ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ: ರಾಜ್ಯ ಸರ್ಕಾರ ಬಿಟ್ಟಿ ಭಾಗ್ಯಗಳ ಬೆನ್ನತ್ತಿ ಅವುಗಳನ್ನು ಪೂರ್ಣವಾಗಿ ಫಲಾನುಭವಿಗಳಿಗೆ ತಲುಪಿಸದಿರುವುದು ಜನತೆಗೆ ಗ್ಯಾರಂಟಿ ನೀಡಿ ಸರ್ಕಾರ ಮೋಸ ಮಾಡಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.ರಬಕವಿಯ ಶ್ರೀಶಂಕರಲಿಂಗ ಸರ್ಕಲ್‌ನಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನೌಕರರಿಗೆ ಸಂಬಳ ನೀಡದ ಸರ್ಕಾರದ ಮಾತಿಗೆ ಜಿಲ್ಲೆಯ ಜನ ಮರುಳಾಗಬಾರದು. ದೇಶದ ಭದ್ರತೆ ಮತ್ತು ಸ್ವಾಭಿಮಾನ ಎತ್ತಿ ಹಿಡಿದು ದೇಶ ಅಗ್ರ ನಾಯಕತ್ವ ಹೊಂದಲು ಶ್ರಮಿಸಿದ ಪ್ರಧಾನಿ ಮೋದಿಯವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ:
ರಾಜ್ಯ ಸರ್ಕಾರ ಬಿಟ್ಟಿ ಭಾಗ್ಯಗಳ ಬೆನ್ನತ್ತಿ ಅವುಗಳನ್ನು ಪೂರ್ಣವಾಗಿ ಫಲಾನುಭವಿಗಳಿಗೆ ತಲುಪಿಸದಿರುವುದು ಜನತೆಗೆ ಗ್ಯಾರಂಟಿ ನೀಡಿ ಸರ್ಕಾರ ಮೋಸ ಮಾಡಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.ರಬಕವಿಯ ಶ್ರೀಶಂಕರಲಿಂಗ ಸರ್ಕಲ್‌ನಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನೌಕರರಿಗೆ ಸಂಬಳ ನೀಡದ ಸರ್ಕಾರದ ಮಾತಿಗೆ ಜಿಲ್ಲೆಯ ಜನ ಮರುಳಾಗಬಾರದು. ದೇಶದ ಭದ್ರತೆ ಮತ್ತು ಸ್ವಾಭಿಮಾನ ಎತ್ತಿ ಹಿಡಿದು ದೇಶ ಅಗ್ರ ನಾಯಕತ್ವ ಹೊಂದಲು ಶ್ರಮಿಸಿದ ಪ್ರಧಾನಿ ಮೋದಿಯವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಎಸ್ಸಿ, ಎಸ್ಟಿಗಳಿಗೆ ಮೀಸಲಿಟ್ಟಿದ್ದ ₹11 ಸಾವಿರ ಕೋಟಿ ಮೊತ್ತವನ್ನು ಗ್ಯಾರಂಟಿಗಳಿಗೆ ಬಳಸಿ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ. ರಾಜ್ಯದ ಜನತೆಯ ಮೇಲೆ ₹ 20 ಸಾವಿರ ಕೋಟಿ ಸಾಲದ ಹೊರೆ ಹೊರಿಸುವ ಮೂಲಕ ಗ್ಯಾರಂಟಿ ಭಾಗ್ಯಗಳನ್ನು ನಿಯಮಿತವಾಗಿ ಜನತೆಗೆ ನೀಡದೇ ಮೋಸ ಮಾಡಲಾಗುತ್ತಿದೆ ಎಂದು ದೂರಿದ ಅವರು, ದೇಶ, ಸಂಸ್ಕೃತಿ ಮತ್ತು ಹಿಂದುತ್ವದ ಉಳಿವಿಗೆ ಪ್ರಧಾನಿ ಮೋದಿ ಅವಶ್ಯಕವಾಗಿದೆ. ಗೆಲವಿನ ನಂತರ ಪೂರ್ಣ ಸಿನೆಮಾ ನೋಡಲಿದ್ದೀರಿ. ಇದೂವರೆಗೆ ಬರೀ ಟ್ರೇಲರ್ ಮಾತ್ರ ನೋಡಿದ್ದೀರಿ ಎಂದು ಹೇಳಿದರು.
ಮುಂದಿನ ಅವಧಿಯಲ್ಲಿ ಪ್ರಧಾನಿ ಮೋದಿ ಸರ್ವರ ಪ್ರಗತಿಯ ಜೊತೆಗೆ ಕಾಂಗ್ರೆಸ್ ಹಿಂದಿನಿಂದ ಹೇಳುತ್ತಿರುವ, ಮುಸ್ಲಿಮರನ್ನು ದೇಶದಿಂದ ಹೊರಹಾಕುತ್ತಾರೆ. ಸಂವಿಧಾನ ಬದಲಾಯಿಸುತ್ತಾರೆಂಬ ಮೊದಲಾದ ಹಸಿ ಸುಳ್ಳುಗಳನ್ನು ಹೇಳುತ್ತಾ ಬಂದಿದೆ. ಅನ್ನ, ಗಾಳಿ, ನೀರು ಸೇವಿಸಿ ರಾಷ್ಟ್ರ ವಿರೋಧಿ ಘೋಷಣೆ ಕೂಗುವ ದುರುಳರಿಗೆ ಮತ್ತು ತುಷ್ಟೀಕರಣ ನೀತಿ ಅನುಸರಿಸುವ ಪಕ್ಷಗಳಿಗೆ ತಕ್ಕ ಪ್ರತಿಫಲ ನೀಡಲಿದ್ದಾರೆ. ವಿಶ್ವದಲ್ಲಿಯೇ ನಂ.3 ಆರ್ಥಿಕ ಶಕ್ತಿಯಾಗಿ ಭಾರತ ರೂಪುಗೊಳ್ಳಲು ಬಿಜೆಪಿ ಅಭ್ಯರ್ಥಿ ಗದ್ದಿಗೌಡರಿಗೆ ಮತ ನೀಡುವಂತೆ ಕೋರಿದರು.-----------------ಕೋಟ್
ಗದ್ದಿಗೌಡರ ಯಾವುದೇ ಕೆಲಸ ಮಾಡಿಲ್ಲವೆಂದು ಟೀಕಿಸುವ ಸಚಿವ ಶಿವಾನಂದ ಪಾಟೀಲ ತಮ್ಮ ಅಧೀನ ಇಲಾಖೆಯಲ್ಲಿ ಕಳೆದ 7 ತಿಂಗಳಿಂದ ಕಚ್ಚಾವಸ್ತು ನೀಡಿಲ್ಲ. ಇದರಿಂದ ಬದುಕಲು ಕೈಮಗ್ಗ ನೇಕಾರರು ಹರಸಾಹಸ ಪಡುತ್ತಿದ್ದಾರೆ. ಆದರೂ, ಅವರತ್ತ ಚಿತ್ತ ಹರಿಸದೇ ಅತ್ತ ವಿಜಯಪುರಕ್ಕೂ ಸಲ್ಲದ, ಇತ್ತ ಬಾಗಲಕೋಟೆಗೂ ಸಲ್ಲದ ಮಗಳು ಸಂಯುಕ್ತಳನ್ನು ಬಾಗಲಕೋಟ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿಸಿದ್ದಾರೆ. ಎಲ್ಲ ನೇಕಾರರು ಮತ್ತು ಕಾರ್ಮಿಕರು ತಮ್ಮತ್ತ ಕಣ್ಣೆತ್ತಿ ನೋಡದ ಸಚಿವನಿಗೆ ಮತ್ತು ಗಜಕೇಸರಿ ಯೋಗದ ಮಗಳಿಗೆ ಗಜಮು ನಿಲ್ಲಿಸಿ, ಸಂಭಾವಿತ ಸಂಸದ ಪಿ.ಸಿ.ಗದ್ದಿಗೌಡರಗೆ ಬಹುಮತದ ಬೆಂಬಲ ನೀಡಬೇಕು.ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ಶಾಸಕ.