ಸಾರಾಂಶ
- ಮಲೇಬೆನ್ನೂರು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಿವಶಂಕರ್ ಹೇಳಿಕೆ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಸ್ಥಳೀಯ ಸಂಸ್ಥೆಗಳ ಮೀಸಲಾತಿ ನಿಗದಿ ಮಾಡುವಲ್ಲಿ ಸರ್ಕಾರ ಹಾಗೂ ರಾಜಕಾರಣಿಗಳು ವಿಫಲವಾಗಿ, ಕಾಲಹರಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಆರೋಪಿಸಿದರು.ಇಲ್ಲಿಯ ಜನತಾದಳ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪುರಸಭೆ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಅವರು ಮಾತನಾಡಿದರು. ಪುರಸಭೆ ಸದಸ್ಯರಲ್ಲಿ ಎಸ್‌ಟಿ ಮಹಿಳೆ ಇಲ್ಲದ ಕಾರಣಕ್ಕೆ ಕಾನೂನು ಸಲಹೆ ಪಡೆದು ಎಸ್‌ಟಿ ಮೀಸಲಾತಿಯನ್ನು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಎಸ್‌ಟಿ ಸ್ಥಾನ ತಪ್ಪಿಸುವಲ್ಲಿ ಕಾಂಗ್ರೆಸ್‌ನವರು ಶತಾಯಗತಾಯ ಪ್ರಯತ್ನ ಮಾಡಿದರು. ಆ ಪ್ರಯತ್ನ ವಿಫಲವಾಗಿ ಹನುಮಂತಪ್ಪ ಅಧ್ಯಕ್ಷರಾಗಿದ್ದಾರೆ ಎಂದರು.
ಮಲೇಬೆನ್ನೂರು ಪುರಸಭೆಯಾಗಿ ೧೦ ವರ್ಷವಾಯಿತು. ಸರ್ಕಾರದಲ್ಲಿ ಮೂಲಸೌಕರ್ಯಕ್ಕೆ ಅನುದಾನದ ಕೊರತೆಯಿದೆ. ಸದಸ್ಯರಲ್ಲಿ ಹೊಂದಾಣಿಕೆ ಇಲ್ಲದೇ ಅಭಿವೃದ್ಧಿ ಕುಂಠಿತವಾಗಿದೆ. ಹಿಂದಿನ ಕಾಂಗ್ರೆಸ್ ಶಾಸಕರು ಅಭಿವೃದ್ಧಿಗೆ ಆದ್ಯತೆ, ಪ್ರಯತ್ನ ಮಾಡದೇ ದಿನ ಕಳೆದರು. ವಿಪಕ್ಷ ನಾಯಕರ ಪ್ರಸ್ತಾಪ ಮತ್ತು ಬರೀ ಪ್ರಸ್ತಾವನೆಗಳಿಂದ ಅಭಿವೃದ್ಧಿ ಆಗಲ್ಲ. ಆ ಪ್ರಸ್ತಾವನೆಗಳು ಜನರ ಕಣ್ಣೊರೆಸುವ ತಂತ್ರವಾಗಿದೆ ಎಂದು ದೂರಿದರು. ಇವೆಲ್ಲ ಕಾರಣಗಳಿಂದ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಶಿವಶಂಕರ್ ತಿಳಿಸಿದರು.ಇಂದು ಪಟ್ಟಣಕ್ಕೆ ಪದವಿ ಕಾಲೇಜು. ರಂಗಮಂದಿರ, ಕ್ರೀಡಾಂಗಣದ ಅಗತ್ಯವಿದೆ. ಪುರಸಭೆಗೆ ನಿವೇಶನ ಹಾಗೂ ಸುಸಜ್ಜಿತ ಕಟ್ಟಡ, ಕುಡಿಯುವ ನೀರಿನ ಅಗತ್ಯವಿದೆ. ಬಡವರಿಗೆ ಮನೆಗಳ ಹಂಚಿಕೆ ಮಾಡಲು ಆಶ್ರಯ ಕಾಲೋನಿಯಲ್ಲಿ 5 ಎಕರೆ ಗುರುತಿಸಿ ಜಿ+ ಮಾದರಿ ಮನೆಗಳ ನಿರ್ಮಿಸಲು ಕನಸು ಇತ್ತು. ಅನಂತರ ಅಧಿಕಾರಕ್ಕೆ ಬಂದ ಶಾಸಕರು, ಸಂಸದರು ಪಟ್ಟಣದ ಅಭಿವೃದ್ಧಿಗೆ ಗಮನ ನೀಡದೇ ಬಂದರು. ಇಂದಿನ ಸಂಸದರು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರ ಬಳಿ ಶಿವಮೊಗ್ಗ- ಮರಿಯಮ್ಮನಹಳ್ಳಿ ರಾಜ್ಯ ಹೆದ್ದಾರಿ ಮತ್ತು ಶಿವಮೊಗ್ಗ -ಹರಿಹರ ರೈಲು ಮಾರ್ಗ ಅಭಿವೃದ್ಧಿಪಡಿಸಲು ಶ್ರಮ ಹಾಕಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಮುಖಂಡರಾದ ಹನಗವಾಡಿ ವೀರೇಶ್, ಅಣ್ಣಪ್ಪ, ಮಹದೇವಪ್ಪ, ಸಿದ್ದೇಶ್, ಬಸವರಾಜ್, ರಂಗನಾಥ್, ಹಾಲೇಶಪ್ಪ, ಹನುಮಗೌಡ, ಕೆ.ಜಿ. ಮಂಜುನಾಥ್, ಮೀನಾಕ್ಷಮ್ಮ, ಸುನಂದಮ್ಮ, ಯೂಸೂಫ್, ಕರಿಬಸಪ್ಪ, ಆಯೂಬ್, ಪರಮೇಶ್ವರಪ್ಪ, ವಸಂತಪ್ಪ, ಕುಮಾರ್, ಜಿಗಳಿ ಹಾಲೇಶಪ್ಪ, ನಾಗರಾಜ್, ಮಹದೇವಪ್ಪ, ಮಂಜುನಾಥ್ ಹಾಗೂ ನಾಗರಿಕರು ಇದ್ದರು.- - - -೧೪-ಎಂಬಿಆರ್೨: ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಿವಶಂಕರ್ ಮಾತನಾಡಿದರು.