ಸರ್ಕಾರಿ ನೌಕರಿಯೇ ಎಲ್ಲರ ಭವಿಷ್ಯ ರೂಪಿಸುವುದಿಲ್ಲ: ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌

| Published : Apr 03 2025, 12:30 AM IST

ಸರ್ಕಾರಿ ನೌಕರಿಯೇ ಎಲ್ಲರ ಭವಿಷ್ಯ ರೂಪಿಸುವುದಿಲ್ಲ: ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಕೆಲಸವೊಂದೇ ಎಲ್ಲರ ಭವಿಷ್ಯವನ್ನೂ ರೂಪಿಸುವುದಿಲ್ಲ. ಜಗತ್ತು ವಿಶಾಲವಾಗಿದ್ದು, ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಕೌಶಲ್ಯ ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಂಡು, ವೃತ್ತಿ ಬದುಕಿನಲ್ಲಿ ತೃಪ್ತಿ ನೀಡುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ದಾವಣಗೆರೆ ವಿವಿ ಕುಲಾಧಿಪತಿ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕರೆ ನೀಡಿದರು.

ದಾವಣಗೆರೆ ವಿವಿ 12ನೇ ಘಟಿಕೋತ್ಸವ, ಪದವಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರಿ ಕೆಲಸವೊಂದೇ ಎಲ್ಲರ ಭವಿಷ್ಯವನ್ನೂ ರೂಪಿಸುವುದಿಲ್ಲ. ಜಗತ್ತು ವಿಶಾಲವಾಗಿದ್ದು, ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಕೌಶಲ್ಯ ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಂಡು,

ವೃತ್ತಿ ಬದುಕಿನಲ್ಲಿ ತೃಪ್ತಿ ನೀಡುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ದಾವಣಗೆರೆ ವಿವಿ ಕುಲಾಧಿಪತಿ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕರೆ ನೀಡಿದರು.

ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾಲಯದ ಜ್ಞಾನಸೌಧಲ್ಲಿ ಬುಧವಾರ 12ನೇ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರ

ದಾನ ಮಾಡಿ ಮಾತನಾಡಿ, ಯುವ ಜನರು ಸರ್ಕಾರಿ ಉದ್ಯೋಗಗಳನ್ನೇ ನೆಚ್ಚಿಕೊಳ್ಳದೇ, ತೃಪ್ತಿ ನೀಡುವ ಆಯ್ಕೆಯ ನಿರ್ಧಿಷ್ಟ ಕ್ಷೇತ್ರಗಳಲ್ಲಿ ಕೌಶಲ್ಯ ಬೆಳೆಸಿಕೊಂಡು, ವೃತ್ತಿ ಜೀವನದಲ್ಲಿ ಭವಿಷ್ಯ ಕಂಡುಕೊಳ್ಳುವುದು ಸೂಕ್ತ ಎಂದರು.

ಸಾರ್ವಜನಿಕ ವಲಯದಲ್ಲಿ ಉದ್ಯೋಗಾಕಾಂಕ್ಷಿ ಯುವ ಜನರ ಸಂಖ್ಯೆ ದೊಡ್ಡದಾಗಿದ್ದು, ಎಲ್ಲರಿಗೂ ಸರ್ಕಾರಿ ಉದ್ಯೋಗ ಒದಗಿಸುವುದು ಬಹುದೊಡ್ಡ ಸವಾಲು, ಕಷ್ಟದ ಕೆಲಸವಾಗಿದೆ. ಜನ

ಸಂಖ್ಯೆಗೆ ತಕ್ಕಂತೆ ಉದ್ಯೋಗ ಸೃಜನೆಯೂ ಕಷ್ಟಕರವಾಗಿದೆ. ಸರ್ಕಾರಿ ಉದ್ಯೋಗವನ್ನೇ ನೆಚ್ಚಿಕೊಳ್ಳದೇ, ಪ್ರತಿಭೆ, ಕೌಶಲ್ಯ ಮೈಗೂಡಿಸಿಕೊಂಡು ಜೀವನ ರೂಪಿಸಿಕೊಳ್ಳುವತ್ತ ಗಮನ ಹರಿಸಿ ಎಂದು ಕಿವಿಮಾತು ಹೇಳಿದರು.

ದಿನದಿನಕ್ಕೂ ಹೆಚ್ಚುತ್ತಿರುವ ಪರಿಸರ ನಾಶದಿಂದಾಗಿ ಜಾಗತಿಕ ತಾಪಮಾನವೂ ಹೆಚ್ಚುತ್ತಿದೆ. ಇದರಿಂದ ಹಲವಾರು ಸಮಸ್ಯೆಗಳೂ ಉಲ್ಭಣಿಸುತ್ತಿವೆ. ಯುವ ಜನರು ಸಮುದಾಯದ ಸಹಭಾ

ಗಿತ್ವದಲ್ಲಿ ಸಮಸ್ಯೆಯ ಮೂಲವನ್ನರಿತು, ಅದಕ್ಕೆ ಪರಿಹಾರ ಕಂಡು ಹಿಡಿಯಲು ಶ್ರಮಿಸಬೇಕು ಎಂದು ತಿಳಿಸಿದರು.

ಪ್ರಸ್ತುತ ಡಿಜಿಟಲ್ ಯುಗದಲ್ಲಿ ದೈಹಿಕ ಶ್ರಮ ಕಡಿಮೆಯಾಗುತ್ತಿದ್ದು, ಮಾನಸಿಕ ಒತ್ತಡ ಹೆಚ್ಚುತ್ತಲೇ ಇದೆ. ಮಾನಸಿಕ ಒತ್ತಡ ನಿವಾರಿಸಿ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ, ವ್ಯಾ

ಯಾಮಗಳು ಮಹತ್ವದ ಪಾತ್ರ ವಹಿಸುತ್ತವೆ. ಯೋಗವು ಮಾನಸಿಕ ಒತ್ತಡ ನಿವಾರಣೆಗೆ ಉತ್ತಮ ಪರಿಹಾರವಾಗಿದೆ. ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯವ

ನ್ನು ಹೊಂದಲು ಸಾಧ್ಯ. ಶೈಕ್ಷಣಿಕ ಉನ್ನತಿ ಜೊತೆಗೆ ಗುರು-ಹಿರಿಯರು, ಹೆತ್ತವರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.

ಬೇರೆಯವರ ನಿರೀಕ್ಷೆ, ಸಾಧನೆ ಅನುಸರಿಸದೇ, ನಿಮ್ಮದೇ ಸ್ವಂತಿಕೆ, ಸಾಮರ್ಥ್ಯದ ಮೂಲಕ ಇತರರಿಗೆ ಮಾದರಿಯಾಗಬೇಕು. ಹಿರಿಯರ ಅನುಭವ, ಸಲಹೆಗಳಿಗೆ ಗೌರವಿಸುವುದನ್ನು ರೂ

ಢಿಸಿಕೊಳ್ಳಬೇಕು. ಸಮಸ್ಯೆಗಳಿಗೆ ಪ್ರತಿರೋಧವೇ ಉತ್ತರವಲ್ಲ. ಪರಿಹಾರದ ಹಾದಿಯನ್ನು ಕಂಡುಕೊಳ್ಳುವುದು ಸಹ ಜಾಣತನವಾಗಿದೆ. ಅಂತಹ ದಾರಿಯನ್ನು ಹುಡುಕುವತ್ತ ನೀವೆಲ್ಲರೂ ಮುನ್ನಡೆಯಬೇಕು. ಅತ್ಯುತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ದಾವಿವಿಯಲ್ಲಿ 133 ಸಮರ್ಪಿತ ಅಧ್ಯಾಪಕರು ಅಧ್ಯಯನ, ಅಧ್ಯಾಪನ, ಸಂಶೋಧನೆ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ತೊಡಗಿದ್ದಾರೆ. ಅಂತಹವರ ಗಮನಾರ್ಹ ಸಂಶೋಧನೆ

ಯ ಫಲಿತಾಂಶವೂ ಉತ್ತಮವಾಗಿದೆ. ಎನ್ಐಆರ್‌ಎಫ್ ರ್ಯಾಕಿಂಗ್‌ನಲ್ಲಿ 51ರಿಂದ 100ರ ಶ್ರೇಯಾಂಕದಲ್ಲಿ ಸ್ಥಾನ ಪಡೆದಿದೆ. ವಿವಿಧ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ನೀಡುತ್ತಿರುವ ದಾವಿವಿ ಈಚೆಗೆ ಎಂಸಿಎ ಕೋರ್ಸ್ ಆರಂಭಿಸಿದೆ. ಪರೀಕ್ಷೆ ನಂತರ ಕೇವಲ 4 ಗಂಟೆಯಲ್ಲೇ ಫಲಿತಾಂಶ ಪ್ರಕಟಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು ದಾವಣಗೆರೆ ವಿವಿ ಹೆಗ್ಗಳಿಕೆ ಎಂದು ಶ್ಲಾಘಿಸಿದರು. 2ಕೆಡಿವಿಜಿ7: ದಾವಣಗೆರೆ ಶಿವಗಂಗೋತ್ರಿಯ ದಾವಣಗೆರೆ ವಿವಿ 12ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾಗಿನೆಲೆ ಶ್ರೀಗಳು, ಎಸ್.ಎ.ರವೀಂದ್ರನಾಥ, ಪ್ರೊ.ಎಸ್.ಆರ್‌.ನಿರಂಜನ್‌ರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.