ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜುಪ್ರವೇಶಾತಿ ಆರಂಭ: ಡಾ. ಚನ್ನೇಶ್

| Published : May 12 2025, 12:23 AM IST

ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜುಪ್ರವೇಶಾತಿ ಆರಂಭ: ಡಾ. ಚನ್ನೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಪ್ರವೇಶಾತಿ ಆರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತೆ ಕಾಲೇಜಿನ ಪ್ರಾಂಶುಪಾಲ ಡಾ.ಚನ್ನೇಶ್ ಹೊನ್ನಾಳಿ ತಿಳಿಸಿದರು.

ಶಿವಮೊಗ್ಗ: ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಪ್ರವೇಶಾತಿ ಆರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತೆ ಕಾಲೇಜಿನ ಪ್ರಾಂಶುಪಾಲ ಡಾ.ಚನ್ನೇಶ್ ಹೊನ್ನಾಳಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಂಜೆ ಕಾಲೇಜು ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಈ ಬಾರಿ ಈಗಾಗಲೇ 126 ಅರ್ಜಿಗಳನ್ನು ಪಡೆದುಕೊಂಡಿದ್ದು, ಕನಿಷ್ಠ 150 ವಿದ್ಯಾರ್ಥಿಗಳನ್ನು ಹೊಂದುವ ಗುರಿ ಇದ್ದು, ಬಿಕಾಂ ಮತ್ತು ಬಿಸಿಎಗೆ ಅವಕಾಶವಿದೆ. ಪ್ರತಿದಿನ ಸಂಜೆ 4.30 ರಿಂದ 7ರವರೆಗೆ ಕಾಲೇಜು ನಡೆಯುತ್ತದೆ ಎಂದರು.

ಕಾಲೇಜಿನಲ್ಲಿ ಅನುಭವಿ ಉಪನ್ಯಾಸಕರು, ಸುಸಜ್ಜಿತ ಪ್ರಯೋಗಾಲಯ, ಸಾಂಸ್ಕೃತಿಕ ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ ಮತ್ತು ರೋವರ್ಸ್‌ ಮತ್ತು ರೇಂಜರ್ಸ್‌, ವಿಶಾಲವಾದ ಕ್ರೀಡಾ ಮೈದಾನ, ಉತ್ತಮ ಕ್ಯಾಂಟೀನ್ ವ್ಯವಸ್ಥೆ, 27 ಸಾವಿರ ಪುಸ್ತಕಗಳುಳ್ಳ ಬೃಹತ್ ಗ್ರಂಥಾಲಯ, ಎನ್‌ಎಸ್‌ಪಿ ಹಾಗೂ ಎಸ್‌ಎಸ್‌ಪಿ ವಿದ್ಯಾರ್ಥಿ ವೇತನ, ಉದ್ಯೋಗ ಮಾಹಿತಿ ಕೋಶ ಇನ್ನಿತರ ಸೌಲಭ್ಯವಿದೆ ಎಂದರು.

ಪದವಿ ಮುಗಿದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದ ಮೂಲಕ ನಮ್ಮ ಕಾಲೇಜಿನ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎಂದರು.

ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಸರ್ಕಾರಿ ಕಾಲೇಜಿನಲ್ಲಿ ನಮ್ಮ ಕಾಲೇಜು ಅನೇಕ ರ್‍ಯಾಂಕ್ ಗಳನ್ನು ಪಡೆದಿದೆ. ಕ್ರೀಡೆಗೆ ಸಂಬಂಧಿಸಿದಂತೆ ವಿ.ವಿ. ಮಟ್ಟದಲ್ಲಿ ಐದು ಚಿನ್ನ, ಮೂರು ಬೆಳ್ಳಿ, ನಾಲ್ಕು ಕಂಚು ಪದಕಗಳನ್ನು ಪಡೆದು, ಕ್ರೀಡಾ ಚಟುವಟಿಕೆಯಲ್ಲೂ ಮುಂದಿದೆ. ಇನ್ನಷ್ಟು ಅಭಿವೃದ್ಧಿಗಾಗಿ ಸುಮಾರು 3.5 ಕೋಟಿ ರು. ಅನುದಾನದ ಅವಶ್ಯಕತೆ ಇದ್ದು, ಈಗಾಗಲೇ ಉನ್ನತ ಶಿಕ್ಷಣ ಸಚಿವರಿಗೆ ಖುದ್ದಾಗಿ ಭೇಟಿ ನೀಡಿ, ಮನವಿ ಸಲ್ಲಿಸಿದ್ದೇನೆ. ಗ್ರಾಮೀಣ ಭಾಗದ ಮಕ್ಕಳಿಗೆ ಈ ಕಾಲೇಜಿನಿಂದ ತುಂಬಾ ಅನುಕೂಲವಾಗುತ್ತದೆ ಎಂದರು.

ಬೆಳಗ್ಗಿನ ಕಾಲೇಜಿನಲ್ಲಿ ಕೂಡಾ 2400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, 50 ಕಾಯಂ ಉಪನ್ಯಾಸಕರು, 70 ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ಸೆಮಿಸ್ಟಾರ್ ಎಂದರೆ ಕನಿಷ್ಠ 90 ದಿನ ಪಾಠ-ಪ್ರವಚನ ನಡೆಯಬೇಕು ಎಂಬುದು ನನ್ನ ಒತ್ತಾಯ. ಇದರ ಬಗ್ಗೆ ವಿಶ್ವವಿದ್ಯಾಲಯ ಗಮನಹರಿಸಬೇಕು. ಒಂದು ಸಂಶೋಧನಾ ಕೇಂದ್ರ ಕೂಡ ಕಾಲೇಜಿಗೆ ಬೇಕು. ಈ ಬಗ್ಗೆಯೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ.ರಮೇಶ್, ಡಾ. ಸೋಮ ಶೇಖರ್, ಪ್ರೊ.ಪಾಂಡುರಂಗ, ಡಾ. ಚಕ್ರಾನಾಯ್ಕ, ಡಾ.ಎಸ್.ಎಸ್. ಪ್ರಸನ್ನ ಮತ್ತಿತರರಿದ್ದರು.