ಸರ್ಕಾರಿ ಕಾಲೇಜಿನ ಸಮಗ್ರ ಅಭಿವೃದ್ಧಿಗಾಗಿ ಸಂಪೂರ್ಣ ಸಹಕಾರವಿದ್ದು ಕುಡಿಯುವ ನೀರಿಗಾಗಿ ಬೋರ್ವೆಲ್ ಹಾಗೂ ರಕ್ಷಣೆಗೆ ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಸುರೇಶ್‌ಬಾಬು ತಿಳಿಸಿದರು.

ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಸರ್ಕಾರಿ ಕಾಲೇಜಿನ ಸಮಗ್ರ ಅಭಿವೃದ್ಧಿಗಾಗಿ ಸಂಪೂರ್ಣ ಸಹಕಾರವಿದ್ದು ಕುಡಿಯುವ ನೀರಿಗಾಗಿ ಬೋರ್ವೆಲ್ ಹಾಗೂ ರಕ್ಷಣೆಗೆ ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಸುರೇಶ್‌ಬಾಬು ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ೨೦೨೫-೨೬ ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್. ಯುವ ರೆಡ್ ಕ್ರಾಸ್ ರೋವರ್ಸ್ ಆ್ಯಂಡ್‌ ರೇಂಜರ್ಸ್ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜಿನಲ್ಲಿರುವ ಅವಕಾಶ ಗಳನ್ನು ಬಳಸಿಕೊಂಡು ಉತ್ತಮವಾಗಿ ಅಧ್ಯಯನ ಮಾಡಿ. ಇದರೊಂದಿಗೆ ನಿಮ್ಮಲ್ಲಿರುವಂಥ ಪ್ರತಿಭೆಯನ್ನು ವಿಶಿಷ್ಟ ವಾಗಿರುವುದನ್ನು ಹೊರಹಾಕುವ ಮೂಲಕ ನಿಮ್ಮ ಸಾಧನೆ ತೋರಿಸಿ. ಶ್ರದ್ದೆ, ಪ್ರಾಮಾಣಿಕತೆಯೊಂದಿಗೆ ಗುರಿಯನ್ನು ಇಟ್ಟುಕೊಂಡು ನಿಮ್ಮ ಪೋಷಕರ ಆಸೆಯಂತೆ ನಿಮ್ಮ ಜೀವನ ರೂಪಿಸಿಕೊಳ್ಳಿ ಎಂದ ಅವರು ಕಾಲೇಜಿಗೆ ಅವಶ್ಯಕತೆ ಇರುವಂತ ೩೦ ಕಂಪ್ಯೂಟರ್ ಗಳನ್ನು ಕೊಡಿಸುವುದಾಗಿ ತಿಳಿಸಿದರು. ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಮಾತನಾಡಿದ ಹಾಸ್ಯಕಲಾವಿದ ಮಿಮಿಕ್ರಿ ಗೋಪಿ , ಈಗಿನ ನಿಮ್ಮ ವಯಸ್ಸಿನಲ್ಲಿ ಸಾಧನೆಗೆ ಅವಕಾಶವಿದೆ. ನೀವು ಈಗಾಗಲೇ ಎರಡು ಡೆಂಜರ್ ಝೂನ್ ಮುಗಿಸಿ ಪದವಿಗೆ ಬಂದಿದ್ದೀರಿ. ಈಗ ನೀವು ನಿಮ್ಮ ಮುಂದಿನ ಬದುಕನ್ನು ಕಟ್ಟಿಕೊಳ್ಳಿ ವ್ಯರ್ಥವಾಗಿ ಸಮಯವನ್ನು ಹಾಳು ಮಾಡದೇ ಉತ್ತಮ ಸ್ನೇಹದಿಂದ ನಿಮ್ಮ ಪೋಷಕರು ನಿಮ್ಮ ಮೇಲಿಟ್ಟಿರುವಂತಹ ನಂಬಿಕೆಯನ್ನು ಉಳಿಸಿಕೊಳ್ಳಿ ಎಂದು ತಿಳಿಸಿ ವಿವಿಧ ಚಲನ ಚಿತ್ರನಟರ ಹಾಗೂ ರಾಜಕಾರಣಿಗಳ ಮಿಮಿಕ್ರಿಯನ್ನು ಮಾಡಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರಂಭದ ಅದ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಜ್ಯೋತಿ ಎಂ.ಜೆ ಮಾತನಾಡಿ, ಕಾಲೇಜಿನ ಅಭಿವೃದ್ಧಿಗಾಗಿ ನಮ್ಮ ಸಮಿತಿಯ ಅದ್ಯಕ್ಷರಾದ ಶಾಸಕರು ನಮ್ಮ ಎಲ್ಲಾ ಮನವಿಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಅದರಂತೆ ಮಕ್ಕಳು ಉತ್ತಮ ಅದ್ಯಯನ ಮಾಡುವ ಮೂಲಕ ಕಾಲೇಜಿಗೆ ಹಾಗೂ ನಿಮ್ಮ ಪೋಷಕರಿಗೆ ಹೆಸರನ್ನು ತರುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ವರದಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು ೮ ಚಿನ್ನದಪದಕ, ೬ ಬೆಳ್ಳಿಪದಕ, ೭ ಕಂಚಿನ ಪದಕಗಳೊಂದಿಗೆ ಸಾಧನೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿಸಿದರು. ಈ ಸಂದರ್ಭದಲ್ಲಿ ಪಿಎಲ್‌ಡಿಬ್ಯಾಂಕ್‌ನ ನಿರ್ದೇಶಕ ರಾಮಚಂದ್ರಯ್ಯ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಶಿವಣ್ಣ, ರಮೇಶ್, ಹಾಗೂ ಸಂಗೀತ ಸಂಯೋಜಕ ಸಂಜಯ್‌ಶ್ರೀವತ್ಸ ಸೇರಿದಂತೆ ಕಾರ್ಯಕ್ರಮದ ಸಂಚಾಲಕ ನಾಗರಾಜಕುಮಾರ, ಕ್ರೀಡಾ ಸಂಚಾಲಕ ಡಾ.ಶೈಲೇಂದ್ರಕುಮಾರ್, ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ.ತಿಮ್ಮೇಗೌಡ, ಸುಧರಾಣಿ, ನಾಗರಾಜು ಬಿ.ಜಿ ಸೇರಿದಂತೆ ಇತರರು ಇದ್ದರು.