ಗುರಿ ಇಲ್ಲದ ವ್ಯಕ್ತಿ ಶವಕ್ಕೆ ಸಮನಾಗಿರುತ್ತಾನೆ, ಪ್ರತಿಯೊಬ್ಬರು ದೊಡ್ಡ ಗುರಿ ಇಟ್ಟುಕೊಂಡು, ಪಠ್ಯದ ಜೊತೆಗೆ ಪಠ್ಯತರ ವಿಷಯ ಬಗ್ಗೆ ಗಮನಹರಿಸಬೇಕು,

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ವಿದ್ಯಾರ್ಥಿಗಳು ಸ್ವಷ್ಟವಾದ ಗುರಿಯೊಂದಿಗೆ ಸಕರಾತ್ಮಕ ಚಿಂತನೆ ಮಾಡಬೇಕು ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ಎಂ. ವಿನಯ್‌ ಕುಮಾರ್‌ ಅವರು ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜನಪರ ಸಾಹಿತ್ಯ ಪರಿಷತ್ತು, ಕರ್ನಾಟಕ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ, ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಬೆಂಗಳೂರು ಇನ್ಸೈಟ್‌ ಐಎಸ್‌ ತರಬೇತಿ ಕೇಂದ್ರ , ಮಂಡ್ಯದಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ ಮಂಡ್ಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಮತ್ತು ಸ್ಪರ್ಧಾ ಪರೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗುರಿ ಇಲ್ಲದ ವ್ಯಕ್ತಿ ಶವಕ್ಕೆ ಸಮನಾಗಿರುತ್ತಾನೆ, ಪ್ರತಿಯೊಬ್ಬರು ದೊಡ್ಡ ಗುರಿ ಇಟ್ಟುಕೊಂಡು, ಪಠ್ಯದ ಜೊತೆಗೆ ಪಠ್ಯತರ ವಿಷಯ ಬಗ್ಗೆ ಗಮನಹರಿಸಬೇಕು, ಏನಾಗಬೇಕು ಅಂದುಕೊಂಡಿರುತ್ತೇವೆ ಅದನ್ನು ನಾವು ಮನಸ್ಸಿನಲ್ಲಿ ಚಿತ್ರಿಕರಿಸಿಕೊಳ್ಳಬೇಕು ಆಗ ಏನುಮಾಡಬೇಕು ಎಂದು ಕಲ್ಪನೆ ಬರಲಿದೆ ಎಂದರು.

ಮನುಷ್ಯನಲ್ಲಿ ಸೂಪ್ತ ಮನಸ್ಸು ಮತ್ತು ಜಾಗೃತ ಮನಸ್ಸುಗಳಿದ್ದು, ಸೂಪ್ತ ಮನಸ್ಸನ್ನು ಜಾಗೃತ ಮನಸ್ಸು ಜಾಗೃತಗೊಳಿಸಿ ಗುರಿ ತಲುಪಿಸುತ್ತದೆ. ಗುರಿ ತಲುಪುವುದರೊಂದಿಗೆ ನಾವು ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಸಕರಾತ್ಮಕ ಚಿಂತನೆಯನ್ನು ಮಾಡಬೇಕು ಎಂದರು.

ಸಹಜವಾಗಿ ಪರೀಕ್ಷೆ ಎದುರಿಸಬೇಕು. ಆಗ ನಮ್ಮಲ್ಲಿ ಯಾವುದೇ ಭಯವಾಗು ದೂರವಾಗುತ್ತದೆ. ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಪಡೆಯಬೇಕಾದರೆ ದಿನನಿತ್ಯ ಪತ್ರಿಕೆ ಓದುವುದು, ಸಾಹಿತ್ಯವನ್ನು ಓದುವುದು, ಭಾವಗೀತೆಯನ್ನು ಕೇಳುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಶಿಕ್ಷಣವು ಸಮಾಜವನ್ನು ಸಮಾನತೆ ಸ್ಥಿತಿಗೆ ತಲುಪಿಸುತ್ತದೆ. ಶಿಕ್ಷಣ ಕಲಿತವರು ಮಾನವೀಯ ಮೌಲ್ಯಗಳ ವಿಚಾರಕ್ಕೂ ಮಹತ್ವವನ್ನು ನೀಡಬೇಕು, ಶಿಕ್ಷಕರಿಗೆ ಗೌರವ ನೀಡಬೇಕು ಎಂದರು.

ಸಮಾಜ, ನಮ್ಮ ಸ್ನೇಹಿತರು, ಹವ್ಯಾಸ, ವಾತವರಣ, ಉಡುಪು, ಆಹಾರ ಪದ್ದತಿಗಳು ನಮ್ಮನ್ನು ನಿರ್ಧರಿಸುತ್ತದೆ. ಉತ್ತಮ ನಡವಳಿಕೆಗಳನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಭಾರತದ ಉತ್ತಮ ಪ್ರಜೆಯಾಗಬೇಕು ಎಂದರು.

ಬೆಂಗಳೂರಿನ ಇನ್ಸೈಟ್‌ ಐಎಎಸ್ ತರಬೇತಿ ಸಂಸ್ಧೆಯ ಸಂಪನ್ಮೂಲ ವ್ಯಕ್ತಿ ಶಮಂತ್‌ಕುಮಾರ್‌ ಮಾತನಾಡಿ,

ವಿದ್ಯಾರ್ಥಿಗಳಿಗೆ ಕಲಿಯುವ ಕುತೂಹಲವಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬೇಕು. ವಿದ್ಯಾರ್ಥಿಗಳು ಗುರುಗಳಿಗೆ ಗೌರವ ನೀಡುವ ಮೂಲಕ ಅವರ ಮಾರ್ಗದರ್ಶನವನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದರು.

ಬೆಂಗಳೂರಿನ ಇನ್ಸೈಟ್‌ ಐಎಎಸ್‌ ತರಬೇತಿ ಸಂಸ್ಧೆಯ ಸಂಪನ್ಮೂಲ ವ್ಯಕ್ತಿ ಪ್ರದೀಪ್‌ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸು ಕಾಣುವ ಮೂಲಕ ಸಿಕ್ಕ ಸಮಯವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಹಾಕಿಕೊಂಡ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.

ಸರ್ಕಾರಿಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಆರ್‌ ಅಶ್ವಿನಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ತಯಾರಿ ಬಗ್ಗೆ ಪ್ರತಿಷ್ಠಿತ ಸಂಸ್ಧೆಯ ಸಂಪನ್ಮೂಲ ವ್ಯಕ್ತಿಗಳು, ಸಾಹಿತಿಗಳು,

ಹಿರಿಯ ಪತ್ರಕರ್ತರು ನಮ್ಮ ಕಾಲೇಜಿಗೆ ಆಗಮಿಸಿ ಸಾಕಷ್ಟು ವಿಚಾರವನ್ನು ತಿಳಿಸಿಕೊಟ್ಟಿದ್ದಾರೆ. ಇಂತಹ ಅವಕಾಶವನ್ನುಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌,, ಜನಪರ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ. ಎಂ. ಮಹೇಶ್‌ ಚಿಕ್ಕಲ್ಲೂರು, ಡಾ. ಪ್ರೇಮ, ಕಾಲೇಜು ಉದ್ಯೋಗ ಮಾಹಿತಿ ಕೋಶ ಸಂಚಾಲಕ ಬಿ.ಎನ್‌. ಲೋಕೇಶ್‌, ನಾರಾಯಣ ಇದ್ದರು.---------------