಮಿಕ ಆರೋಗ್ಯ ಕೇಂದ್ರವೂ ಪ್ರಮಾಣಪತ್ರ ಪಡೆದಿತ್ತು. ಜಿಲ್ಲೆಯಲ್ಲಿ ಎರಡನೇ ಬಾರಿ ರಾಷ್ಟçಮಟ್ಟದ ಗುಣಮಟ್ಟ ಪರೀಕ್ಷೆಯಲ್ಲಿ ಉತ್ತೀರ್ಣವಾಗಿರುವುದು ತೇಜಸ್ವಿ ಅವರ ಮಾರ್ಗದರ್ಶನದ ವಿಶೇಷ ಸಾಧನೆ ಎಂದು ಆರೋಗ್ಯ ಇಲಾಖೆಯ ಹಿರಿಯರು ಪ್ರಶಂಸಿಸಿದ್ದಾರೆ. ರಾಜ್ಯ ಮಟ್ಟದಲ್ಲಿಯೂ ಕೇವಲ ಕೆಲವು ಸಂಸ್ಥೆಗಳು ಮಾತ್ರ ಈ ಮಾನದಂಡವನ್ನು ಪೂರೈಸಿರುವುದು ಗೊರೂರು ಪಿ.ಹಚ್.ಸಿ. ಸಾಧನೆಯ ಗಂಭೀರತೆಯನ್ನು ಮತ್ತಷ್ಟು ಎತ್ತಿಹಿಡಿಯುತ್ತದೆ ಎಂದು ಹೇಳಿದರು.
ಸಿಬ್ಬಂದಿ ವರ್ಗದ ಏಕತೆಯ ಶ್ರಮ, ನಿರಂತರ ರೋಗಿ ಸೇವೆ, ದಾಖಲೆ ನಿರ್ವಹಣೆ ಮತ್ತು ಆಸ್ಪತ್ರೆಯ ಭೌತಿಕ ಸುಧಾರಣೆ ಎಲ್ಲಾ ಸೇರಿ ಎನ್.ಕ್ಯೂ.ಎ.ಎಸ್. ಮಾನದಂಡಕ್ಕೆ ಪಿ.ಹೆಚ್.ಸಿ. ತಕ್ಕುದಾಗಿರೂಪುಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿದ್ದರೂ, ಗೊರೂರು ಆರೋಗ್ಯ ಕೇಂದ್ರವು ನಗರ ಮಟ್ಟದ ಗುಣಮಟ್ಟಕ್ಕೆ ಸಮರ್ಪಕವಾಗಿ ಸೇವೆ ನೀಡುತ್ತಿರುವುದು ಈ ಪ್ರಮಾಣಪತ್ರದ ಮೂಲಕ ದೃಢಪಟ್ಟಿದೆ. ಡಾ. ತೇಜಸ್ವಿ ಮತ್ತು ಗೊರೂರು ಪಿ.ಎಚ್.ಸಿ. ಎಲ್ಲಾ ಸಿಬ್ಬಂದಿ ವರ್ಗದವರಿಗೆ ವಿವಿಧಸಂಘಟನೆಗಳು, ಜನಪ್ರತಿನಿಧಿಗಳು ಮತ್ತು ಸ್ಥಳೀಯ ನಾಗರಿಕರು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಸಾಧನೆ ಹಾಸನ ಜಿಲ್ಲೆಯ ಆರೋಗ್ಯ ಕ್ಷೇತ್ರದ ಭವಿಷ್ಯಕ್ಕೆ ಹೊಸ ಪ್ರೇರಣೆಯಾಗಲಿದೆ.;Resize=(128,128))
;Resize=(128,128))