ಸಂತೃಪ್ತಿ ಪರಿಯಾಳ ಬಳಗದಿಂದ ಆಟಿದ ಗೌಜಿ ಗಮ್ಮತ್: ಕುಟುಂಬ ಸಮ್ಮಿಲನ

| Published : Aug 08 2025, 01:09 AM IST / Updated: Aug 08 2025, 01:10 AM IST

ಸಾರಾಂಶ

ಸಂತೃಪ್ತಿ ಪರಿಯಾಳ ಬಳಗದ ಮೂರನೇ ವರ್ಷದ ಆಟಿದ ಗೌಜಿ ಗಮ್ಮತ್ - ಕುಟುಂಬ ಸಮ್ಮಿಲನ ಕಾರ್ಯಕ್ರಮ ಅಮೃತ್ ಗಾರ್ಡನ್‌ನಲ್ಲಿ ಸಮಾಜದ ಪ್ರಮುಖರಾದ ಶೇಖರ್ ಸಾಲಿಯಾನ್ ಅಧ್ಯಕ್ಷತೆಯಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಸಂತೃಪ್ತಿ ಪರಿಯಾಳ ಬಳಗದ ಮೂರನೇ ವರ್ಷದ ಆಟಿದ ಗೌಜಿ ಗಮ್ಮತ್ - ಕುಟುಂಬ ಸಮ್ಮಿಲನ ಕಾರ್ಯಕ್ರಮ ಅಮೃತ್ ಗಾರ್ಡನ್‌ನಲ್ಲಿ ಸಮಾಜದ ಪ್ರಮುಖರಾದ ಶೇಖರ್ ಸಾಲಿಯಾನ್ ಅಧ್ಯಕ್ಷತೆಯಲ್ಲಿ ಜರುಗಿತು.

ಹರ್ಷ ಭಾರತಿ ಟ್ರಸ್ಟ್ ಪ್ರವರ್ತಕ ಹರೀಶ್ ಸುವರ್ಣ ಕಲ್ಸಂಕ, ದೀವಟಿಗೆ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಉಡುಪಿ ಜಿಲ್ಲಾ ಪರಿಯಾಳ ಸಮಾಜದ ಅಧ್ಯಕ್ಷ ಶಂಕರ್ ಸಾಲಿಯನ್ ಕಟಪಾಡಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಸಮಾಜ ಬಂಧುಗಳಾದ ತುಳು ಚಿತ್ರರಂಗದ ಪದ್ಯ ರಚನೆಗಾರ ಭೋಜ ಸುವರ್ಣ ಮಂಗಳೂರು, ದೈವಾರಾಧಕ ರಾಜು ಸುವರ್ಣ ಉದ್ಯಾವರ, ಬೆಳುವಾಯಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಬಿ. ಸಾಲಿಯಾನ್, ನಿವೃತ್ತ ಅಬಕಾರಿ ಇನ್‌ಸ್ಪೆಕ್ಟರ್‌ ಜಯಕರ ಸಾಲಿಯಾನ್ ಬೆಳುವಾಯಿ, ತೆರಿಗೆ ಸಲಹೆಗಾರರಾದ ಉದಯ ಸುವರ್ಣ ಕಲ್ಯಾಣಪುರ ಇವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಗ್ರಾಮೀಣ ಕ್ರೀಡೆ ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ನೀಡಲಾಯಿತು.ಆಟಿ ತಿಂಗಳ ವಿವಿಧ ತಿಂಡಿ ಪಾನೀಯ ಉಪಾಹಾರ ಹಾಗೂ ಸುಮಾರು 30ಕ್ಕಿಂತಲೂ ಅಧಿಕ ವಿವಿಧ ಬಗೆಯ ಖಾದ್ಯಗಳ ಭೋಜನ ಉಣ ಬಡಿಸಲಾಯಿತು. ಹಾಗೆಯೇ ಕೃಷಿ ಚಟುವಟಿಕೆಯ ಸಲಕರಣೆ ಹಾಗೂ ಹಿರಿಯರು ಬಳಸುತ್ತಿದ್ದ ಪರಿಕರಗಳನ್ನು ಪರಿಚಯಿಸಲಾಯಿತು.ಸತ್ಯವತಿ ನಾಗೇಶ್ ಮಜೂರು ಸ್ವಾಗತಿಸಿ, ಆಟಿ ತಿಂಗಳ ಮಹತ್ವ ಕೊಟ್ಟು ಕ್ವಿಜ್ ಕಾರ್ಯಕ್ರಮ ನಡೆಸಿಕೊಟ್ಟರು. ಸದಾಶಿವ ಬಂಗೇರ ಕುರ್ಕಾಲು ಪ್ರಸ್ತಾಪಿಸಿದರು. ಪ್ರಶಾಂತ್ ಸಾಲಿಯಾನ್ ನಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಭರತ್ ಸುವರ್ಣ ನಿಟ್ಟೂರು ವಂದಿಸಿದರು.