ಶ್ರೀಕೃಷ್ಣ ಪರಮಾತ್ಮನು ಯಾದವ ಕುಲದಲ್ಲಿ ಹುಟ್ಟಿದ್ದರೂ ಇಡೀ ಪ್ರಪಂಚಕ್ಕೆ ಮಹಾ ದೇವರಾಗಿದ್ದು ಇಡೀ ಪ್ರಪಂಚದ ಎಲ್ಲಾ ಜನತೆಗೂ ಶ್ರೀ ಕೃಷ್ಣ ಪರಮಾತ್ಮನು ಆರಾಧ್ಯ ದೇವ.
ಕನ್ನಡಪ್ರಭ ವಾರ್ತೆ ಮುಳಬಾಗಿಲು
ರಾಜ್ಯದಲ್ಲಿ ಯಾದವ ಸಮುದಾಯವು ಹಿಂದುಳಿದ ವರ್ಗಕ್ಕೆ ಸೇರಿದ್ದು, ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರೆ ಪ್ರತಿಯೊಬ್ಬ ರಾಜಕಾರಣಿ ಮತ್ತು ಸರ್ಕಾರ ನಿಮ್ಮ ಸಮುದಾಯವನ್ನು ಗುರುತಿಸಿ ಎಲ್ಲಾ ರೀತಿಯ ಸರ್ಕಾರದ ಸೌಲಭ್ಯಗಳನ್ನು ಒದಗಿಸುತ್ತಾರೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಉಮಾಶ್ರೀ ತಿಳಿಸಿದರು.ನಗರದ ಸೊನ್ನ ವಾಡಿ ಬೈಪಾಸ್ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಯಾದವ ಸಮುದಾಯದವರಿಂದ ಏರ್ಪಡಿಸಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿ, ಯಾದವ ಸಮುದಾಯ ಒಗ್ಗಟ್ಟಿನಿಂದ ಇದ್ದರೆ ಆರ್ಥಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದುವರೆಯಲು ಸಾಧ್ಯವಾಗುತ್ತದೆ ಎಂದರು.
ಶಾಸಕ ಸಮೃದ್ಧಿ ವಿ ಮಂಜುನಾಥ್ ಮಾತನಾಡಿ, ಶ್ರೀಕೃಷ್ಣ ಪರಮಾತ್ಮನು ಯಾದವ ಕುಲದಲ್ಲಿ ಹುಟ್ಟಿದ್ದರೂ ಇಡೀ ಪ್ರಪಂಚಕ್ಕೆ ಮಹಾ ದೇವರಾಗಿದ್ದು ಇಡೀ ಪ್ರಪಂಚದ ಎಲ್ಲಾ ಜನತೆಗೂ ಶ್ರೀ ಕೃಷ್ಣ ಪರಮಾತ್ಮನು ಆರಾಧ್ಯ ದೇವ ಎಂದು ಬಣ್ಣಿಸಿದರು.ಶಾಸಕ ಕೊತ್ತೂರು ಜಿ ಮಂಜುನಾಥ್ ಮಾತನಾಡಿ, ಯಾದವ ಸಮುದಾಯದಲ್ಲಿ ಇಷ್ಟೊಂದು ಒಗ್ಗಟ್ಟು ಇರುವುದನ್ನು ಇದೇ ಮೊದಲ ಬಾರಿಗೆ ನಾನು ಮುಳಬಾಗಿಲಿನಲ್ಲಿ ನೋಡಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಾದವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಸದಸ್ಯ ಡಿ.ಟಿ .ಶ್ರೀನಿವಾಸ್, ಮೋಹನ್ ಬಾಬು, ಓಬಿಸಿ ರಾಜ್ಯ ಸಂಚಾಲಕ ಜಿ ವಡ್ಡಹಳ್ಳಿ ಕೆ ವೇಣುಗೋಪಾಲ್, ಯಾದವ ಸಮುದಾಯದ ತಾಲೂಕು ಅಧ್ಯಕ್ಷ ನಾಗಮಂಗಲ ಶಂಕ್ರಪ್ಪ ಭಾಗವಹಿಸಿದ್ದರು.